ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾ Vs ಕಮಿಷನ್ ಉದಾಸಿ:ಕಾಡುವ ಪಂಚ ಪ್ರಶ್ನೆಗಳು

|
Google Oneindia Kannada News

ಬೆಂಗಳೂರು, ಮಾ 26: ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಕಡತ ವಿಲೇವಾರಿಗೆ ಮತ್ತು ಅಧಿಕಾರಿಗಳ ವರ್ಗಾವಣೆಗೆ ಸಚಿವರಾಗಿದ್ದ ಸಿ ಎಂ ಉದಾಸಿ ಇಂತಿಷ್ಟು ಶೇಕಡಾವಾರು ಕಮಿಷನ್ ಪಡೆಯುತ್ತಿದ್ದರು ಎನ್ನುವ ಮಾಜಿ ಸಿಎಂ ಸದಾನಂದ ಗೌಡರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಮತ್ತು ಚರ್ಚೆಸೆ ಗ್ರಾಸವಾಗಿದೆ.

ಚುನಾವಣೆಯ ಹೊಸ್ತಿಲಲ್ಲಿ ಸದಾನಂದ ಗೌಡರ ಹೇಳಿಕೆ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಯ ಭ್ರಷ್ಟಾಚಾರಕ್ಕೆ ಮತ್ತೊಂದು ಕಪ್ಪು ಚುಕ್ಕೆಯಾಗಿದೆ. ತಾನು ಸಿಂ ಆಗಿದ್ದಾಗ ಸಂಪುಟ ದರ್ಜೆ ಸಚಿವರಾಗಿದ್ದ ಉದಾಸಿ ಮಾಡುತ್ತಿದ್ದ ಕಮೀಷನ್ ವ್ಯವಹಾರ ತಡೆಗಟ್ಟಿದ್ದೆ.

ಅದಕ್ಕಾಗಿ ತಮ್ಮ ವಿರುದ್ದ ಯಡಿಯೂರಪ್ಪನವರ ಬಳಿ ಇಲ್ಲಸಲ್ಲದ್ದನ್ನು ಹೇಳಿ ತಾವು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾವೇರಿಯಲ್ಲಿ ಉದಾಸಿ ಮೇಲೆ ಗುರುತರ ಆರೋಪ ಮಾಡಿದ್ದರು.

ಸದಾನಂದ ಗೌಡರು ಹತಾಸರಾಗಿ ನನ್ನ ವಿರುದ್ದ ಬೇಜಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದ ಐದು ಜನ ಶಾಸಕರು ಅಂದು ಸದಾನಂದ ಗೌಡರಿಗೆ ಬೆಂಬಲ ಸೂಚಿಸಿದ್ದರಿಂದ ಅವರು ಮುಖ್ಯಮಂತ್ರಿಯಾದರು ಎನ್ನುವ ಸತ್ಯವನ್ನು ಅವರು ಮರೆಯದಿರಲಿ ಎಂದು ಉದಾಸಿ ತಿರುಗೇಟು ನೀಡಿದ್ದಾರೆ.

ಇವರಿಬ್ಬರ ಆರೋಪ, ಪ್ರತ್ಯಾರೋಪದ ನಡುವೆ ಸಾರ್ವಜನಿಕರಿಗೆ ಕಾಡುವ ಐದು ಪ್ರಶ್ನೆಗಳು

ಐದು ಪ್ರಶ್ನೆಗಳು

ಐದು ಪ್ರಶ್ನೆಗಳು

ಗೌಡರೇ, ನೀವು ಸಿಎಂ ಆಗಿದ್ದಾಗ ಉದಾಸಿ ಕಮಿಷನ್ ಪಡೆಯುತ್ತಿದ್ದಾರೆ ಎನ್ನುವ ಸತ್ಯ ನಿಮಗೆ ತಿಳಿದಿದ್ದರೂ ಅವರನ್ನು ಸಂಪುಟದಿಂದ ಯಾಕೆ ಕೈಬಿಡಲಿಲ್ಲ?

ಐದು ಪ್ರಶ್ನೆಗಳು

ಐದು ಪ್ರಶ್ನೆಗಳು

ಗೌಡರೇ, ಭ್ರಷ್ಟಾಚಾರ ನಿಮ್ಮ ಕಣ್ಣು ಮುಂದೆ ನಡೆಯುತ್ತಿದ್ದರೂ ನೀವು ಅವರ ವಿರುದ್ದ ಕ್ರಮ ಕೈಗೊಳ್ಳದಿರುವುದು ಮುಖ್ಯಮಂತ್ರಿ ಸೀಟಿನಲ್ಲಿ ಇನ್ನೂ ಸ್ವಲ್ಪ ದಿನ ಮುಂದುವರಿಯುವ ದುರಾಸೆಯೇ?

ಐದು ಪ್ರಶ್ನೆಗಳು

ಐದು ಪ್ರಶ್ನೆಗಳು

ಉದಾಸಿಯವರೇ, ನಿಮ್ಮ ಭಾಗದ ಐದು ಮಂದಿ ಶಾಸಕರಿಂದ ಗೌಡರು ಸಿಎಂ ಆದರು, ಇಲ್ಲಾಂದ್ರೆ ಆಗುತ್ತಿರಲಿಲ್ಲ ಎನ್ನುವ ಹೇಳಿಕೆಯ ಹಿಂದಿನ ರಹಸ್ಯವೇನು? ನೀವು ಒಂದು ವೇಳೆ ಕಮಿಷನ್ ಪಡೆಯುವ ಗೌಡರ ಹೇಳಿಕೆ ನಿಜವಾಗಿದ್ದಲ್ಲಿ ಅದನ್ನು ನೋಡಿಯೂ ನೋಡದಂತೆ ಸದಾನಂದ ಗೌಡರು ಸುಮ್ಮನಿರಬೇಕಿತ್ತೇ?

ಐದು ಪ್ರಶ್ನೆಗಳು

ಐದು ಪ್ರಶ್ನೆಗಳು

ಗೌಡರೇ, ಉದಾಸಿ ಬಿಜೆಪಿ ತೊರೆದ ನಂತರ ನೀವು ಅವರ ಮೇಲೆ ಈ ಆರೋಪ ಮಾಡುತ್ತಿದ್ದೀರಿ. ಒಂದು ವೇಳೆ ಅವರು ಬಿಜೆಪಿಯಲ್ಲಿ ಮುಂದುವರಿದಿದ್ದರೆ ಈ ಕಮಿಷನ್ ಅವ್ಯವಹಾರದ ಬಗೆಗಿನ ನಿಮ್ಮ ಹೇಳಿಕೆ ಸಾರ್ವಜನಿಕ ವಾಗುತ್ತಿರಲಿಲ್ಲ. ಹೌದಲ್ಲವೇ?

ಐದು ಪ್ರಶ್ನೆಗಳು

ಐದು ಪ್ರಶ್ನೆಗಳು

ನೀವು ಅಧಿಕಾರ ನಡೆಸುತ್ತಿರುವುದು ಸಾರ್ವಜನಿಕರ ತೆರಿಗೆಯ ದುಡ್ಡಿನಲ್ಲಿ. ನಿಮ್ಮ ನಿಮ್ಮ ರಾಜಕೀಯ ಮೇಲಾಟಕ್ಕೆ ಸಾರ್ವಜನಿಕರ ದುಡ್ಡನ್ನು ಯಾಕೆ ಪೋಲು ಮಾಡುತ್ತೀರಾ? ಅವ್ಯವಹಾರ ನಡೆದರೂ ಅದನ್ನು ತಡೆಗಟ್ಟಲಾಗದಿದ್ದಾರೆ ನಿಮ್ಮಂತ: ಸರಕಾರ ಇದ್ದರೆಷ್ಟು ಬಿಟ್ಟರೆಷ್ಟು?

English summary
Corruption in PWD department when C M Udasi was minister and Sadananda Gowda was Chief Minister. Five questions to Gowda and Udasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X