ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Manufacturing Defect: ಪುರುಷ ನಾಶ ಸನ್ನಿಹಿತ

By Srinath
|
Google Oneindia Kannada News

Manufacturing defect- Y Chromosomes to vanish
ಮೆಲ್ಬೋರ್ನ್, ಏ.4: ಹೌದಾ, ಇನ್ನು ನೂರಿನ್ನೂರು ವರ್ಷದಲ್ಲಿ ಪುರುಷರೆಲ್ಲ ಢಮಾರ್ ಅಂತಾರಾ ಎಂದು ಆತಂಕ ಪಡಬೇಡಿ. ಏಕೆಂದರೆ, ಪುರುಷ ಸಂತತಿಯ ನಾಶ ಕಾಲ ಹತ್ತಿರ ಬಂದಿದೆ ಅಂದರೆ ಅದಿನ್ನೂ ದೀರ್ಘಾತಿದೀರ್ಘ 50 ಲಕ್ಷ ವರ್ಷಗಳ ಬಳಿಕವಷ್ಟೇ. ಅಷ್ಟೊತ್ತಿಗೆ ಯಾರಿರ್ತಾರೋ, ಯಾರಿರಲ್ಲವೋ!?

ಆದರೂ ವಿಜ್ಞಾನಿಗಳು ಏನು ಹೇಳಿದ್ದಾರೆಂದರೆ... ಗಂಡು ಮಗುವಿನ ಜನನಕ್ಕೆ ಕಾರಣವಾಗುವ 'ವೈ' ವರ್ಣತಂತು (Y chromosome‌)))) ಮಾನವನ ದೇಹದಲ್ಲಿ ತೀವ್ರ ಗತಿಯಲ್ಲಿ ಕಡಿಮೆಯಾಗುತ್ತಿದೆ. ಹಾಗಾಗಿ, ಇನ್ನು 50 ಲಕ್ಷ ವರ್ಷದಲ್ಲೇ ಭೂಮಿಯ ಮೇಲೆ ಪುರುಷರೇ ಇರುವುದಿಲ್ಲ! ಎನ್ನುತ್ತಿದ್ದಾರೆ ಆ ವಿಜ್ಞಾನಿಗಳು. ಕ್ಯಾನ್‌ಬೆರ್ರಾ ವಿಶ್ವವಿದ್ಯಾಲಯದ ಅನ್ವಯಿಕ ಪರಿಸರ ಶಾಸ್ತ್ರ ವಿಭಾಗದ ಸಂಶೋಧಕಿಯಾಗಿರುವ ಜೆನ್ನಿ ಗ್ರೇವ್ಸ್‌ ಅವರ ಸಂಶೋಧನೆಯ ಸಾರ ಇದು.

ಯಾಕಪ್ಪಾ ಹೀಗೆ ಅಂದರೆ Manufacturing defectನಿಂದಾಗಿ ಪುರುಷ ಸಂತತಿಯ ನಾಶ ಸನ್ನಿಹಿತವಾಗಿದೆಯಂತೆ! Y chromosome ಸ್ವಯಂ ನಾಶಕವಂತೆ. ಅದರ ರಚನೆಯೇ ಹಾಗಿದೆಯಂತೆ.

Y chromosome ಅಂದರೆ ಅದು ಗಂಡಿನಲ್ಲಿ ಇರುವಂತಹುದು. ಹಾಗೂ ವೀರ್ಯ ರಚನೆಯಲ್ಲಿ ಅದು ಪ್ರಮುಖ ಪಾತ್ರ ನಿಭಾಯಿಸುತ್ತದೆ. ಪುರುಷರಲ್ಲಿ Y chromosomeಏಕಾಂಗಿಯಾಗಿದ್ದರೆ ಮಹಿಳೆಯರಲ್ಲಿ ಜೋಡಿಯಾಗಿ ಇರುತ್ತದೆ. ಹಾಗಾಗಿ ಮಹಿಳೆಯರಲ್ಲಿ Y chromosome ಸ್ವಯಂ ದುರಸ್ತಿಗೊಳಪಡುವ ಗುಣಶಕ್ತಿ ಹೊಂದಿದೆ ಎಂದು ಜೆನ್ನಿ ವಿವರಿಸಿದ್ದಾರೆ.

ಮುಂದ!?: X chromosomeನಲ್ಲಿ ಕೇವಲ 1000 ವಂಶವಾಹಿಗಳಿವೆ. ಅದೇ Y chromosome 1700 ವಂಶವಾಹಿಗಳಿಂದ ಪ್ರಾರಂಭಗೊಂಡಿದೆ. ಆದರೂ ಪ್ರಸ್ತುತ ಅದರ ಸಂಖ್ಯೆ ಕೇವಲ 45ಕ್ಕೆ ಉಳಿದಿದೆ. ಆತಂಕಕಾರಿ ಅಂದರೆ ಈ ಪೈಕಿ ಹೆಚ್ಚಿನವುಗಳು ನಿಷ್ಪ್ರಯೋಜಕವಾಗಿವೆ! ಎಂದಿದ್ದಾರೆ ಸಂಶೋಧಕಿ ಜೆನ್ನಿ.

ವಾಸ್ತು ದೋಷವೂ ಇದೆ!: ಉತ್ಪಾದನೆಯ ಹಂತದಲ್ಲೇ ದೋಷಪೂರಿತವಾಗಿರುವ Y chromosome ಪುರುಷರಲ್ಲಿ ವಾಸವಾಗಿರುವ ಸ್ಥಳವೂ ಅದಕ್ಕೆ ಮಾರಕವಾಗಿದೆ. ಪುರುಷ ವೀರ್ಯದ ಕೋಶವಾದ ವೃಷಣದಲ್ಲಿ ನಿರಂತರವಾಗಿ ಕೋಶ ವಿಭಜನೆಯಾಗುತ್ತಿದ್ದು, ಅದು ಸ್ವಯಂ ರಿಪೇರಿಯಾಗುವುದಕ್ಕೆ ಅವಕಾಶವಿಲ್ಲವಾಗಿದೆ. ಮಹಿಳೆಯರಲ್ಲೂ ಹೀಗೇ ಆಗುತ್ತದಾದರೂ ಅಲ್ಲಿ Y chromosomeಗಳು ಜೋಡಿಯಾಗಿರುವುದರಿಂದ ವಿಭಜನೆಯಾಗುತ್ತಿದ್ದಂತೆ ಒಂದಕ್ಕೊಂದು ಆಸರೆಯಾಗಿ ರಿಪೇರಿಯಾಗಿಬಿಡುತ್ತದೆ.

English summary
Manufacturing defect- Y Chromosomes to vanish. The poorly designed Y chromosome, which makes men, is degrading rapidly and will disappear, even if humans are still around, an evolutionary geneticist has claimed. Jenny Graves from Canberra University's institute for applied ecology, said that the process is likely to happen within the next five million years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X