ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಜಾನೆಗೆ ದೇಣಿಗೆ: ಒಬಾಮಾಗೆ ಸ್ವಯಂ ಸ್ಯಾಲರಿ ಕಟ್

By Srinath
|
Google Oneindia Kannada News

us-president-barack-obama-gives-back-5-pc-to-treasury
ವಾಷಿಂಗ್ಟನ್‌, ಏ.5: ಒಂದೇ ಸಮನೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿರುವ ಅಮೆರಿಕಕ್ಕೆ ಆಸರೆಯಾಗಲು ಖುದ್ದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರೇ ಮಾದರಿಯಾಗಿದ್ದಾರೆ. ಅಮೆರಿಕದ ಅಧ್ಯಕ್ಷರೊಬ್ಬರು ಮೊದಲ ಬಾರಿಗೆ ಇಂತಹ ಉದಾರತೆ ತೋರಿದ್ದಾರೆ.

ಹಾಗೆ ನೋಡಿದರೆ ಒಬಾಮಾ ಈಗಾಗಲೇ ಸಾಕಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜತೆಗಿರಲಿ ಅಂತ ತಮ್ಮ ವೇತನದಲ್ಲಿ ಶೇ. 5ರಷ್ಟನ್ನು ಅಂದರೆ ಸುಮಾರು 20,000 ಡಾಲರ್‌ ಮೊತ್ತವನ್ನು ದೇಶದ ಖಜಾನೆಗೆ ದೇಣಿಗೆಯಾಗಿ ನೀಡಿದ್ದಾರೆ!

ಬರ ಸಂಕಷ್ಟದಲ್ಲಿ ವಿದೇಶ ಪ್ರವಾಸದ ಮೋಜು ಮಸ್ತಿಗೆ ಹಾತೊರೆಯುವ ನಮ್ಮ ಜನನಾಯಕರ ಗಮನಕ್ಕೆ ಇದು ಬಂದಿದೆಯೇ? ಒಬಾಮಾ ಅವರ ಈ ನೀತಿ ಇತರರಿಗೂ ಪಾಠವಾಗಬಲ್ಲದೇ?

ಪ್ರಸ್ತುತ, ಒಬಾಮಾ ಅವರ ವಾರ್ಷಿಕ ವೇತನ 4,00,000 ಅಮೆರಿಕನ್‌ ಡಾಲರ್‌, ಅಂದರೆ ಸುಮಾರು 2 ಕೋಟಿ ರೂ. ಗೂ ಅಧಿಕ. ಇದರಲ್ಲಿ ಸುಮಾರು 10 ಲಕ್ಷ ರೂ. ಗಳನ್ನು ಅವರು ಬೊಕ್ಕಸಕ್ಕೆ ಮರಳಿಸಲಿದ್ದಾರೆ.

ಈ ಸಂಬಂಧ ಅವರು ತಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು, ತಮ್ಮ ವೇತನದಲ್ಲಿ ಶೇ. 5ರಷ್ಟನ್ನು ಖಜಾನೆಗೇ ಭರಿಸುವಂತೆ ತಿಳಿಸಿದ್ದಾರೆ. ಒಬಾಮಾ, ಮಾರ್ಚ್‌ನಿಂದಲೇ ಈ ದೇಣಿಗೆ ಆರಂಭಿಸುವ ತೀರ್ಮಾನ ಕೈಗೊಂಡಿದ್ದರಾದರೂ ಎಪ್ರಿಲ್‌ ತಿಂಗಳಿನಿಂದ ಆರಂಭಗೊಳ್ಳಲಿದೆ. ಡಿಸೆಂಬರ್ ವರೆಗೂ ಮುಂದುವರಿಯಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

ದೇಶದಾದ್ಯಂತ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ವೇತನದಲ್ಲಿ ಒಂದಂಶವನ್ನು ಸರಕಾರಕ್ಕೆ ದೇಣಿಗೆಯಾಗಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ದೇಶದ ಖಜಾನೆಗೆ ತಾವೂ ದೇಣಿಗೆ ನೀಡಲು ಮುಂದಾಗಿದ್ದಾರೆ. ಪ್ರತಿ ತಿಂಗಳು ಖಜಾನೆಗೆ ಚೆಕ್‌ ಮೂಲಕ ದೇಣಿಗೆ ನೀಡಲು ಒಬಾಮಾ ನಿರ್ಧರಿಸಿದ್ದಾರೆ.

ಗಮನಾರ್ಹವೆಂದರೆ ಅಮೆರಿಕದ ಸರಕಾರಿ ಉದ್ಯೋಗಿಗಳು ವೇತನ ರಹಿತ ರಜೆ ತೆಗೆದುಕೊಳ್ಳುತ್ತಿದ್ದಾರೆ. 7 ಲಕ್ಷ ಮಂದಿ ಪ್ರತಿ ವಾರಕ್ಕೆ ಒಂದು ದಿನ ವೇತನ ರಹಿತ ರಜೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಇದು 14 ವಾರ ಕಾಲ ನಡೆಯಲಿದೆ.

ಈ ಹಿಂದೆಯೂ ಹಬರ್ಟ್ ಹೂವರ್, ಜಾಣ್ ಎಫ್ ಕೆನಡಿ, ಅಮೆರಿಕದ ಮೊದಲಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಸಹ ಹೀಗೆ salary ಕಡಿತಕ್ಕೆ ಆಸ್ಪದಕೊಟ್ಟಿದ್ದರು. ಆದರೆ ಅದು ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿತ್ತು. ನೇರವಾಗಿ ಸರಕಾರಿ ಖಜಾನೆಗೆ ತುಂಬಿರಲಿಲ್ಲ.

English summary
In a gesture that will generate waves of support, President Barack Obama plans to give back to the treasury 5 percent of his pay as a solidarity with the government workers forced to take unpaid leave as a result of deep spending cuts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X