ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಜಾಲ ವಿಸ್ತರಣೆ HDFC ಬ್ಯಾಂಕ್ ಕಿಂಗ್

By Mahesh
|
Google Oneindia Kannada News

HDFC Bank leads pvt sector in expanding ATM network
ಮುಂಬೈ, ಮಾ.26: ದೇಶದ ಪ್ರಮುಖ ಮೂರು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳು ಸೇರಿದಂತೆ ಒಟ್ಟಾರೆ ಶೇ 31 ರಷ್ಟು ಅಧಿಕ ಎಟಿಎಂಗಳು ಕಳೆದ ತ್ರೈಮಾಸಿಕದಲ್ಲಿ ಕಂಡು ಬಂದಿದೆ. ಎಟಿಎಂ ವಿಸ್ತರಣೆಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಉಳಿದ ಸ್ಪರ್ಧಿಗಳಿಗಿಂತ ಮುಂದಿದೆ.

ಜನವರಿ 2013 ರ ಗಣತಿಯ ಅನ್ವಯದಂತೆ ಎಚ್ ಡಿಎಫ್ ಸಿ ಬ್ಯಾಂಕ್ ಸುಮಾರು 10,583 ಶಾಖೆಗಳನ್ನು ಹೊಂದಿದೆ. ಕಳೆದ ವರ್ಷ ಜನವರಿಗೆ ಹೋಲಿಸಿದರೆ ಶೇ 44ರಷ್ಟು ಶಾಖೆಗಳು ಹೆಚ್ಚಿದೆ ಕಳೆದ ವರ್ಷ 7,346 ಕೇಂದ್ರಗಳನ್ನು ಹೊಂದಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಪ್ರಕಾರ, ಅತಿದೊಡ್ಡ ಖಾಸಗಿ ಬ್ಯಾಂಕಿಂಗ್ ಜಾಲ ಐಸಿಐಸಿಸಿ ಬ್ಯಾಂಕ್ ತನ್ನ ಎಟಿಎಂ ಜಾಲವನ್ನು ಶೇ 26ರಷ್ಟು ಹೆಚ್ಚಿಸಿಕೊಂಡಿದೆ(year-on-year) ಜನವರಿ 2013ರ ಅನ್ವಯ ಒಟ್ಟಾರೆ 10,040 ಕೇಂದ್ರಗಳನ್ನು ಹೊಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7,952 ಕೇಂದ್ರಗಳನ್ನು ಹೊಂದಿತ್ತು. ಎಕ್ಸಿಸ್ ಬ್ಯಾಂಕ್ ಶೇ 22.6 ರಷ್ಟು ಪ್ರಗತಿ ಕಂಡಿದ್ದು 8,475 ಎಟಿಎಂ ಕೇಂದ್ರಗಳಿಂದ 10,391 ಕೇಂದ್ರಕ್ಕೇರಿದೆ.

ಬೇರೆ ಬ್ಯಾಂಕ್ ಬಳಸುವ ಗ್ರಾಹಕರಿಗೆ interchange ಚಾರ್ಜ್ 15 ರು ಹಾಗೂ ಬ್ಯಾಲೆನ್ಸ್ ವಿವರ ಚೆಕ್ ಮಾಡಿದರೆ 5 ರು ವಿಧಿಸಲಾಗುತ್ತಿದೆ. ಆದರೆ, ಎಚ್ ಡಿಎಫ್ ಸಿ ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹಾಕದಂತೆ ನೋಡಿಕೊಳ್ಳುತ್ತಿದೆ. 24 X 7 ಸೇವೆ ಒದಗಿಸುವುದು ನಮ್ಮ ಉದ್ದೇಶ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಬೀರೇಂದ್ರ ಸಾಹು ಹೇಳಿದ್ದಾರೆ.

ಗ್ರಾಹಕರಿಗೆ ತಮ್ಮ ಸ್ಥಳದ ಸುತ್ತ ಮುತ್ತ ಇರುವ ಎಟಿಎಂ ಕೇಂದ್ರಗಳ ಮಾಹಿತಿ ಸುಲಭವಾಗಿ ಒದಗಿಸುವತ್ತ ಖಾಸಗಿ ಬ್ಯಾಂಕ್ ಗಳು ಮುಂದಾಗಿದೆ. ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಇಮೇಲ್ ಹಾಗೂ ಎಸ್ ಎಂಎಸ್ ಮೂಲಕ ಮಾಹಿತಿ ಒದಗಿಸುತ್ತಿದೆ. ಅಂಧರಿಗೆ ವಿಶೇಷ ಎಟಿಎಂ ಕೇಂದ್ರ ಆರಂಭಿಸಿ ಎಚ್ ಡಿಎಫ್ ಸಿ ಹೊಸ ಕ್ರಾಂತಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The country’s top three private sector banks appear to be outdoing each other in expanding their ATM network. As at January-end 2013, their collective ATM network witnessed an average year-on-year growth of 31 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X