ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿ ಮೊದಲೋ ಮೊಟ್ಟೆ ಮೊದಲೋ : ಸಂಶೋಧನೆ

|
Google Oneindia Kannada News

egg and chicken
ಕೆನಡಾ, ಮಾ. 31 : ಕೋಳಿ ಮೊದಲೋ ಮೊಟ್ಟೆ ಮೊದಲೋ? ಎಂದು ಯಾರಿಗಾದರೂ ಕೇಳಿ ನೋಡಿ. ಹೋಗ್ ಮರಾಯ ತಲೆ ತಿನ್ನಬೇಡ ಎಂದು ನಿಮ್ಮನ್ನು ಸಾಗ ಹಾಕುತ್ತಾರೆ. ಮೊಟ್ಟೆ ಮೊದಲು ಎನ್ನಲಾಗದು. ಏಕೆಂದರೆ ಅದನ್ನಿಡುವುದಕ್ಕೆ ಕೋಳಿ ಅಗತ್ಯ. ಮೊದಲು ಕೋಳಿ ಎಂದರೆ, ಮೊಟ್ಟೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಬರುತ್ತದೆ.

ಈ ಗೊಂದಲ ಪರಿಹರಿಸಲು ಆಲೋಚಿಸಿದ ಕೆನಡಾದ ಕೆಲವು ವಿಜ್ಞಾನಿಗಳು ಕೋಳಿ ಮತ್ತು ಮೊಟ್ಟೆ ಪ್ರತ್ಯೇಕವಾದದ್ದು. ಕೋಳಿ ಮೊಟ್ಟೆ ಮತ್ತು ಕೋಳಿ ಒಂದೇ ಜೀವ ಸಂತತಿಯಿಂದ ಬಂದಿದ್ದಲ್ಲ ಬೇರೆ-ಬೇರೆ ಎಂಬ ವಾದ ಮಂಡಿಸಿದ್ದಾರೆ. ಅದು ಹೇಗೆ ಎಂದು ನಮ್ಮನ್ನು ಕೇಳಬೇಡಿ ಈ ವಿಜ್ಞಾನಿಗಳ ಸಂಶೋದನಾ ವರದಿ ಓದಿ.

ಕೆನಡಾದ ಕಾಲ್‌ಗರಿ ವಿಶ್ವವಿದ್ಯಾಲಯದ ತಜ್ಞ ಡಾರ್ಲ್ ಝೆಲೆಂಟ್‌ಸ್ಕಿ ಪ್ರಕಾರ ಕೋಳಿ ಮೊದಲಲ್ಲ. ಮೊಟ್ಟೆ ಮೊದಲಂತೆ. ಅದಕ್ಕೆ ಅವರು ಕೊಡುವ ಕಾರಣವೂ ಅಚ್ಚರಿ ಮೂಡಿಸುತ್ತದೆ. ಈಗ ನಾವು ಕಾಣುತ್ತಿರುವ ಕೋಳಿ ಮೊಟ್ಟೆಯಿಂದ ತಕ್ಷಣ ಹುಟ್ಟಿಕೊಂಡಿಲ್ಲ.

ಹಕ್ಕಿಯೊಂದು ನಿಧಾನವಾಗಿ ವಿಕಾಸಗೊಂಡು ಕೋಳಿ ರೂಪ ಪಡೆದಿದೆ. ಹಕ್ಕಿಯು ಹಲವು ಮಜಲುಗಳಲ್ಲಿ ರೂಪಾಂತಗೊಂಡು, ನಿಧಾನವಾಗಿ ಅದು ಕೋಳಿಯನ್ನು ಹೋಲುವ ಹಕ್ಕಿಯಾಗಿ ಪರಿವರ್ತನೆ ಆಗಿದೆ. ಹಕ್ಕಿಯೊಂದರ ಡಿಎನ್‌ಎ ಪರಿವರ್ತನೆ ಮೂಲಕ ಹೊಸ ಸ್ವರೂಪ ಪಡೆದುಕೊಳ್ಳುತ್ತಾ ಬಂದು ನಾವು ನೋಡುತ್ತಿರುವ ಕೋಳಿಯಾಗಿದೆ.

ಈ ವಿಕಾಸ ಪ್ರಕ್ರಿಯೆ ಹಲವು ವರ್ಷಗಳು ನಡೆದಿವೆ. ನಂತರ ಒಂದು ಹಂತದಲ್ಲಿ ಕೋಳಿಯಂತೆ ಇರುವ ಹಕ್ಕಿ ರೂಪಗೊಂಡಿದೆ. ಈ ಹಕ್ಕಿ ಇಟ್ಟ ಮೊಟ್ಟೆಯಿಂದ ಬಂದ ಮರಿ ಈಗ ನಮ್ಮೆದುರು ಇರುವ ನಿಜವಾದ ಕೋಳಿ. ಆದ್ದರಿಂದ ನಾವು ಮೊಟ್ಟೆಯಿಂದ ಕೋಳಿ ಬಂತು ಎಂದು ನಂಬಿದ್ದೇವೆ.

ಈ ವಿಕಾಸವಾದ ಸುಮಾರು 150 ದಶಲಕ್ಷ ವರ್ಷಗಳ ಹಿಂದೆ ನಡೆದದ್ದು ಎಂದು ಹೇಳುತ್ತಾರೆ ಸಂಶೋಧಕರು.
ಸಂಶೋಧನೆ ಪ್ರಕಾರ, ಕೋಳಿ ಮೊಟ್ಟೆ ಮತ್ತು ಕೋಳಿ ಒಂದೇ ಜೀವ ಸಂತತಿಯಿಂದ ಬಂದಿದ್ದಲ್ಲ. ಇವತ್ತಿನ ಕೋಳಿಯಾಗುವುದಕ್ಕೆ ಮೊದಲು ಡಿಎನ್‌ಎ ರೂಪಾಂತರಗಳಾಗಿ ಕೋಳಿಯಾಗಿ ಬದಲಾವಣೆಗೊಂಡಿದೆ.

ಹಿಂದಿನ ಸಂಶೋಧನೆ : ಕೆಲವು ವರ್ಷಗಳ ಹಿಂದೆ ಇಂಗ್ಲೆಂಡ್‌ನ ಶೆಫೀಲ್ಡ್ ವಿಶ್ವವಿದ್ಯಾಲಯದ ತಜ್ಞರು ಮಂಡಿಸಿದ್ದ 'ಕೋಳಿ ಮೊದಲು' ಎಂಬ ವಾದ ಭಾರಿ ಚರ್ಚೆಗೆ ಕಾರಣವಾಗಿತ್ತು. ಮೊಟ್ಟೆ ರೂಪುಗೊಂಡಿದ್ದು ಪ್ರೊಟೀನ್‌ನಿಂದ. ಹಾಗಿದ್ದರೆ ಈ ಪ್ರೊಟೀನ್ ಎಲ್ಲಿಂದ ಬಂತು? ಅದು ಕೋಳಿಯ ಅಂಡಾಣುವಿನಿಂದ ರೂಪುಗೊಂಡಿತು. ಹಾಗಿದ್ದರೆ ಕೋಳಿಯೇ ಮೊದಲಲ್ಲವೇ ಎನ್ನುವುದು ಅವರ ವಾದವಾಗಿತ್ತು.

ಆದರೆ ಕೆನಡಾದ ವಿಕಾಸವಾದದ ಸಂಶೋಧನೆ ನೂತನ ಮಾಹಿತಿ ಕೊಟ್ಟಿದೆ. ಇದನ್ನು ಜನರು ನಂಬುತ್ತಾರಾ? ಅಥವ ಆರಾಮವಾರಿ ಕೋಳಿ, ಮೊಟ್ಟೆ ಎರಡು ತಿಂದುಕೊಂಡು ಆರಾಮವಾಗಿ ಇರುತ್ತಾರಾ? ಎಂದು ಕಾದು ನೋಡಬೇಕು.

ಇದನ್ನು ಓದಿ

ಕೋಳಿ ಮೊದಲೊ? ಮೊಟ್ಟೆ ಮೊದಲೊ? ಇಲ್ಲಿದೆ ಉತ್ತರಕೋಳಿ ಮೊದಲೊ? ಮೊಟ್ಟೆ ಮೊದಲೊ? ಇಲ್ಲಿದೆ ಉತ್ತರ

English summary
Canadas Calgary University research says egg and chicken were different. A bird From long term DNA development chicken will introduced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X