ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರಿನ ಹೊಳೆ ಹರಿಸಿದ ಹೊನ್ನಾಳಿ ರಾಣಿ ಜಯಲಕ್ಷ್ಮೀ

|
Google Oneindia Kannada News

Jayalakshmi.
ಬೆಂಗಳೂರು, ಏ.3 : ಬಿಗ್ ಬಾಸ್ ರಿಯಾಲಿಟಿ ಶೋ ಮುಖಾಂತರ ಮತ್ತೊಮ್ಮೆ ಕ್ಯಾಮರಾ ಮುಂದೆ ಬಂದ ನರ್ಸ್ ಜಯಲಕ್ಷ್ಮೀ ಬುಧವಾರ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿರುವ ಜಯಲಕ್ಷ್ಮೀ ರಾಜಕೀಯಕ್ಕೆ ಬಂದ ಉದ್ದೇಶಗಳೇನು? ಚುನಾವಣೆಗೆ ಸ್ಪರ್ಧಿಸುತ್ತಾರಾ? ಎಂದು ಒನ್ ಇಂಡಿಯಾ ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿರುತ್ತಾರಾ? ಮುಂದಿನ ರಾಜಕೀಯ ನಡೆ ಏನು ? ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ? ವೈಯಕ್ತಿಕ ಜೀವನ ಕಹಿ ಘಟನೆಗಳು ಮುಂತಾದ ಸಂದರ್ಶನದ ವಿವರಗಳು ಕೆಳನಂತಿವೆ.

ರಾಜಕೀಯಕ್ಕೆ ಬರಲು ಕಾರಣ : ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ರಂಗ ಪ್ರವೇಶಿಸಿದೆ. ರಾಜಕೀಯದ ಭಾಗವಾಗಿದ್ದರೆ ಸಮಾಜ ಸೇವೆ ಮಾಡಲು ಉತ್ತಮ ಅವಕಾಶಗಳು ದೊರೆಯುತ್ತವೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು ಎಂಬುದು ನನ್ನ ಗುರಿ. ಅದಕ್ಕಾಗಿ ಶ್ರಮಿಸುತ್ತೇನೆ.

ನಾನು ಸೆಲೆಬ್ರಿಟಿ ಅಲ್ಲ : ನಾನು ಸಾಮಾನ್ಯ ಮಹಿಳೆಯಾಗಿದ್ದೆ. ಕೆಲವು ಘಟನೆಗಳು ನನ್ನನ್ನು ಸೆಲೆಬ್ರಿಟಿಯಂತೆ ಮಾಡಿದವು. ಆದ್ದರಿಂದ ಜನರು ನನ್ನನ್ನು ಸೆಲೆಬ್ರಿಟಿ ಎಂದು ಕರೆಯುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ನಾನು ಇತ್ತೀಚೆಗೆ ಸೆಲೆಬ್ರಿಟಿ ಆಗಿದ್ದು ನಿಜ. ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಾಗಿ ನಾನು ಸೆಲೆಬ್ರಿಟಿ ಆದೆ.

ಚುನಾವಣೆಗೆ ಸ್ಪರ್ಧೆ : ಅಧಿಕಾರದ ಆಸೆ ನನಗಿಲ್ಲ. ರಾಜಕೀಯಕ್ಕೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬರಲಿಲ್ಲ. ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ. ಜನರ ಸಂಕಷ್ಟ ಬಗೆಹರಿಸಲು ಪ್ರಯತ್ನಿಸುತ್ತೇನೆ. ಪಕ್ಷದ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದರೆ ಖಂಡಿತ ಸ್ಪರ್ಧಿಸುತ್ತೇನೆ.

ಹೊನ್ನಾಳಿಯಲ್ಲಿ ಸ್ಪರ್ಧಿಸುತ್ತಿರಂತೆ : ಹೊನ್ನಾಳಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ನಾನು ಎಲ್ಲಿಯೂ ಘೋಷಿಸಿಲ್ಲ. ಹೊನ್ನಾಳಿಯಿಂದ ಸ್ಪರ್ಧಿಸಲು ನನಗೆ ಯಾವುದೇ ಆತಂಕವಿಲ್ಲ. ನಾನು ನರ್ಸ್ ಕೆಲಸ ಪ್ರಾರಂಭಿಸಿದ್ದು ಹೊನ್ನಾಳಿಯಿಂದ, ಅದು ನನಗೆ ಕರ್ಮಭೂಮಿ ಆದ್ದರಿಂದ ಸ್ಪರ್ಧಿಸಲು ಹಿಂಜರಿಕೆ ಇಲ್ಲ.

ಬಿಎಸ್ಆರ್ ಕಾಂಗ್ರೆಸ್ ಪಕ್ಷವೇ ಯಾಕೆ : ನನಗೆ ಬೇರೆ ಪಕ್ಷಗಳಿಂದಲೂ ಆಹ್ವಾನ ಬಂದಿತ್ತು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರುವುದು ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಿದ್ದರೂ, ಮಹಿಳೆಯರಿಗೆ ಟಿಕೆಟ್ ಸಿಗುತ್ತಿಲ್ಲ. ಆದ್ದರಿಂದ ಸ್ವ ಇಚ್ಛೆಯಿಂದ ಬಿಎಸ್ಆರ್ ಕಾಂಗ್ರೆಸ್ ಸೇರಿದ್ದೇನೆ.

ವೈಯಕ್ತಿಕ ಜೀವನ ನೆನೆದು ಕಣ್ಣೀರು : ಮಾಜಿ ಸಚಿವ ರೇಣುಕಾಚಾರ್ಯ ಅವರ ಜೊತೆಗಿನ ಘಟನೆಯಿಂದಾಗಿ ವೈಯಕ್ತಿವಾಗಿ ಬಹಳ ದುಖಃವಾಗಿದೆ. ನನ್ನ ಕುಟುಂಬದವರು ಮತ್ತು ನಾನು ಇಂದಿಗೂ ಆ ಘಟನೆಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ಜಯಲಕ್ಮೀ ಕಣ್ಣೀರಿಟ್ಟರು. ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಡಲು ರಾಜಕೀಯವಾಗಿ ಹೋರಾಡುತ್ತೇನೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Nurse Jayalakshmi, who was kicked out of Bigg Boss Kannada reality show, shares her political ambitions, future plans with Oneindia. Jayalakshmi joined BSR Congress on Wednesday, April 3 in Bangalore. She intends to contest in assembly election if Sriramulu gives her ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X