ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತೆಗೆ ದ್ರೋಹ ಬಗೆಯಲ್ಲ, ರಕ್ತದಲ್ಲಿ ಬರೆದು ಕೊಡುವೆ

By Mahesh
|
Google Oneindia Kannada News

ಅರಸೀಕೆರೆ, ಏ.5: ಕರ್ನಾಟಕ ಜನತೆಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ನಾನು ನಂಬಿದವರೇ ನನಗೆ ಚೂರಿ ಹಾಕಿದರು. ಇದಕ್ಕೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ವೀರಾವೇಶ ಭಾಷಣ ಮಾಡಿದ್ದಾರೆ.

ಕರ್ನಾಟಕ ಜನತೆ ಆಶೀರ್ವದಿಸಿ ಅಧಿಕಾರಕ್ಕೆ ತಂದರೆ ರೈತರನ್ನು ಋಣಮುಕ್ತರನ್ನಾಗಿಸುತ್ತೇನೆ. ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ. ಮಹಿಳೆಯರ ಸಬಲೀಕರಣಕ್ಕಾಗಿ ಸಹಕಾರ ಬ್ಯಾಂಗಳ ಮೂಲಕ ಸಾಲ ನೀಡಲು ಒಂದು ಕೋಟಿ ರು ಮೀಸಲಿಡಲಾಗುವುದು. ನೀರಾವರಿ ಯೋಜನೆಗೆ ಪ್ರತ್ಯೇಕ ಹಣ ಕಾಯ್ದಿರಿಸಲಾಗುವುದು ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.

BS Yeddyurappa in Arsikere

ಬಸವರಾಜೇಂದ್ರ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಮಾರಂಭಕ್ಕೆ ಸುಮಾರು ಎರಡೂವರೆ ತಾಸು ತಡವಾಗಿ ಬಂದು ಸಭಿಕರ ಕ್ಷಮೆಯಾಚಿಸಿದ ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯ ಸಾಧನೆಗಳ ಗಂಟು ಬಿಚ್ಚಿದರು. ಸಿದ್ದರಾಮಯ್ಯ ಅವರು ಹಣಕಾಸು ಮಂತ್ರಿಯಾಗಿದ್ದಾಗ 399 ಕೋಟಿ ರು ಬಜೆಟ್ ಮಂಡಿಸಿದ್ದರು. ನಾನು 860 ಕೋಟಿ ರು ಬಜೆಟ್ ಮಂಡಿಸಿದೆ.

ವಿದ್ಯಾರ್ಥಿಗಳಿಗೆ ಬೈಸಿಕಲ್, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಯೋಜನೆ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತರಲಾಯಿತು. 33 ಸಾವಿರ ಕೋಟಿ ರು ರಾಜ್ಯ ಬಜೆಟ್ ಅನ್ನು 85 ಸಾವಿರ ಕೋಟಿ ರುಗೆ ಏರಿಸಿದೆ. 10 ಸಾವಿರ ಕೋಟಿ ರು ಸಾಲ ಮನ್ನಾ ಮಾಡುವಂತೆ ಜಗದೀಶ್ ಶೆಟ್ಟರ್ ಗೆ ಒತ್ತಾಯಿಸಿದೆ. ಆದರೆ, 3.5 ಕೋಟಿ ರು ಮಾತ್ರ ಸಾಲ ಮನ್ನಾ ಮಾಡಿದರು.

ಕರ್ನಾಟಕ ಜನತಾ ಪಕ್ಷ ಟಿವಿ ಮಾಧ್ಯಮಗಳ ಸಮೀಕ್ಷೆಯನ್ನು ನಂಬುವುದಿಲ್ಲ. ಜನತೆ ನೀಡುವ ಮತವೇ ಅಂತಿಮ. ಜನ ಪರ ಯೋಜನೆಯನ್ನು ನೀಡಿದ್ದೇನೆ. ಈಗ ಕಲ್ಯಾಣ ಕರ್ನಾಟಕದ ಕನಸು ಹೊತ್ತಿದ್ದೇನೆ. ಜನರು ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ಯಡಿಯೂರಪ್ಪ ಹೇಳಿದರು. [ಯಡಿಯೂರಪ್ಪ ಪ್ರವಾಸ ಪಟ್ಟಿ] ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
KJP President BS Yeddyurappa said I won't give false assurance, farmer's loan will be cleared if KJP comes to power. I don't believe in TV media survey. Public opinion is with KJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X