• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ.3: ಚಿತ್ರಗಳಲ್ಲಿ ಕಂಡ ತುಣುಕು ಸುದ್ದಿಗಳು

By Mahesh
|

ಬೆಂಗಳೂರು, ಏ.3: ಇತ್ತೀಚಿನ ಪ್ರಮುಖ ಸುದ್ದಿಗಳನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಹೇಳಿಕೆಗಳು, ಕೋರ್ಟ್ ಸುದ್ದಿ, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ.

ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಬಳಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ, ಆಗಸದಿಂದ ಧರೆಗಿಳಿದ ಸುನೀತಾ ವಿಲಯಮ್ಸ್, ಐಪಿಎಲ್ ಪ್ರಚಾರದಲ್ಲಿ ರಾಹುಲ್ ದ್ರಾವಿಡ್ ಶಿಲ್ಪಾ ಶೆಟ್ಟಿ ಜುಗಲ್ ಬಂದಿ, ಗಂಜಾಂ ನಲ್ಲಿ ಭಕ್ತರ ಸಾಮೂಹಿಕ ಉರುಳುಸೇವೆ, ಶ್ರೀನಗರದ ಟುಲಿಪ್ ಗಾರ್ಡ, ಬರಾಕ್ ಒಬಾಮಾ ಏನ್ಮಾಡ್ತಿದ್ದಾರೆ? ಸೇರಿದಂತೆ ಹತ್ತು ಹಲವು ಪ್ರಮುಖ ಸುದ್ದಿಗಳ ಚಿತ್ರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಚಿತ್ರ ಸುದ್ದಿಗಳನ್ನು ನೋಡಿ ಅನಂದಿಸಿ

ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಪ್ರತಿಭಟನೆ

SFI ನಾಯಕನ ಹತ್ಯೆ ಖಂಡಿಸಿ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಬಳಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಸುನೀತಾ ವಿಲಿಯಮ್ಸ್

ಸುನೀತಾ ವಿಲಿಯಮ್ಸ್

ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮುಂಬೈನ Working Women's Hostel ನಲ್ಲಿ. PTI Photo by Shashank Parade

ಟುಲಿಪ್ ಉದ್ಯಾನ

ಟುಲಿಪ್ ಉದ್ಯಾನ

ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ನಲ್ಲಿ ತನ್ನ ಮಗುವಿನೊಂದಿಗೆ ಪ್ರವಾಸಿಗ

ಶಿಲ್ಪಾ ಹಾಗೂ ದ್ರಾವಿಡ್

ಶಿಲ್ಪಾ ಹಾಗೂ ದ್ರಾವಿಡ್

'RR Fan Wear Collection' ಅನಾವರಣ ಸಂದರ್ಭದಲ್ಲಿ ನಾಯಕ ರಾಹುಲ್ ದ್ರಾವಿಡ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಒಡತಿ ಶಿಲ್ಪಾ ಶೆಟ್ಟಿ ಕಂಡಿದ್ದು ಹೀಗೆ

ನೀರಿಗಾಗಿ ನಿರೀಕ್ಷೆ

ನೀರಿಗಾಗಿ ನಿರೀಕ್ಷೆ

ಮಹಾರಾಷ್ಟ್ರದ ಜಲಾನಾ ಜಿಲ್ಲೆಯ ನಿಲೊದ್ ಗ್ರಾಮದಲ್ಲಿ ನೀರಿನ ಟ್ಯಾಂಕರ್ ನಿರೀಕ್ಷೆಯಲ್ಲಿ ಮಹಿಳೆಯರು

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

'RR Fan Wear Collection' ಅನಾವರಣ ವೇಳೆ ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಒಡತಿ ಶಿಲ್ಪಾ ಶೆಟ್ಟಿ ಬೆಕ್ಕಿನ ನಡಿಗೆ

 ಒಬಾಮಾ ಟೆನಿಸ್

ಒಬಾಮಾ ಟೆನಿಸ್

ವಾಷಿಂಗ್ಟನ್: ಶ್ವೇತಭವನದ ಸೌಥ್ ಲಾನ್ ನಲ್ಲಿ ವಾರ್ಷಿಕ ಈಸ್ಟರ್ ಎಗ್ ರೋಲ್ ಸಂದರ್ಭದಲ್ಲ್ ಟೆನಿಸ್ ಆಟವಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ಮೆಟ್ರೋ ಸುರಂಗ

ಮೆಟ್ರೋ ಸುರಂಗ

ನವದೆಹಲಿ: ಜನಪಥ್ ಮೆಟ್ರೋ ಸ್ಟೇಷನ್ ನಲ್ಲಿ DMRCಯಿಂದ ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿ . PTI Photo by Subhav Shukla

ತಮಿಳರ ಪ್ರತಿಭಟನೆ

ತಮಿಳರ ಪ್ರತಿಭಟನೆ

ಚೆನ್ನೈ: ನಟ ಅಜಿತ್, ಕಮಲ್ ಹಾಸನ್ ಹಾಗೂ ತಮಿಳೂ ಚಿತ್ರರಂಗ ನಿರಶನ. ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆಗೆ ಆಗ್ರಹ PTI Photo by R Senthil

ದೆಹಲಿಯಲ್ಲಿ ಮಿಂಚು

ದೆಹಲಿಯಲ್ಲಿ ಮಿಂಚು

ನವದೆಹಲಿ : ಗುರುದ್ವಾರ ಬಾಂಗ್ಲಾ ಸಾಹಿಬ್ ಬಳಿ ಕಾಣಿಸಿದ ಮಿಂಚು PTI Photo by Atul Yadav

ಕೃಷ್ಣ ಮೊಗವೀರ ಕಳೇಬರ

ಕೃಷ್ಣ ಮೊಗವೀರ ಕಳೇಬರ

ಮಂಗಳೂರು: ಮಧ್ಯಆಫ್ರಿಕಾದಲ್ಲಿ ಫ್ರೆಂಚ್ ಪಡೆ ಗುಂಡಿಗೆ ಮೃತಪಟ್ಟ ಕೃಷ್ಣ ಮೊಗವೀರ ಅವರ ಪಾರ್ಥೀವ ಶರೀರ ಹುಟ್ಟೂರು ಕುಂದಾಪುರಕ್ಕೆ ತರುತ್ತಿರುವುದು

ಉರುಳು ಸೇವೆ

ಉರುಳು ಸೇವೆ

ಗಂಜಾಂ: ಬಿಸಿ ಉಸುಕಿನ ಮೇಲೆ ಭಕ್ತಾದಿಗಳು 'ದಂಡ ಹಬ್ಬ'ದ ಅಂಗವಾಗಿ ಉರುಳು ಸೇವೆ ಕೈಗೊಂಡರು.

 ಕತ್ರೀನಾ ಕೈಫ್

ಕತ್ರೀನಾ ಕೈಫ್

ಇಂಡಿಯನ್ ಪ್ರಿಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಕತ್ರೀನಾ ಕೈಫ್ ನೃತ್ಯ ಭಂಗಿ

English summary
News stories in Pics Apr 03, 2013: Students of Jawaharlal Nehru University try to enter the Banga Bhavan during a protest against West Bengal Chief Minister Mamata Banerjee over the death of SFI activist Sudipto Gupta, in New Delhi on Wednesday and many more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more