ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಗಟ್ಟೆ ಮಾಹಿತಿ ಮೊಬೈಲ್ ನಲ್ಲಿ ಸಿಗುತ್ತೆ

|
Google Oneindia Kannada News

Anil Kumar Jha
ಬೆಂಗಳೂರು, ಏ.2 :ನಿಮ್ಮ ಹತ್ತಿರ ಗುರತಿನ ಚೀಟಿ ಇದೆ. ಮತ ಪಟ್ಟಿಯಲ್ಲಿ ಹೆಸರು ಇದೆ ಆದರೆ, ಯಾವ ಮತಗಟ್ಟೆಯಲ್ಲಿ ಮತ ಹಾಕಬೇಕು ಎಂದು ತಿಳಿದಿಲ್ಲವೇ? ಕೇವಲ ಒಂದು ಎಸ್ಎಂಎಸ್ ಮಾಡಿ, ನೀವು ಯಾವ ಮತಗಟ್ಟೆಯಲ್ಲಿ ಮತ ಹಾಕಬೇಕು ಎಂಬ ಮಾಹಿತಿ ಮೊಬೈಲ್ ಗೆ ಬರುತ್ತದೆ. ಇಂತಹ ನೂತನ ವ್ಯವಸ್ಥೆಗೆ ಚುನಾವಣಾ ಆಯೋಗ ಚಾಲನೆ ನೀಡಿದೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಮತದಾರರಿಗೆ ಮತಗಟ್ಟೆಯ ಬಗ್ಗೆ ಆಗುವ ಗೊಂದಲ ತಪ್ಪಿಸಲು ಎಸ್ಎಸ್ಎಂ ಮೂಲಕ ಮತಗಟ್ಟೆಯ ವಿಳಾಸ ತಿಳಿಸುವ ನೂತನ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

kaepic ಎಂದು ಟೈಪ್ ಮಾಡಿ, ಸ್ಪೇಸ್ ಬಿಟ್ಟು ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಟೈಪ್ ಮಾಡಿ 9243355223 ನಂಬರ್ ಗೆ ಎಸ್ಎಸ್ಎಂ ಮಾಡಿದರೆ, ನೀವು ಮತದಾನ ಮಾಡಬೇಕಾದ ಮತಗಟ್ಟೆಯ ಸಂಪೂರ್ಣ ವಿವರ ನಿಮ್ಮ ಮೊಬೈಲ್ ನಲ್ಲಿ ಲಭ್ಯವಾಗಲಿದೆ ಎಂದು ಅನಿಲ್ ಕುಮಾರ್ ತಿಳಿಸಿದರು.

ಸಹಾಯವಾಣಿ : ಚುನಾವಣಾ ಸಂಬಂಧಿ ದೂರುಗಳನ್ನು ನೀಡಲು ಆರಂಭಿಸಿರುವ ಉಚಿತ 1950 ನಂಬರ್ ಗೆ ದಿನಕ್ಕೆ 600 ರಿಂದ 800 ಕರೆಗಳು ಬರುತ್ತಿವೆ. ಈ ನಂಬರ್ ಗೆ ಇನ್ನಷ್ಟು ಲೈನ್ ಆಳವಡಿಸಿ ಕಾರ್ಯವ್ಯಾಪ್ತಿ ವಿಸ್ತರಿಸಲಾಗುವುದು ಎಂದರು.

ಹೆಸರು ಸೇರಿಸಿ : ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಫಾರಂ 6 ಭರ್ತಿಮಾಡಿದ ಮತದಾರರು, ಎಲೆಕ್ಷನ್ ಕಮಿಷ್ ನ್ ವೆಬ್ ಸೈಟ್ http://ceokarnataka.kar.nic.in ಗೆ ಭೇಟಿ ನೀಡಿ, ನಿಮ್ಮ ಹೆಸರು, ವಿಧಾನಸಭೆ ಕ್ಷೇತ್ರ ಭರ್ತಿ ಮಾಡಿದರೆ, ಮತ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆಯೇ ಎಂಬ ಮಾಹಿತಿ ದೊರಕಲಿದೆ ಎಂದು ಹೇಳಿದರು.

ಜಿಲ್ಲೆಗೆ ಒಬ್ಬರು ಐಪಿಎಸ್ ಅಧಿಕಾರಿ : ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಗೆ ಒಬ್ಬರಂತೆ ಐಪಿಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗುವುದು ಎಂದು ಅನಿಲ್ ಕುಮಾರ್ ತಿಳಿಸಿದರು. ನಾಮಪತ್ರ ಸಲ್ಲಿಕೆಯಾದ ನಂತರ ಇವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು.

ಮತದಾನದ ಅವಧಿ ಕಡಿತಗೊಳಿಸಿರುವ ಕುರಿತು ಕೇಂದ್ರ ಚುನಾವಣಾ ಆಯೋಗದಿಂದ ಮಾಹಿತಿ ಪಡೆದುಕೊಂಡು ವಿವರಣೆ ನೀಡುವುದಾಗಿ ಅವರು ತಿಳಿಸಿದರು. ಮೂರು ದಿನಗಳಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಕೆಲವು ಅಧಿಕಾರಿಗಳ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Chief Electoral Officer (CEO) Anil Kumar Jha announced that, citizens can now get the location of their polling station via SMS. On Monday, April, 1 he addressed the press meet and said, People can now message their EPIC number to 92433 55223 for details of the polling station where they have to cast their votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X