ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಬ್ಲೂಫಿಲಂ: ಶಾಸಕ ರಘುಪತಿ ಭಟ್ ಭಾಗಿ?

By Srinath
|
Google Oneindia Kannada News

udupi-mla-raghupathi-bhat-blue-film-erupts-but-denies
ಉಡುಪಿ, ಮಾ.28: ಸ್ಥಳೀಯ ಶಾಸಕ ರಘುಪತಿ ಭಟ್ ಅವರನ್ನು ಮತ್ತೊಂದು ಹಗರಣ ಸುತ್ತಿಕೊಂಡಿದೆ. ಈಗಾಗಲೇ ಬ್ಲೂ ಫಿಲಂ ಕುಖ್ಯಾತಿಗೆ ಆಹಾರವಾಗಿರುವ ಬಿಜೆಪಿ ಸರಕಾರಕ್ಕೆ ಇದರಿಂದ ತೀವ್ರ ಮುಜುಗುರ ಅನುಭವಿಸಿದಂತಾಗಿದೆ. ಅದೂ ಚುನಾವಣೆ ಕಾಲದಲ್ಲಿ ಇಂತಹ ಹಗರಣ ಹೊರಬಂದಿರುವುದರಿಂದ ಪಕ್ಷ ಕೆಂಗಣ್ಣಿಗೆ ಗುರಿಯಾಗಿದೆ.

ಶಾಸಕ ರಘುಪತಿ ಭಟ್ ಅವರು ಯುವತಿಯೊಬ್ಬಳ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಜಿಲ್ಲೆಯಾದ್ಯಂತ 15 ದಿನಗಳಿಂದ ಹರಿದಾಡುತ್ತಿದ್ದು, ಇಂದು ಬೆಳಗ್ಗೆ ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಸದರಿ ಬ್ಲೂಫಿಲಂ ಅನ್ನು ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದಾರೆ.

ಆದರೆ ಈ ಸಿಡಿ ವಿಡಿಯೋ ಇಂದು ಬೆಳಗ್ಗೆಯಷ್ಟೇ ತಮ್ಮ ಕೈಗೆ ಲಭ್ಯವಾಗಿದೆ. ಇದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ. ಇದರಲ್ಲಿರುವುದು ಖಂಡಿತಾ ನಾನಲ್ಲ. ಚುನಾವಣೆ ಕಾಲದಲ್ಲಿ ನನ್ನ ತೇಜೋವಧೆ ನಡೆದಿದೆ ಎಂದು ವಿಡಿಯೋದಲ್ಲಿ ತಾವು ಸೆಕ್ಸ್ ನಲ್ಲಿ ಭಾಗಿಯಾಗಿರುವುದನ್ನು ಶಾಸಕ ರಘುಪತಿ ಭಟ್ ಅಲ್ಲಗಳೆದಿದ್ದಾರೆ.

ಶಾಸಕ ರಘುಪತಿಯ ಹಿಂದಿನ 2 ಹಗರಣಗಳು:
1. ಶಾಸಕರಾಗಿ ಆಯ್ಕೆಯಾದ ಹೊಸದರಲ್ಲೇ ಪತ್ನಿ ಪದ್ಮಪ್ರಿಯಾ ಕೊಲೆ ಕೇಸ್ ಹಗರಣ ಸುತ್ತಿಕೊಂಡಿತ್ತು. ಹಾಗೆ ನೋಡಿದರೆ ಕಮಲ ಪಕ್ಷದ ಸರಕಾರಕ್ಕೆ ಮೆತ್ತಿಕೊಂಡ ಮೊದಲ ಕೆಸರು ಇದಾಗಿತ್ತು.

2. ಪಡುಬಿದ್ರೆ ಬಳಿ ಕೆಐಎಡಿಬಿ ಭೂಸ್ವಾಧೀನ ಮಾಡಿದ ಸುಮಾರು 110 ಎಕರೆಯಲ್ಲಿ 44 ಎಕರೆಯಷ್ಟು ಜಮೀನನ್ನು 2002ರಲ್ಲಿ ಉಡುಪಿಯ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಡಿನೋಟಿಫಿಕೇಶನ್ ಮಾಡಿಸಿ, ನಂತರ ಈ ಜಾಗವನ್ನು ರೈತರ ಮುಖಾಂತರ ತನ್ನ ಸ್ನೇಹಿತ ಮುಂಬೈ ಉದ್ಯಮಿಗೆ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪ ಹೊರೆಸಿದೆ.

[ಉಡುಪಿ ಕ್ಷೇತ್ರ ಪರಿಚಯ]

English summary
Udupi BJP MLA Raghupathi Bhat Bluefilm erupts but he denies. The CD in question, which several media houses also have accessed, reportedly contains explicit sex scenes. “I am feeling hurt and humiliated, surprised and shocked. This is my character assassination. I have not committed any mistake. This is part of a political conspiracy to finish off my career” Bhat said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X