ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ ವಿರುದ್ಧ ಅಪ್ಪನಿಗೆ ದೂರು ನೀಡಿದ ವಿಜಯೇಂದ್ರ

By Srinath
|
Google Oneindia Kannada News

ಬೆಂಗಳೂರು, ಮೇ 27: ಕರ್ನಾಟಕ ಜನತಾ ಪಕ್ಷದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕುರಿತಾದ ರಗಳೆ ಇನ್ನೂ ಬಗೆಹರಿದಿಲ್ಲ ಅನಿಸುತಿದೆ. ಶೋಭಾ high handednessನಿಂದಾಗಿ ಯಡಿಯೂರಪ್ಪನವರ ಅನೇಕ ನಿಷ್ಠಾವಂತರು ಕೆಜೆಪಿಗೆ ಸೇರ್ಪೆಡೆಯಾಗಲು ಹಿಂದೇಟುಹಾಕುತ್ತಿರುವುದು ಹಳೆಯ ಸುದ್ದಿ.

ತಾಜಾ ಏನೆಂದರೆ ಈ ಬಾರಿ ಯಡಿಯೂರಪ್ಪನವರ ಹಿರಿಯ ಪುತ್ರ ವಿಜಯೇಂದ್ರ ಮೇಡಂ ಶೋಭಾ ವಿರುದ್ಧ ತಿರುಗಿಬಿದ್ದಿದ್ದು, ಆ ಬಗ್ಗೆ ಅಪ್ಪನಿಗೆ ದೂರು ನೀಡಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸುವ ವಿಷಯದಲ್ಲಿ ಶೋಭಾ ಮತ್ತು ವಿಜಯೇಂದ್ರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ ಎನ್ನಲಾಗಿದೆ.

Rift between Shobha Karandlaje by BS Vijayendra

ಕೆಜೆಪಿ ಕೋರ್ ಕಮಿಟಿಯಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಶೋಭಾ, ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರಗೆ ಟಾಂಗ್ ಕೊಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಸಾಕ್ಷಾತ್ ಯಡಿಯೂರಪ್ಪನವರ ಕುಲಪುತ್ರನಿಗೇ ಶೋಭಾ ಟಾಂಗ್ ಕೊಡಲು ಮುಂಧಾಗಿದ್ದು ಏಕೆ ಎಂಬುದು ಕುತೂಹಲಕಾರಿಯಾಗಿದೆ.

ಶೋಭಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಜಯೇಂದ್ರಗೆ ಮಾರಕವಾಗುವ ಹಾಗೆ ರಾಜಕೀಯ ನಡೆಯಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿ ಫಾರಂ ರಗಳೆ: ಶೋಭಾ ಅವರು ರಾಜಾಜಿನಗರದಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು, ಟಿಕೆಟ್ ಸಹ ಪಡೆದಿದ್ದಾರೆ. ಆದರೆ ಅಲ್ಲಿ ಬಲಾಢ್ಯ ಸುರೇಶ್ ಕುಮಾರ್ ಅವರನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಮೇಡಂ ಶೋಭಾ ಅವರು ಅಳೆದೂ ಸುರಿದು ತಮ್ಮ ರಾಜಕೀಯ ನಡೆಗಳನ್ನು ಎತ್ತಿಡುತ್ತಿದ್ದಾರೆ. ಎಲ್ಲೆಲ್ಲಿಂದ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಬೇಕೋ ಅಲ್ಲಿಗೆಲ್ಲಾ ಲಗ್ಗೆ ಹಾಕಿದ್ದಾರೆ.

ಆ ಪ್ರಯತ್ನದಲ್ಲಿ ... ಕ್ಷೇತ್ರದ ಲಿಂಗಾಯಿತರ ಮತಗಳನ್ನು ಬಾಚಿಕೊಳ್ಳಲು ನೊಳಂಬ ವೀರಶೈವ ಸಂಘದ ಅಧ್ಯಕ್ಷ ಚಂದ್ರಶೇಖರ್ ಅವರ ಬೆಂಬಲ ನೆಚ್ಚಿಕೊಂಡಿದ್ದಾರೆ. ಚಂದ್ರಶೇಖರ್, ತಮ್ಮ ಗೆಲುವಿಗೆ ಊರುಗೋಲು ಆಗಲಿದ್ದಾರೆ ಎಂಬ ಸೂಕ್ಷ್ಮವನ್ನು ಶೋಭಾ ಅರ್ಥೈಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅರಸೀಕೆರೆಯಲ್ಲಿರುವ ಚಂದ್ರಶೇಖರ್ ಅವರ ಸೋದರ ಪ್ರಸನ್ನಗೆ ಶೋಭಾ ಅಭಯ ಹಸ್ತ ನೀಡಿದ್ದಾರೆ.

Hidden Agenda: ಅಂದರೆ ಪ್ರಸನ್ನ ಅವರನ್ನು ಅರಸೀಕೆರೆ ಕ್ಷೇತ್ರದಿಂದ ಕಣಕ್ಕಿಳಿಸಲು ಶೋಭಾ ಮುಂದಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಪ್ರಸನ್ನ ಅಷ್ಟಾಗಿ ಪರಿಚಿತರಲ್ಲ. ಹಾಗಾಗಿ, ಪ್ರಸನ್ನರನ್ನು ಕಣಕ್ಕೆ ಇಳಿಸಬೇಕೆಂಬ ತಮ್ಮ ಹಿಡನ್ ಅಜೆಂಡಾ ಶೋಭಾ ಮಂಡಿಸಿದ್ದೇ ವಿಜಯೇಂದ್ರ ಕೆಂಡಾಮಂಡಲರಾಗಿದ್ದಾರೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಜಯೇಂದ್ರ ಅವರು ಯಡಿಯೂರಪ್ಪ ಅವರಿಗೆ ದೂರು ನೀಡುವ ಮಟ್ಟಕ್ಕೂ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ವಾಸ್ತವದ ನೆಲೆಗಟ್ಟಿನಲ್ಲಿ, ಲಿಂಗಾಯಿತ ಮತಗಳು ಹೆಚ್ಚಿರುವ ಹಾಸನದ ಅರಸೀಕೆರೆಯಲ್ಲಿ ಜೇಸಿಪುರ ಜಗದೀಶ್ ಅಥವಾ ಚಿತ್ರನಟ ದೊಡ್ಡಣ್ಣ ಅವರನ್ನು ಕಣಕ್ಕೆ ಇಳಿಸುವುದು ವಿಜಯೇಂದ್ರ ಅವರ ಇಷ್ಟಾರ್ಥವಾಗಿದೆ. ಈ ರಂಪ ರಾಮಾಯಣದ ಹೊರತಾಗಿಯೂ ಶೋಭಾ ವಿರುದ್ಧ ವಿಜಯೇಂದ್ರರ ಇಷ್ಟಾರ್ಥ ನೆರವೇರುವುದೇ ಎಂಬುದು ಈ ಕ್ಷಣದ ಕೂತೂಹಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka Assembly elections- Rift between Shobha Karandlaje by BS Vijayendra Son of BS Yeddyurappa, President of KJP, over ticket issue for Arsikere Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X