ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಗಣಿತ ವಿಷಯಕ್ಕೆ 9 ಗ್ರೇಸ್ ಅಂಕ

|
Google Oneindia Kannada News

Mathematics
ಬೆಂಗಳೂರು, ಏ.5 : ದ್ವಿತೀಯ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಐದು ಪ್ರಶ್ನೆಗಳನ್ನು ತಪ್ಪಾಗಿ ಮುದ್ರಿಸಿ ಮುಜುಗರಕ್ಕೆ ಒಳಗಾಗಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ 9 ಗ್ರೇಸ್ ಅಂಕಗಳನ್ನು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ. ಮೌಲ್ಯ ಮಾಪನ ವಿಭಾಗ ಈ ಬಗ್ಗೆ ಮಾಹಿತಿ ನೀಡಿದ್ದು ಅಧಿಕೃತ ಆದೇಶ ಹೊರಬೀಳಲಿದೆ.

ಗುರುವಾರ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಐದು ಪ್ರಶ್ನೆಗಳನ್ನು ತಪ್ಪಾಗಿ ಮುದ್ರಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಹೈಕೋರ್ಟ್ ತರಾಟಟೆಗೆ ತೆಗೆದುಕೊಂಡಿತ್ತು. ಎಚ್.ಎಂ.ಕೌಶಿಕ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಇಲಾಖೆಗೆ ನೋಟೀಸ್ ಜಾರಿಗೊಳಿಸಿತ್ತು.

ಗಣಿತ ಪರೀಕ್ಷೆ ನಡೆದ ದಿನದಿಂದ ಪ್ರಶ್ನೆಗಳನ್ನು ತಪ್ಪಾಗಿ ಮುದ್ರಿಸಿ ಪ್ರಶ್ನೆ ಪತ್ರಿಕೆಯನ್ನು ಕಠಿಣಗೊಳಿಸದ್ದ ಇಲಾಖೆಯ ಕ್ರಮದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಇದರಿಂದ ಮೌಲ್ಯಮಾಪನದ ಕುರಿತು ನಿರ್ಧಾರ ತೆಗೆದುಕೊಳ್ಳಲು ಸ್ಕೀಮ್ ಆಫ್ ವಾಲ್ಯುಯೇಷನ್ ಕಮಿಟಿ ರಚಿಸಲಾಗಿತ್ತು.

ಗುರುವಾರ ಪದವಿಪೂರ್ವ ಶಿಕ್ಷಣ ಇಲಾಖೆಗೆ ವರದಿ ನೀಡಿದ ಸಮಿತಿ, ಗಣಿತ ವಿಷಯದಲ್ಲಿ 9 ಗ್ರೇಸ್ ಅಂಕಗಳನ್ನು ಹೆಚ್ಚುವರಿಯಾಗಿ ನೀಡಬಹುದಾಗಿದೆ ಎಂದು ಸಲಹೆ ನೀಡಿದೆ. ಸಮಿತಿಯ ನಿರ್ದೇಶನದಂತೆ ಗ್ರೇಸ್ ಅಂಕ ನೀಡಲು ಇಲಾಖೆ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಬಿದ್ದಿಲ್ಲ.

ಕಷ್ಟದ ಪತ್ರಿಕೆ : ಗಣಿತ ಪ್ರಶ್ನೆ ಪತ್ರಿಕೆ ಬಗ್ಗೆ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಶಿಕ್ಷಕರೊಬ್ಬರು ಪ್ರಶ್ನೆ ಪತ್ರಿಕೆ ಪಠ್ಯ ಪುಸ್ತಕದ ಮಿತಿಯಲ್ಲಿತ್ತು. ಆದರೆ, ಸರಾಸರಿ ಅಂಕಗಳಿಸಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಕಠಿಣವಾಗಿತ್ತು ಎಂದು ಹೇಳಿದರು.

2 ಅಂಕಗಳ ಪ್ರಶ್ನೆಯನ್ನು ಒಂದು ಅಂಕಕ್ಕೆ, 3 ಅಂಕಗಳ ಪ್ರಶ್ನೆಯನ್ನು 2 ಅಂಕಗಳಿಗೆ ಕೇಳಲಾಗಿತ್ತು. ಐದು ಪ್ರಶ್ನೆಗಳು ತಪ್ಪಾಗಿ ಮುದ್ರಣಗೊಂಡಿದ್ದವು. ಇದರಿಂದ ಗೊಂದಲ ಉಂಟಾಗಿತ್ತು. ನನ್ನ ವೃತ್ತಿ ಜೀವನದಲ್ಲಿ ಇಂತಹ ಕ್ಲಿಷ್ಟ ಪತ್ರಿಕೆ ನೋಡಿರಲಿಲ್ಲ ಎಂದು ತಿಳಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದ್ದು, ಮೇ.3ರೊಳಗೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಇಲಾಖೆಯ ನಿರ್ಧಾರದಿಂದ ಗಣಿತ ಪರೀಕ್ಷೆ ಬರೆದ ವಿದ್ಯಾರ್ಥಿಗಳು ನಿಟ್ಟುಸಿರು ಬಿಡಬಹುದಾಗಿದೆ. [ಹೈಕೋರ್ಟ್ ಆದೇಶ]

English summary
Karnataka PUC Examination Board has decided to give 9 grace marks for mathematics paper. Mathematics paper was considered toughest in 10 years and had many questions out of syllabus. Karnataka high court has sent notice to Karnataka PU board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X