ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಸೋದರರ 1200 ಕೋಟಿ ಡೀಲ್

By Mahesh
|
Google Oneindia Kannada News

Ambani Brothers Strike Rs 1,200 Crore Deal
ಮುಂಬೈ, ಏ.2: ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಅವರು ತಮ್ಮ ಅನಿಲ್ ಅಂಬಾನಿ ಜೊತೆ ಮಂಗಳವಾರ(ಏ.2) 1200 ಕೋಟಿ ಡೀಲ್ ಮಾಡಿಕೊಂಡಿದ್ದಾರೆ.

ಟೆಲಿಕಾಂ ಕ್ಷೇತ್ರದ ಬಹುದೊಡ್ಡ ಒಪ್ಪಂದ ಇದಾಗಿದ್ದು, ಡೀಲ್ ಪ್ರಕಾರ ಮುಖೇಶ್ ಅವರ ಸಂಸ್ಥೆ ಅನಿಲ್ ಅವರ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಬಳಸಿ ಟೆಲಿಕಾಂ ಸಂಸ್ಥೆ 4ಜಿ ಜಾಲವನ್ನು ವಿಸ್ತರಿಸಲಿದೆ.

ರಿಲಿಯನ್ಸ್ Jio ಇನ್ಫೋ ಕಾಂ ಲಿ ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದ್ದು 1200 ಕೋಟಿ ಮೌಲ್ಯದ ಒಪ್ಪಂದ ಇದಾಗಿದ್ದು Rcom ನ ಇಂಟರ್ ಸಿಟಿ ಕೇಬಲ್ ನೆಟ್ವರ್ಕ್ ಸೌಲಭ್ಯ ಬಳಸಲು ಮಾತ್ರ ಒಪ್ಪಂದವಾಗಿದೆ. ಸುಮಾರು 1,20,000 ಕಿ.ಮೀ ಇಂಟರ್ ಸಿಟಿ ಆಪ್ಟಿಕಲ್ ಫೈನರ್ ನೆಟ್ವರ್ಕ್ ಬಳಸಿ 4ಜಿ ಸೇವೆಯನ್ನು ರಿಲಯನ್ಸ್ ನೀಡಲಿದೆ.

ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆ ರಿಲಯನ್ಸ್ ಕಮ್ಯೂನಿಕೇಷನ್ ಷೇರುಗಳ ಜಿಗಿತ ಆರಂಭವಾಯಿತು. ಮಂಗಳವಾರ ( ಏ.2) ಬಿಎಸ್ ಇನಲ್ಲಿ ಮಾರುಕಟ್ಟೆ ಮುಕ್ತಾಯದ ವೇಳೆಗೆ 63.30 ರುನಂತೆ ಶೇ 10.86 ರಷ್ಟು ಏರಿಕೆ ಕಂಡಿತ್ತು. ದಿನದ ಆರಂಭದಲ್ಲಿ ಷೇರುಗಳ ಬೆಲೆ 57.10 ರು ನಷ್ಟಿತ್ತು.ಇದೇ ವೇಳೆ ಎನ್ ಎಸ್ ಇನಲ್ಲಿ 63.45ರ ದರದಂತೆ ಶೇ 11.22 ರಷ್ಟು ಏರಿಕೆ ಕಂಡಿತ್ತು. 6 ರು ನಷ್ಟು ಏರಿಕೆಯಾಗಿದೆ.

4.4 ಮೆಗಾ ಹರ್ಡ್ಜ(Mhz) ಮೇಲ್ಪಟ್ಟ 2ಜಿ ತರಂಗಗುಚ್ಛ ಹೊಂದಿರುವ ಜಿಎಸ್ ಎಂ ಸೇವೆ ನೀಡಿರುವ ಎಲ್ಲಾ ಸಂಸ್ಥೆಗಳು ಒಂದೇ ಬಾರಿಗೆ ಶುಲ್ಕ ಪಾವತಿಸತಕ್ಕದ್ದು ಎಂದು Empowered Group of Ministers (EGoM) ಆದೇಶ ಹೊರಡಿಸಿದಾಗ ರಿಲಯನ್ಸ್ ಸಂಸ್ಥೆಗೆ ಭಾರ್ ಹೊಡೆತ ಬಿದ್ದಿತ್ತು. 20 ವರ್ಷದ ಲೈಸನ್ಸ್ ಅವಧಿಯ ಮೊತ್ತವನ್ನು ಟೆಲಿಕಾಂ ಸಂಸ್ಥೆಗಳು ಪಾವತಿಸಬೇಕಾಗಿದೆ.

ರಿಲಯನ್ಸ್ ಸುಮಾರು 9,906 ಕೋಟಿ ರು ಶುಲ್ಕ ಪಾವತಿಸಬೇಕಾಗುತ್ತದೆ. ಭಾರ್ತಿ ಏರ್ ಟೆಲ್ ಸಂಸ್ಥೆ 4,400 ಕೋಟಿ ರು, ವೋಡಾಫೋನ್ ಸಂಸ್ಥೆ 2,836 ಕೋಟಿ ರು ಹಾಗೂ ಐಡಿಯಾ ಸೆಲ್ಯುಲಾರ್ 2,499 ಕೋಟಿ ರು ಪಾವತಿಸಬೇಕಾಗಿದೆ.

English summary
Reliance Jio Infocomm Ltd and Reliance Communications Ltd today announced the signing of a definitive agreement for approximately Rs 1,200 crore for sharing RCOM's nationwide inter-city fibre optic network infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X