ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಟ್ ಟಾಪ್ ಬಾಕ್ಸ್ ಗಡುವು ವಿಸ್ತರಣೆ?

|
Google Oneindia Kannada News

set top box
ನವದೆಹಲಿ, ಏ.3 : ಸೆಟ್ ಟಾಪ್ ಬಾಕ್ಸ್ ಆಳವಡಿಸಿಕೊಳ್ಳದ ನಗರಗಳ ಜನರು ಹದಿನೈದು ದಿನಗಳು ನಿರಾಳವಾಗಿ ಟಿವಿ ವೀಕ್ಷಿಸಬಹುದಾಗಿದೆ. ಇನ್ನೂ 15 ದಿನ ಕೇಬಲ್ ಪ್ರಸಾರ ಸ್ಥಗಿತಗೊಳಿಸದೆ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಏ.5ರಂದು ಅಂತಿಮ ಆದೇಶ ಹೊರಬೀಳುವ ಸಂಭವವಿದೆ.

ಕೇಂದ್ರ ಸರ್ಕಾರಕ್ಕೆ ಇದುವರೆಗೂ ದೊರಕಿರುವ ಮಾಹಿತಿಯಂತೆ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕಾದ ಫೇಸ್ 2 ನಗರಗಳಲ್ಲಿ ಶೇ.25 ರಷ್ಟು ಜನರು ಮಾತ್ರ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಂಡಿದ್ದಾರೆ. ಆದ್ದರಿಂದ, 15ದಿನಗಳ ಕಾಲ ಕೇಬಲ್ ಪ್ರಸಾರ ಸ್ಥಗಿತಗೊಳಿಸದೆ ಕಾಲಾವಕಾಶ ನೀಡಲು ಕೇಂದ್ರ ಚಿಂತನೆ ನಡೆಸಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಉದಯ್ ಕುಮಾರ್ ವರ್ಮಾ ಅವರು ಹೇಳುವಂತೆ ನಾಗರೀಕರಿಗೆ 15 ದಿನಗಳ ಕಾಲಾವಕಾಶ ಹೆಚ್ಚಿಗೆ ನೀಡಲು ನಿರ್ಧರಿಸಲಾಗಿದೆ. ಫೇಸ್ 2 ನಗರಗಳ ಪಟ್ಟಿಯಲ್ಲಿ 38 ನಗರಗಳಿದ್ದು, ಕೇವಲ ಶೇ 25ರಷ್ಟು ಜನರು ಮಾತ್ರ ಸೆಟ್ ಟಾಪ್ ಬಾಕ್ಸ್ ಆಳವಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸೆಟ್ ಟಾಪ್ ಬಾಕ್ಸ್ ಇಲ್ಲದ ಮನೆಗಳಲ್ಲಿ ಕೇಬಲ್ ಬ್ಲಾಕ್ ಮಾಡುವ ಅವಧಿಯನ್ನು 15 ದಿನಗಳ ಕಾಲ ವಿಸ್ತರಿಸಲು ಚಿಂತನೆ ನಡೆಸಿದ್ದೇವೆ. ಏ.5ರಂದು ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉದಯ್ ಕುಮಾರ್ ತಿಳಿಸಿದ್ದಾರೆ.

ಫೇಸ್ 2 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳು ಸೇರಿದ್ದು, ಕೇಬಲ್ ಅಸೋಸಿಯೇಷನ್ ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಏಕ ಸದಸ್ಯ ಪೀಠ, ಏಪ್ರಿಲ್ 5ರವರೆಗೆ ಕೇಬಲ್ ಪ್ರಸಾರ ಸ್ಥಗಿತಕ್ಕೆ ತಡೆ ನೀಡಿದೆ. ಇದೇ ರೀತಿ ಗುಜರಾತ್ ಹೈಕೋರ್ಟ್ ಸಹ ತನ್ನ ರಾಜ್ಯದ ವ್ಯಾಪ್ತಿಯಲ್ಲಿ 5 ದಿನಗಳ ಕಾಲಾವಕಾಶ ವಿಸ್ತರಿಸಿದೆ.

ಇದರಿಂದ ಕೇಂದ್ರ ಸರ್ಕಾರ ಗಡುವು ವಿಸ್ತರಿಸಲು ಚಿಂತನೆ ನಡೆಸಿದೆ. ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಏ.1ರೊಳಗೆ 1.6 ಕೋಟಿ ಮನೆಗಳಲ್ಲಿ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕಾಗಿತ್ತು. ಆದರೆ, ನಿರೀಕ್ಷಿತ ಫಲಿತಾಂಶ ದೊರಕಿಲ್ಲ, ಆದ್ದರಿಂದ ಗಡುವು ವಿಸ್ತರಣೆಗೆ ಚಿಂತನೆ ನಡೆದಿದೆ.

ಕೇಬಲ್ ಪ್ರಸಾರ ಸ್ಥಗಿತ : ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕೆಲವು ಕೇಬಲ್ ಆಪರೇಟರ್ ಗಳು ಕೇಬಲ್ ಪ್ರಸಾರ ಸ್ಥಗಿತಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರು, ಮೈಸೂರು ನಗರಗಳ ಕೆಲವು ಬಡಾವಣೆಗಳಲ್ಲಿ ಈಗಾಗಲೇ ಕೇಬಲ್ ಪ್ರಸಾರ ಸ್ಥಗಿತಗೊಳಿಸಲಾಗಿದೆ. ಸೆಟ್ ಟಾಪ್ ಬಾಕ್ಸ್ ಹಾಕಿಸಿಕೊಳ್ಳಿ ಎಂದು ಗ್ರಾಹಕರಿಗೆ ಹೇಳುತ್ತಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Ministry of Information and Broadcasting may be extend deadline to replace analogue cable connection to set top box for 15 days. In New Delhi, On April, 2 Ministry of Information and Broadcasting thinking to extend compulsory digitization deadline for 15 days. On April, 5 final order may be issued by Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X