ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮಗಳಿಗೂ ಆಯೋಗದ ನೀತಿ ಸಂಹಿತೆ

|
Google Oneindia Kannada News

publication
ನವದೆಹಲಿ, ಏ.5 : ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಅನೇಕ ನೀತಿ ರೂಪಿಸಿದ್ದ ಆಯೋಗ ಮಾಧ್ಯಮಗಳಿಗೂ ಕೆಲವೊಂದು ನಿರ್ಭಂಧಗಳನ್ನು ವಿಧಿಸಿ ಆದೇಶ ಹೊರಡಿಸಿದೆ.

ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಉಪ ಕಾರ್ಯದರ್ಶಿ, ಪದ್ಮಾ ಆಂಗೋ ಚುನಾವಣೆಗೆ 48 ಗಂಟೆಗಳ ಮೊದಲು ಮುತದಾನ ಪೂರ್ವ ಸಮೀಕ್ಷೆ, ಮತ ಕೇಳುವ ಜಾಹೀರಾತು ಸೇರಿದಂತೆ ಚುನಾವಣೆ ಮೇಲೆ ಪ್ರಭಾವ ಬೀರುವ ಯಾವುದೇ ವರದಿಗಳನ್ನು ಪ್ರಸಾರ ಮಾಡಬಾರದು ಎಂದು ನಿರ್ಭಂದ ವಿಧಿಸಿದೆ.

ಈ ನಿಯಮವನ್ನು ಉಲ್ಲಂಘಿಸಿದವ ಮಾಧ್ಯಮದವರಿಗೆ ಎರಡು ವರ್ಷಗಳ ಜೈಲು ಮತ್ತು ದಂಡ ವಿಧಿಸುವ ಅಧಿಕಾರ ಕಾನೂನಿನಲ್ಲಿದ ಎಂದು ಹೇಳಿದರು. ಚುನಾವಣೆ ಪ್ರಚಾರದ ವರದಿಗಳ ಸಂದರ್ಭದಲ್ಲಿ ಉತ್ಪ್ರೇಕ್ಷೆಯ ವರದಿ ಮಾಡಬಾರದು ಎಂದು ಆಯೋಗ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಮಾಧ್ಯಮಗಳಲ್ಲಿ ಒಬ್ಬ ಅಭ್ಯರ್ಥಿಗಳ ಪರವಾಗಿ ವರದಿ ಮಾಡಬಾರದು ಎಂದು ಆಯೋಗ ನಿಯಮ ರೂಪಿಸಿದೆ. ಒಬ್ಬ ವ್ಯಕ್ತಿಯ ಪರವಾಗಿ ವರದಿ ಮಾಡಿದರೆ, ಅನ್ಯ ಪಕ್ಷಗಳ ಅಭ್ಯರ್ಥಿಗಳ ಸ್ಪಷ್ಟೀಕರಣಕ್ಕೂ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.

ಸರ್ಕಾರದ ಮೂಲಕ ಆಡಳಿತಾರೂಢ ಸರ್ಕಾರದ ಸಾಧನೆ ಬಿಂಬಿಸುವ ಜಾಹೀರಾತು, ಪಕ್ಷದ ಸಾಧನೆ ಬಿಂಬಿಸುವ ಜಾಹೀರಾತು ನೀಡಿದರೆ ಸ್ವೀಕರಿಸಬಾರದು ಮತ್ತು ಪ್ರಸಾರ ಮಾಡಬಾರದು ಎಂದು ಸೂಚಿಸಲಾಗಿದೆ.

ಒಂದು ದಿನ 68,000 ಅರ್ಜಿ : ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.7ರಂದು ಕೊನೆಯ ದಿನವಾಗಿದೆ. ರಾಜ್ಯಾದ್ಯಂತ ಏ.3ರಂದು 68,000 ಹೊಸ ಅರ್ಜಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಜನವರಿ 28ರಿಂದ 7.53 ಲಕ್ಷ ಹೊಸ ಅರ್ಜಿಗಳು ಬಂದಿವೆ. ಅವುಗಳಲ್ಲಿ 4.36 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು. ಬೆಂಗಳೂರು ನಗರದಲ್ಲಿ 3.4 ಲಕ್ಷ ಅರ್ಜಿ ಸ್ವೀಕರಿಸಲಾಗಿತ್ತು. ಅವುಗಳಲ್ಲಿ 2.89 ಲಕ್ಷ ಹೆಸರುಗಳನ್ನು ಸೇರಿಸಲಾಗಿದೆ ಎಂದರು.

ಏ.7ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಏ.7 ಭಾನುವಾರವಾದರೂ ನೂತನ ಅರ್ಜಿಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು. ಹೊಸದಾಗಿ ಅರ್ಜಿ ನೀಡಿದವರ ಹೆಸರುಗಳನ್ನು ಚುನಾವಣಾ ಆಯೋಗದ ವೆಬ್ ಸೈಟ್ www.ceokarnataka.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದರು. (ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Election Commission (EC) on Thursday, April 4, banned the publication or broadcast of any exit poll during the period of Assembly elections in Karnataka. The Election Commission also prohibited the telecast of any election matter, including results of any opinion poll or any other poll survey, in any electronic media during the 48 hours before end of polling on May 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X