• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರಿನಲ್ಲಿ ಮಹಿಳೆಯ ಅಪಹರಣ, ಗ್ಯಾಂಗ್ ರೇಪ್

By Srinath
|

ನವದೆಹಲಿ, ಏ.1: ರಾಷ್ಟ್ರ ರಾಜಧಾನಿ ಮತ್ತೆ ಕಾಮುಕರ ಅಟ್ಟಹಾಸದಿಂದ ನರಳಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 35 ವರ್ಷದ ಮಹಿಳೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಮೇಲೆ ರೇಪ್ ನಡೆದಿದೆ.

ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಮೂವರು ಕಾಮುಕರಿಂದ ಮಹಿಳೆಯ ಮಾನಭಂಗವಾಗಿದ್ದರೆ ನೋಯ್ಡಾದಲ್ಲಿ ರಸ್ತೆ ಬದಿ ನಡೆದುಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಕಾರಿನೊಳಕ್ಕೆ ಎಳೆದೊಯ್ದು ರೇಪ್ ಮಾಡಲಾಗಿದೆ.

ಮೊದಲ ಪ್ರಕರಣದಲ್ಲಿ... ಕ್ಯಾಬ್ ಡ್ರೈವರ್ ಗಳು ಮಹಿಳೆಯ ಮೇಲೆ ಕುಕೃತ್ಯವೆಸಗಿದ್ದಾರೆ. ವಸಂತ ವಿಹಾರದಲ್ಲಿರುವ ತನ್ನ ಮನೆಗೆ ಡ್ರಾಪ್ ಕೇಳಿದ್ದ ಮಹಿಳೆಯ ಮೇಲೆ ಮುಗಿಬಿದ್ದಿದ್ದಾರೆ. ಗುರ್ ಗಾಂವ್ ನ ಸಹಾರಾ ಮಾಲ್ ಬಳಿ ಮಹಿಳೆಯನ್ನು ತಮ್ಮ ಕಾರಿನೊಳಕ್ಕೆ ಎಳೆದುಕೊಂಡ ಕಾಮುಕರು ಚಲಿಸುತ್ತಿದ್ದ ಕಾರಿನಲ್ಲೇ ಆಕೆಯ ಮಾನಭಂಗ ಮಾಡಿದ್ದಾರೆ.

ತಡರಾತ್ರಿ ನಾನು, ನನ್ನ ಅಕ್ಕನ ಜತೆ ಸಹಾರಾ ಮಾಲ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದೆವು. ಯಾವುದೇ ಬಸ್ ಸಿಗಲಿಲ್ಲ. ಆದರೆ ಕಾರೊಂದು ನಮ್ಮ ಬಳಿ ಸಾಗಿ ಬಂದಿತು. ಕಾರಿನ ಚಾಲಕ ಡ್ರಾಪ್ ಕೊಡುವ ಆಮಿಷವೊಡ್ಡಿದ.

ಆದರೆ ದೆಹಲಿಯೊಳಕ್ಕೆ ಪ್ರವೇಶಿಸುತ್ತಿದ್ದಂತೆ ವಸಂತ ವಿಹಾರಕ್ಕೆ ತೆರಳುವ ಬದಲು ಸರಿತಾ ವಿಹಾರದತ್ತ ತೆರಳಿದರು. ಮಾರ್ಗ ಮಧ್ಯೆ ಅಕ್ಕನನ್ನು ಮಥುರಾ ರಸ್ತೆಯಲ್ಲಿ ಓಕ್ಲಾ ಟ್ಯಾಂಕ್ ಬಳಿ ಇಳಿಸಿಬಿಟ್ಟರು. ಆದರೆ ನನ್ನನ್ನು ದಕ್ಷಿಣ ದೆಹಲಿಯ ಸಹೀನಾ ಬಾಗ್ ಪ್ರದೇಶದಲ್ಲಿರುವ ತಮ್ಮ ಫ್ಲಾಟಿಗೆ ಕರೆದೊಯ್ದರು.

ಅಲ್ಲಿ ಅಪಾರ್ಟ್ ಮೆಂಟಿನಲ್ಲಿ ನನ್ನ ಮೇಲೆ ಬಲಾತ್ಕಾರ ಮಾಡಿದರು. ದೈಹಿಕವಾಗಿ ಥಳಿಸಿದರು. ರೇಪ್ ಮಾಡಿದ ಬಳಿಕ ನನ್ನನ್ನು ವಸಂತ ವಿಹಾರಕ್ಕೆ ಕರೆತಂದು ಬಿಟ್ಟುಹೋದರು. ಅಲ್ಲಿಂದ ತಕ್ಷಣ ಅವರು ಪರಾರಿಯಾದರು ಎಂದು ಬಾಧಿತ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi- Woman abducted gangraped in moving car. A women was abducted and gangraped by three men in a moving car in South Delhi. In another incident, a 10th standard student was raped after she was dragged into car in Noida. The victim was walking on road when she was allegedly dragged into the car in Noida. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more