ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಮಾನಿತ ರಘುಪತಿ ಭಟ್ ಚುನಾವಣೆಯಿಂದ ಔಟ್

|
Google Oneindia Kannada News

 Humiliated Udupi MLA Raghupati Bhat not to Contest upcoming Assembly Election
ಉಡುಪಿ, ಮಾ 28: ಬ್ಲೂ ಫಿಲಂ ಕುಖ್ಯಾತಿಗೆ ಆಹಾರವಾಗಿರುವ ಶ್ರೀಕೃಷ್ಣನ ನೆಲೆಬೀಡು ಉಡುಪಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಘುಪತಿ ಭಟ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಚುನಾವಣೆಯ ಈ ಸಂದರ್ಭದಲ್ಲಿ ನನ್ನಿಂದ ಪಕ್ಷಕ್ಕೆ ಮುಜುಗರ ಅಥವಾ ಹಿನ್ನಡೆಯಾಗುವುದು ಬೇಡ ಎನ್ನುವ ಉದ್ದೇಶದಿಂದ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.

ರಾಜಧಾನಿ ಬೆಂಗಳೂರಿನ ಮಾಧ್ಯಮ ಕಚೇರಿಗೆ ಬ್ಲೂಫಿಲಂ ಅನ್ನು ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದಾರೆ. ನೇರವಾಗಿ ಬಿಜೆಪಿಯನ್ನು ಕ್ಷೇತ್ರದಲ್ಲಿ ಎದುರಿಸಲಾಗದ ರಣಹೇಡಿಗಳ ಕೃತ್ಯವಿದು.

ನನ್ನ ತೇಜೋವಧೆಗೆ ಮಾಡಿದ ವ್ಯವಸ್ಥಿತಿತ ಷಡ್ಯಂತ್ರವಿದು. ಕ್ಷೇತ್ರದ ಮತ್ತು ರಾಜ್ಯದ ಜನತೆಗೆ ನಾನು ಹೇಳುವುದಿಷ್ಟೇ ಆ ಸಿಡಿಯಲ್ಲಿರುವ ವ್ಯಕ್ತಿ ನಾನವನಲ್ಲ..ನಾನವನಲ್ಲ..ನಾನವನಲ್ಲ..

ಬುಧವಾರ (ಮಾ 28) ರಾತ್ರಿ ನಾನು ಈ ಸಿಡಿಯನ್ನು ನೋಡಿದೆ. ಇದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ. ಸಿಡಿಗೆ ಸಂಬಂಧಪಟ್ಟ ತನಿಖೆ ಮುಗಿಯುವವರೆಗೆ ನಾನು ರಾಜಕೀಯದಲ್ಲಿರುವುದಿಲ್ಲ ಎಂದು ರಘುಪತಿ ಭಟ್ ಹೇಳಿದ್ದಾರೆ.

ಈ ಸಿಡಿ ಬಹಿರಂಗವಾಗುವ ಮುನ್ನವೇ ಖಚಿತ ಮೂಲಗಳಿಂದ ನಮಗೆ ಸಿಕ್ಕ ಮಾಹಿತಿ ಪ್ರಕಾರ ರಘುಪತಿ ಭಟ್ ಅವರಿಗೆ ಈ ಬಾರಿ ಟಿಕೆಟ್ ನೀಡದೇ ಇರಲು ಪಕ್ಷ ನಿರ್ಧರಿಸಿತ್ತು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.

English summary
Humiliated Udupi sitting MLA Raghupati Bhat said that he would not contest in the upcoming assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X