ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ತೀರ್ಮಾನ ದೇವೇಗೌಡರ ಅಡುಗೆ ಮನೆಯಿಂದಲೇ

By Srinath
|
Google Oneindia Kannada News

jds-decision-taken-at-devegowda-dining-table-bachegowda
ವಿಜಯಪುರ (ದೇವನಹಳ್ಳಿ), ಏ.3: ಜಾತ್ಯಾತೀತ ಜನತಾ ದಳದಲ್ಲಿ ಪಕ್ಷಕ್ಕಾಗಿ ದುಡಿಯುವ ನಾಯಕರಿಗಾಗಲಿ ಅಥವಾ ಕಾರ್ಯಕರ್ತರಿಗಾಗಲಿ ಮನ್ನಣೆಯಿಲ್ಲ. ಅಲ್ಲೇನಿದ್ದರೂ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ ಹಾಗೂ ಇತರೆ ಕೆಲ ಮುಖ್ಯಸ್ಥರು ಕೈಗೊಳ್ಳುವ ತೀರ್ಮಾನವೇ ಅಂತಿಮ.

ಈ ಅಪ್ಪ-ಮಕ್ಕಳು ಎಲ್ಲಿ, ಎಷ್ಟೇ ಭರವಸೆ ನೀಡಿದ್ದರೂ, ಅದು ಕಾರ್ಯಗತವಾಗುವುದಿಲ್ಲ. ಏಕೆಂದರೆ ರಾತ್ರಿ ಕುಟುಂಬದ ಸದಸ್ಯರೆಲ್ಲ ಊಟಕ್ಕೆ ಕುಳಿತಾಗ, ಅಡುಗೆ ಮನೆಯಲ್ಲಿ ಕೈಗೊಳ್ಳುವ ತೀರ್ಮಾನವೇ ಜೆಡಿಎಸ್‌ ಪಕ್ಷದ ಅಂತಿಮ ತೀರ್ಮಾನವಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಬಿಎನ್ ಬಚ್ಚೇಗೌಡ ಗೌಡರ ಕುಟುಂಬದ ಬಗ್ಗೆ ಹೊಸ ಸತ್ಯವೊಂದನ್ನು ಹೊರಹಾಕಿದ್ದಾರೆ.

ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಮ್ಮ ಕುಟುಂಬ ವರ್ಗದವರಿಂದ ಏರ್ಪಡಿಸಿದ್ದ ಚನ್ನಕೇಶವಸ್ವಾಮಿರವರ ಪುಷ್ಪ ಪಲ್ಲಕ್ಕಿ ಉತ್ಸವದ ಸೇವಾ ಕಾರ್ಯದಲ್ಲಿ ಸಚಿವ ಬಚ್ಚೇಗೌಡ ಅವರು ಮಾತನಾಡಿದರು.

ಇದೀಗ ಚುನಾವಣಾ ಸಂದರ್ಭದಲ್ಲಿ ತಂದೆಯೊಬ್ಬರಿಗೆ ಮಾತು ನೀಡುವುದು, ಮಗ ಮತ್ತೂಬ್ಬರಿಗೆ ಮಾತು ನೀಡುವುದು, ಆದರೆ ರಾತ್ರಿ ಏರ್ಪಡುವ ಸಭೆಯಲ್ಲಿ ಆಗುವ ತೀರ್ಮಾನವೇ ಮತ್ತೂಂದು ಎಂದು ಜೆಡಿಎಸ್‌ ಬಗ್ಗೆ ಸಚಿವರು ವ್ಯಂಗ್ಯವಾಡಿದರು.

ಸಚಿವ ಬಚ್ಚೇಗೌಡ ಅವರು ಮೂಲತಃ ಜೆಡಿಎಸ್ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಇದೀಗ ಅವರು ಬಿಜೆಪಿಯಲ್ಲಿದ್ದು, ತಾವು ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

English summary
Karnataka Assembly Election- JDS political decisions taken at Deve Gowda's dining table says BJP Minister BN Bachegowda in Vijaypur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X