ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗಾಗಿ ದಿಟ್ಟ ಹೆಜ್ಜೆ ಹಾಕಿ: BPAC

By Mahesh
|
Google Oneindia Kannada News

March for Bangalore BPAC event
ಬೆಂಗಳೂರು, ಏ.7: ರಾಜಕೀಯ ಎಲ್ಲಾ ಸಮಸ್ಯೆಗಳಿಗೂ ಮೂಲ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ. ಸತ್ಯವೆಂದರೆ ರಾಜಕೀಯ ಸಮಸ್ಯೆಗಳಿಗೆ ಪರಿಹಾರವೂ ಹೌದು. ಉತ್ತಮ ಬೆಂಗಳೂರಿಗಾಗಿ ನಾಲ್ಕು ಹೆಜ್ಜೆ ಇಡಿ ಬದಲಾವಣೆಯನ್ನು ಕಾಣಿರಿ ಎಂದು ಬೆಂಗಳೂರು ರಾಜಕೀಯ ಸಂಚಾಲನಾ ಸಮಿತಿ ಸದಸ್ಯ ಮೋಹನ್ ದಾಸ್ ಪೈ ಕರೆ ನೀಡಿದ್ದಾರೆ.

ನಾನು ಬೆಂಗಳೂರು ರಾಜಕೀಯ ಸಂಚಾಲನಾ ಸಮಿತಿ (ಬೆಂರಾಸಂಸ) ವನ್ನು ಬೆಂಬಲಿಸುತ್ತೇನೆ. ರಸ್ತೆಗಳಾಗಿರಲಿ, ವಾಹನ ಸಂದಣಿಯಾಗಲಿ, ತ್ಯಾಜ್ಯವಾಗಲಿ, ಸುರಕ್ಷತೆಯಾಗಲಿ, ಉದ್ಯೋಗವಕಾಶಗಳಾಗಲಿ ಮತ್ತು ಇನ್ನೂ ಹೆಚ್ಚಿನ ವಿಷಯಗಳಾಗಲಿ.... ನಾವೆಲ್ಲರೂ ಸೇರಿ ಬೆಂಗಳೂರನ್ನು ಒಂದು ಒಳ್ಳೆಯ ತಾಣವಾಗಿಸೋಣ...

ನಾವು ಯಾವಾಗಲೂ ರಾಜಕೀಯವನ್ನು ಸಮಸ್ಯೆ ಎನ್ನುತ್ತೇವೆ. ಆದರೆ ರಾಜಕೀಯ ಪರಿಹಾರವೂ ಹೌದು. ನಾವು ಸಮಸ್ಯೆಯಲ್ಲಿ ತೊಡಗಿಸಿಕೊಳ್ಳಬೇಕು, ಮತದಾರರಾಗಿ ನೊಂದಾಯಿಸಿಕೊಳ್ಳಬೇಕು ಹಾಗು ಸರಿಯಾದ ರಾಜಕೀಯಕ್ಕೆ/ರಾಜಕಾರಣಿಗೆ ಮತ ಚಲಾಯಿಸಬೇಕು. ಇದು ಬೆಂಗಳೂರನ್ನು ಉತ್ತಮವಾಗಿಸುವತ್ತ ಪರಿಣಮಿಸುತ್ತದೆ.

ಸದ್ಯಕ್ಕೆ ನಿರೀಕ್ಷೆ ಬೇಡ! ಬೆಂರಾಸಂಸ ವೇದಿಕೆಯಲ್ಲಿ ಸೇರೋಣ. ಮತದಾನ ಜಾಗೃತಿಯಲ್ಲಿ ತೊಡಗೋಣ ಎಂದು ಪೈ ಹೇಳಿದ್ದಾರೆ.

ಇಂದಿನಿಂದ ನೀವೂ ಭಾಗವಹಿಸಬಹುದು. ಹೇಗೆಂದರೆ:
* ಶನಿವಾರ, ಏಪ್ರಿಲ್ 13 ರಂದು, "ಬೆಂಗಳೂರಿಗಾಗಿ ನಡೆಯಿರಿ" ಕಾರ್ಯಕ್ರಮ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ನಮ್ಮೊಡನೆ ಬನ್ನಿ, ಭಾಗವಹಿಸಿ

* ಬೆಂರಾಸಂಸ(BPAC) ಅನ್ನು ಬೆಂಬಲಿಸಲು ನನ್ನೊಡನೆ ಸಹಕರಿಸಿ
* ಮುಖಪುಸ್ತಕ (facebook) ದಲ್ಲಿ - https://www.facebook.com/BPACofficial
* ಇ-ಮೈಲ್ ಕಳಿಸಿ - [email protected]
* 8880776655 ಗೊಂದು ಮಿಸ್ಡ್ ಕಾಲ್ ಮಾಡಿ
* ನಮ್ಮ ಜಾಲತಾಣ www.bpac.in ಭೇಟಿ ಕೊಡಿ ಹಾಗೂ ನಮ್ಮ ಉದ್ದೇಶಗಳನ್ನು ತಿಳಿಯಿರಿ

ಎಲ್ಲಿಂದ ಎಲ್ಲಿ ತನಕ: ಕಂಠೀವರ ಸ್ಟೇಡಿಯಂನಿಂದ ಫ್ರೀಡಂ ಪಾರ್ಕ್, ಬೆಂಗಳೂರು
ಯಾರು ಬರಲಿದ್ದಾರೆ?: ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ, ಬಿಪ್ಯಾಕ್ ಉಪಾಧ್ಯಕ್ಷ ಮೋಹನ್ ದಾಸ್ ಪೈ

ನಿಮ್ಮೊಟ್ಟಿಗೆ 15-20 ಜನ ಸ್ನೇಹಿತರನ್ನು ಕರೆ ತನ್ನಿ BPAC ನಿಂದ ಏನು ಬದಲಾವಣೆ ಸಾಧ್ಯ ಎಂಬುದನ್ನು ಪ್ರತ್ಯಕ್ಷ ಕಾಣುವಿರಂತೆ.
"ಬೆಂಗಳೂರಿಗಾಗಿ ನಡೆಯಿರಿ" ಕಾರ್ಯಕ್ರಮದ ಬಗ್ಗೆ ತಿಳಿಸಿ. [ಬಿಪ್ಯಾಕ್ ಬಗ್ಗೆ ಇನ್ನಷ್ಟು ಮಾಹಿತಿಗೆ ಕ್ಲಿಕ್ ಮಾಡಿ]

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Support Bangalore Action Committee March for Bangalore a awareness on voting - Apr 13 at 4:00 pm from Kanteerava stadium. you often hear that politics is the problem. The truth is that politics can also be the solution. Register to vote and vote on May 5 in upcoming assembly election said Mohandas Pai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X