ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ಜಾಹೀರಾತುಗಳಿಗೂ ಕತ್ತರಿ

|
Google Oneindia Kannada News

Anil Kumar Jha
ಬೆಂಗಳೂರು, ಏ.3 : ವಿಧಾನಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಸಜ್ಜಾಗುತ್ತಿರುವ ಚುನಾವಣಾ ಆಯೋಗ ರಾಜ್ಯದ ಆಕಾಶವಾಣಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವ ಕೇಂದ್ರ ಸರ್ಕಾರದ ಜಾಹೀರಾತುಗಳಿಗೆ ತಡೆಯೊಡ್ಡಲು ಮುಂದಾಗಿದೆ.

ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ. ಕೇಂದ್ರ ಸರ್ಕಾರ ತನ್ನ ಸಾಧನೆ ಬಿಂಬಿಸುವ ಅನೇಕ ಜಾಹೀರಾತುಗಳನ್ನು ರಾಜ್ಯದ ಆಕಾಶವಾಣಿ ಮತ್ತು ಟಿವಿ ಚಾನೆಲ್ ಗಳಲ್ಲಿ ನೀಡುತ್ತಿದೆ.

ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಜಾಹೀರಾತು ನೀಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಜಾಹೀರಾತುಗಳ ಪ್ರಸಾರಕ್ಕೆ ತಡೆಯೊಡ್ಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮದ್ಯ ವಹಿವಾಟಿಗೆ ತಡೆ : ಮತದಾರರಿಗೆ ಆಮಿಷವೊಡ್ಡಲು ವಿವಿಧ ಪಕ್ಷಗಳು ಮದ್ಯ ಹಂಚುತ್ತವೆ. ಇದನ್ನು ತಡೆಯಲು ಅಬಕಾರಿ ಮತ್ತು ಪಾನೀಯ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಅಕ್ರಮ ಮದ್ಯ ಖರೀದಿ, ಸಾಗಣಿಕೆ, ಶೇಖರಣೆ ಮುಂತಾದ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು

ಖಾಸಗಿ ಕಂಪನಿಗಳಿಗೆ ರಜೆ :ಮತದಾನದ ದಿನದಂದು ಖಾಸಗಿ ಕಂಪನಿಗಳ ಕಚೇರಿಗಳಿಗೆ ರಜೆ ಘೋಷಿಸಲು ಆದೇಶ ನೀಡಲಾಗಿದೆ. ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಇಲಾಖೆ ಮುಖಾಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಮಯ ನಿಗದಿ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಆಕಾಶವಾಣಿ ಮತ್ತು ಟಿವಿ ಚಾನೆಲ್ ಗಳಲ್ಲಿ ಜಾಹೀರಾತು ನೀಡಲು ಸಮಯ ನಿಗದಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಕಾಂಗ್ರೆಸ್ ಗೆ 166 ನಿಮಿಷ, ಬಿಜೆಪಿಗೆ 163 ಮತ್ತು 111 ನಿಮಿಷಗಳ ಕಾಲಾವಕಾಶ ನಿಗದಿಗೊಳಿಸಲಾಗಿದೆ. ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳಿಗೆ 45 ನಿಮಿಷಗಳ ಸಮಯಾವಕಾಶ ನೀಡಲಾಗುತ್ತದೆ. ಉಳಿದಂತೆ ಹಿಂದಿನ ಚುನಾವಣೆಯಲ್ಲಿ ಪಕ್ಷಗಳ ಸಾಧನೆ ಪರಿಗಣಿಸಿ ಹೆಚ್ಚುವರಿ ಸಮಯ ನಿರ್ಣಯಿಸಲಾಗುತ್ತದೆ.

ಭಾಷಣಗಳಿಗೆ ಸಮಯ : ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿ ಪ್ರತಿ ಪಕ್ಷಗಳು 5 ನಿಮಿಷ ಭಾಷಣ ಮಾಡಬಹುದು ಎಂದು ಸಮಯಾವಕಾಶ ನಿರ್ಧರಿಸಲಾಗಿದೆ. ಇದರ ಅನ್ವಯ ಕಾಂಗ್ರೆಸ್ 33, ಬಿಜೆಪಿ 32, ಜೆಡಿಎಸ್ ಗೆ 22 ಮತ್ತು ಇತರೆ ಪಕ್ಷಗಳಿಗೆ 9 ಬಾರಿ ಭಾಷಣ ಮಾಡಲು ಅವಕಾಶ ದೊರೆಯಲಿದೆ.

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವವರಿಗೆ ಏ.7ಕೊನೆಯದಿನವಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೊಂದಾಯಿಸಿಕೊಳ್ಳುವ ಬಗೆ ಇಲ್ಲಿ ವಿವರಿಸಲಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Chief Electoral Officer Anil Kumar Jha said, advertisements on various welfare programmes sponsored by the Union government in print and electronic media were under the review of the Election Commission of India (ECI). On Tuesday, April, 2 he said, advertisements on public welfare programmes sponsored by the State government through billboards and other media have already been removed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X