ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡಿಯುವ ಕಲೆ ಮಹಿಳೆಯರಿಂದ ಕಲಿತೆ : ಮೋದಿ

By Mahesh
|
Google Oneindia Kannada News

ನವದೆಹಲಿ, ಏ.8: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಫಿಕ್ಕಿ(FICCI) ಮಹಿಳಾ ವಿಭಾಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಮಹಿಳೆಯರ ಪಾತ್ರ, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆ, ಗುಜರಾತಿನ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ವಿಸ್ತಾರವಾಗಿ ವಿವರಿಸಿದ್ದಾರೆ.

ಉದ್ಯಮಿಯಾಗಿ ಮಹಿಳೆಯರು ಹೇಗೆ ಎಲ್ಲವನ್ನು ನಿಭಾಯಿಸಬಲ್ಲರು, ಸಣ್ಣ ಉದ್ದಿಮೆಗಳನ್ನು ಕಡೆಗಣಿಸುತ್ತಿರುವ ರಾಜ್ಯಗಳ ಅಭಿವೃದ್ಧಿ ಕುಂಠಿತ ಹೇಗೆ ಆಗುತ್ತಿದೆ. ಆಧುನಿಕ ಭಾರತದಲ್ಲಿ ನಮ್ಮ ಅಮ್ಮಂದಿರ ಕೊಡುಗೆ ಎಷ್ಟು ಅವಶ್ಯವಾಗಿದೆ ಎಂಬುದನ್ನು ನರೇಂದ್ರ ಮೋದಿ ವಿವರಿಸಿದರು. ನಮೋ ಭಾಷಣದ ಮುಖ್ಯಾಂಶಗಳು ನಿಮ್ಮ ಮುಂದೆ:

* ಎಲ್ಲರಂತೆ ನನ್ನಲ್ಲೂ ಅನೇಕ ನ್ಯೂನ್ಯತೆ ಇದೆ. ಆದರೆ, ನನಗೆ ಸಿಕ್ಕ ಸಂಸ್ಕಾರದಿಂದ ನನ್ನ ನ್ಯೂನ್ಯತೆಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದೆ. ಸಮಾಜದಲ್ಲಿ ಕೆಟ್ಟ ಮನುಷ್ಯ ಎನಿಸಿದವರಲ್ಲೂ ಒಳ್ಳೆ ಗುಣಗಳಿರುತ್ತದೆ. ಕೆಟ್ಟ ಗುಣಗಳನ್ನು ತೊಡೆದು ಹಾಕಿ ಒಳ್ಳೆಯ ಗುಣ ಅಳವಡಿಸಿಕೊಳ್ಳುವುದನ್ನು ಕಲಿಯಬೇಕಿದೆ.

* ಗಂಗಾ ಎಂಬ ಮಹಿಳೆ 14ನೇ ವರ್ಷಕ್ಕೆ ವಿಧವೆಯಾದರು. ಆದರೆ, ತಾನೇ ಕಷ್ಟಪಟ್ಟು ಓದಿ, ಉದ್ಯಮದಲ್ಲಿ ತೊಡಗಿಕೊಂಡರು ಸಮಾಜದಲ್ಲಿ ಘನತೆ ಗಳಿಸಿದರು ಎಂಬುದರ ಬಗ್ಗೆ ಮಹಾತ್ಮಾ ಗಾಂಧೀಜಿ ಕಥೆ ಹೇಳಿರುವುದನ್ನು ನೀವು ಕೇಳಿರುತ್ತೀರಿ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕಾಲಿಟ್ಟ ತಕ್ಷಣ ಗಾಂಧೀಜಿ ಅವರನ್ನು ಭೇಟಿ ಮಾಡಿ ಸಬರಮತಿ ಆಶ್ರಮಕ್ಕೆ ಆಹ್ವಾನಿಸಿದರು. ಗಾಂಧೀಜಿ ಕೈಗೆ ಚರಕ ನೀಡಿದ್ದು ಇದೇ ಗಂಗಾ ಮಾಯಿ ಎಂಬುದನ್ನು ಮರೆಯುವಂತಿಲ್ಲ.
ಭಾಷಣದ ಮುಂದಿನ ಸಾರಾಂಶವನ್ನು ಚಿತ್ರ ಸರಣಿಯಲ್ಲಿ ಓದಿ:

ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಮಹಿಳಾ ಮೀಸಲಾತಿ ಮಸೂದೆ ಬಗ್ಗೆ: ಗುಜರಾತ್ ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಸ್ಥಳೀಯ ಆಡಳಿತದಲ್ಲಿ ಶೇ 50ರಷ್ಟು ಮೀಸಲಾತಿ ಒದಗಿಸುವ ಮಸೂದೆ ಅಂಗೀಕಾರ ಸಿಕ್ಕಿದೆ. ಆದರೆ, ರಾಜ್ಯಪಾಲರು ಇದಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ದುರಂತವೆಂದರೆ ಮಹಿಳಾ ರಾಜ್ಯಪಾಲರನ್ನು ನಾವು ಹೊಂದಿದ್ದೇವೆ.

ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಗೀರ್ ಅರಣ್ಯದಲ್ಲಿ ಪ್ರವಾಸಿಗರಿಗೆ ಸಿಂಹಗಳನ್ನು ತೋರಿಸಲು ಮಹಿಳೆಯರನ್ನು ನೇಮಿಸಲು ಯೋಜಿಸಲಾಗಿದೆ. ಸಿಂಹದ ನಡಿಗೆಯಿಂದ ಪ್ರಭಾವಿತರಾಗುತ್ತಾರೋ ಇಲ್ಲವೋ ನಮ್ಮ ಮಹಿಳೆಯರಿಗೆ ಮಾರು ಹೋಗುವುದಂತೂ ನಿಜ

* ನಮ್ಮ ಸಂಸ್ಕೃತಿಯಲ್ಲಿ ತಾಯಿ, ಗಂಗಾ ನದಿ ಹಾಗೂ ಗೋವಿಗೆ ಸಮಾನ ಗೌರವ ಸಲ್ಲಿಸಲಾಗುತ್ತದೆ.
ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಎಂಬುದರ ಬಗ್ಗೆ ಫಿಕ್ಕಿ ಸಂಶೋಧನೆ ನಡೆಸಿ ಒಂದು ವೆಬ್ ತಾಣ ನಿರ್ಮಿಸಬೇಕು. ಇದರಲ್ಲಿ ಸಾಧಕಿಯರ ಕಥೆ ಇರಬೇಕು ಎಂದು ಮೋದಿ ಸಲಹೆ ನೀಡಿದರು.
* ಗುಜರಾತಿನಲ್ಲಿ 1600 ಕಿ.ಮೀ ಕರಾವಳಿ ಇದೆ. ಪ್ರತಿ ವರ್ಷ 6 ತಿಂಗಳು ಸಾಗರ ತೀರ ಬಂದ್ ಆಗಿರುತ್ತದೆ. ಮಹಿಳೆಯರಿಗೆ ಈ ವೇಳೆ ಬಿಡುವು ಇರುತ್ತದೆ. ಈ ಸಮಯವನ್ನು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ, ಈಗ ಫಾರ್ಮಾ ಕಂಪನಿಗೆ ಸಹಕಾರಿಯಾಗಿ ಕಡಲ ತೀರದ ಮಹಿಳೆಯರು ನಿಂತಿದ್ದಾರೆ.

ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಲಿಜ್ಜತ್ ಪಾಪಡ್ ಎಲ್ಲರಿಗೂ ಗೊತ್ತಿದೆ. 80 ರು ಬಂಡವಾಳದಲ್ಲಿ ಆರಂಭವಾದ ಈ ಸಂಸ್ಥೆ ಸಂಪೂರ್ಣ ಮಹಿಳೆಯರಿಂದ ಬೆಳದ ಸಂಸ್ಥೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೊಂದು ಬೇಕಿಲ್ಲ.

* ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಮಹಿಳೆಯರನ್ನು ಕಡೆಗಣಿಸುವುದು ಸರಿಯಲ್ಲ. ಉದ್ಯಮಗಳಲ್ಲಿ ಉನ್ನತ ಸ್ಥಾನದಲ್ಲಿ ಮಹಿಳೆಯರಿದ್ದರೆ ಸಮತೋಲನ ಸಾಧಿಸಲು ಸಾಧ್ಯ.

ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಅಹಮದಾಬಾದಿನಲ್ಲಿ ಜಸ್ಸುಬೇನ್ ಪಿಜ್ಜಾ ಸಕತ್ ಫೇಮಸ್, ಶಿಕ್ಷಿತ ಯುವಕರು ಕೂಡಾ ಪಿಜ್ಜಾಗಾಗಿ ಕಾದಿರುತ್ತಾರೆ. ಇದು ಯಾರು ಜಸ್ಸುಬೇನ್ , ಕಲಾವತಿ ರೀತಿ ಮೋದಿಗೆ ಏನು ಸಂಬಂಧ ಎಂದು ಮಾಧ್ಯಮ ಮಿತ್ರರು ಹುಡುಕುವ ಮುನ್ನ ಸತ್ಯ ಹೇಳುತ್ತೇನೆ. ಜಸ್ಸುಬೇನ್ ಈಗ ನಮ್ಮೊಂದಿಗಿಲ್ಲ. ಆಕೆ ಅಗಲಿ 5 ವರ್ಷ ಕಳೆದಿದೆ. ಆದರೆ ಆಕೆ ತಯಾರಿಸಿದ ಪಿಜ್ಜಾ ಈಗ ಮಾರುಕಟ್ಟೆಯಲ್ಲಿ ಜನಪ್ರಿಯತೆ ಉಳಿಸಿಕೊಂಡಿದೆ.

ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಭಾರತೀಯ ಮಹಿಳೆಯರು ಮನೆಯಲ್ಲಿರಲು ಲಾಯಕ್ ಎಂದು ಗೃಹಿಣಿಯಾಗಿ ಮಾತ್ರ ಪಾಶ್ಚಿಮಾತ್ಯರು ಕಾಣುತ್ತಾರೆ. ಆದರೆ, ನಮ್ಮ ಬುಡಕಟ್ಟು ಜನಾಂಗ, ಹಿಂದುಳಿದ ವರ್ಗದ ಮಹಿಳೆಯರೇ ಹೈನು ಉದ್ಯಮ, ಅಮುಲ್ ನಂಥ ಸಂಸ್ಥೆ ಯಶಸ್ಸಿಗೆ ಕಾರಣರಾಗಿದ್ದು ಎಂಬುದು ಅವರಿಗೆ ತಿಳಿದಿಲ್ಲ.

ನಮೋ ಭಾಷಣದ ಸಾರಾಂಶ

ನಮೋ ಭಾಷಣದ ಸಾರಾಂಶ

* ಗುಜರಾತಿನಲ್ಲಿ 300ಕ್ಕೂ ಅಧಿಕ ಗ್ರಾಮಗಳಲ್ಲಿ ಮಹಿಳೆಯರೇ ಉದ್ಯಮ ನಡೆಸುತ್ತಿದ್ದಾರೆ. ನಿರ್ಣಯ ಕೈಗೊಳ್ಳುವ ಅಧಿಕಾರ ಅವರ ಕೈಲಿ ಮಾತ್ರ ಇದೆ ಎನ್ನಲು ಹೆಮ್ಮೆ ಎನಿಸುತ್ತದೆ.
* ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲೀಕರಣ ಸಂದರ್ಭದಲ್ಲಿ ತಾಯಿ ಹೆಸರು ಸೇರಿಸದಿರುವುದು ಅಕ್ಷಮ್ಯ. ತಾಯಿ ಎಂದರೆ ಸತ್ಯ. ತಂದೆ ಎಂದರೆ ನಂಬಿಕೆ ಎಂಬ ಮಾತಿಗೆ ಬೆಲೆ ಇಲ್ಲವೇ ಎಂದು ಮೋದಿ ಪ್ರಶ್ನಿಸಿದ್ದಾರೆ.
* ಫಿಕ್ಕಿ ಯಲ್ಲಿ ಭಾಷಣ ಮಾಡಲು ಸಾಧ್ಯವಾಗಿದ್ದು ಕೂಡಾ ಮಹಿಳೆಯರ ಒತ್ತಾಯದ ಮೇರೆಗೆ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ಫಿಕ್ಕಿ ಮಹಿಳೆಯರು ನನ್ನನ್ನು ಸಂಪರ್ಕಿಸಿ ಆಹ್ವಾನ ನೀಡಿದ್ದನ್ನು ಮರೆಯುವಂತಿಲ್ಲ.

English summary
NaMo addresses FICCI Ladies Wing : Modi says the Lijjat Paapad project started with Rs 80 as initial capital. Today, run entirely by women, the company is worth billions. Gujarat CM Modi said he was contacted by FICCI-related women on Facebook and Twitter in large numbers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X