ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟಿಯು ಫಲಿತಾಂಶ ಈಗ ಎಸ್ಎಂಎಸ್ ನಲ್ಲಿ ಲಭ್ಯ

By Mahesh
|
Google Oneindia Kannada News

ಬೆಂಗಳೂರು, ಏ.2: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಅಪಾರ ವಿದ್ಯಾರ್ಥಿ ಸಮೂಹಕ್ಕೆ ಶುಭ ಸುದ್ದಿ ನೀಡಿದೆ. ಈ ಬಾರಿ ಪರೀಕ್ಷೆ ಫಲಿತಾಂಶವನ್ನು ಎಸ್ ಎಂಎಸ್ ಮೂಲಕ ಸುಲಭವಾಗಿ ಪಡೆಯಬಹುದು ಎಂದು ವಿಟಿಯು ಪ್ರಕಟಿಸಿದೆ.

ಬಿಇ, ಎಂಬಿಎ, ಎಂ.ಟೆಕ್ ಹಾಗೂ ಎಂಸಿಎ ಕೋರ್ಸ್ ಗಳ ಪರೀಕ್ಷಾ ಫಲಿತಾಂಶ ಇನ್ಮುಂದೆ ಎಸ್ಎಂಎಸ್ ನಲ್ಲಿ ಸಿಗಲಿದೆ. ಫಲಿತಾಂಶ ನಕಲು ಮಾಡಿ ಇಮೇಲ್ ವಿಳಾಸಕ್ಕೆ ಕಳಿಸಬಹುದಾಗಿದೆ.

ಎಸ್ಸೆಂಎಸ್ ಮೂಲಕ ರಿಸಲ್ಟ್ ನೋಡುವುದು ಸುಲಭ ವಿಧಾನವಾಗಿದೆ. USN ಎಂದು ಕೀ ಮಾಡಿ ಸ್ಪೇಸ್ ಬಿಟ್ಟು ನಿಮ್ಮ ಇ ಮೇಲ್ ವಿಳಾಸ ಹಾಕಿ 5424204ಗೆ ಎಸ್ ಎಂಎಸ್ ಕಳಿಸಿ. ಇದೇ ಮಾದರಿಯಲ್ಲಿ ರೀ ವ್ಯಾಲ್ಯೂಯೇಷನ್ ಪೇಪರ್ ಫಲಿತಾಂಶ ಕೂಡಾ ಪಡೆಯಬಹುದು.

Receive VTU exam results through SMS & E-mail

ಉದಾ: RESULT USN youEmailID to 5424204.
REVAL 4SH12CS007 [email protected] ಎಂದು ಕೀ ಮಾಡಿ 5424204ಗೆ ಕಳಿಸಿ ಉತ್ತರ ಪಡೆಯಬಹುದು. ಇಮೇಲ್ ವಿಳಾಸ ನೀಡದಿದ್ದರೆ ಎಸ್ ಎಂಎಸ್ ನಲ್ಲಿ ಮಾತ್ರ ಫಲಿತಾಂಶ ನೋಡಬಹುದಾಗಿದೆ.

ಫಲಿತಾಂಶ ಪಠ್ಯ ಕ್ರಮ ಸಂಖ್ಯೆ, external marks, internal marks ಹಾಗೂ ಒಟ್ಟಾರೆ ಅಂಕಗಳನ್ನು ತೋರಿಸಲಿದೆ. ವಿದ್ಯಾರ್ಥಿಗಳು ಬಳಸುವ ಮೊಬೈಲ್ ಆಪರೇಟರ್ ಅನುಗುಣವಾಗಿ ಪ್ರತಿ ಎಸ್ ಎಂಎಸ್ ಗೆ 1 ರಿಂದ 3 ರು ಕಟ್ ಆಗಲಿದೆ.

ವಿದ್ಯಾರ್ಥಿಗಳಿಗೆ ತ್ವರಿತವಾಗಿ ಫಲಿತಾಂಶ ಅಂಗೈನಲ್ಲೇ ಲಭ್ಯವಾಗಲಿದೆ. ವಿಟಿಯು ವೆಬ್ ಸೈಟ್ ಸ್ಲೋ ಡೌನ್ ಎಂಬ ಕೊರಗು ನಿವಾರಣೆಯಾಗಲಿದೆ. ಯಾವುದೇ ಕ್ಷಣದಲ್ಲಾದರೂ ಫಲಿತಾಂಶ ಪಡೆಯಲು ಸಾಧ್ಯ. ಬಿಇ ಅಲ್ಲದೆ ಎಂಬಿಎ ಸೇರಿದಂತೆ ಇತರೆ ಕೋರ್ಸ್ ಗಳ ಫಲಿತಾಂಶ ಕೂಡಾ ಸಿಗಲಿದೆ ಎಂದು ವಿಟಿಯು ಉಪ ಕುಲಪತಿ ಎಚ್ ಮಹೇಶಪ್ಪ ಹೇಳಿದ್ದಾರೆ.

ಸೂಚನೆ: ನೀವು ಕಳುಹಿಸುವ ಎಸ್ಸೆಂಎಸ್ 160 ಅಕ್ಷರಗಳ ಮಿತಿ ಮೀರದಿರಲಿ. ಆದಷ್ಟು ಚುಟುಕಾಗಿ ಎಸ್ ಎಂಎಸ್ ಕಳಿಸಿ. ವಿಟಿಯು 12ನೇ ಕಾನ್ವೋಕೇಷನ್ ಏ.5 ರಂದು ಬೆಳಗಾವಿಯಲ್ಲಿ ನಡೆಯಲಿದ್ದು,ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ, ಅಣುಶಕ್ತಿ ಕಮಿಷನ್ ಮಾಜಿ ಮುಖ್ಯಸ್ಥ ಎಂ.ಆರ್ ಶ್ರೀನಿವಾಸನ್ ಅವರು ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. 48460 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತದೆ. ಪ್ರತಿ ವರ್ಷ 3.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಟಿಯು ಪ್ರಕಟಿಸಿದೆ.

English summary
Visvesvaraya Technological University (VTU), Belgaum has introduced the new system to provide the exam results through SMS. The students of BE, MBA, M.Tech and MCA courses can check their exam results by SMS and also, is they specify E-mail address, a copy of the result is sent to their mailbox.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X