ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟರ್ಸ್, ಸಿನಿ ತಾರೆಯರ ಮೇಲೆ ಚಾರ್ಜ್ ಶೀಟ್

By Mahesh
|
Google Oneindia Kannada News

Juhu Rave Party: Chargesheet nails cricketers
ಪುಣೆ, ಮಾ.25: ಐಪಿಎಲ್ ಆಟಗಾರರಾದ ವೇಯ್ನ್ ಪರ್ನೆಲ್, ರಾಹುಲ್ ಶರ್ಮಾ ಸೇರಿದಂತೆ ಜುಹೂ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟರ್ಸ್, ಸಿನಿ ತಾರೆಗಳ ಮೇಲೆ ಮುಂಬೈ ಪೊಲೀಸರು ದೋಷರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪುಣೆಯ ಸಂಸ್ಕೃತಿ ನುಚ್ಚು ನೂರಾಗುತ್ತಿದೆ. ಟಿವಿ ನಟಿಯರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ ಪ್ರಕರಣ ಕಣ್ಮುಂದೆ ಇರುವಾಗಲೇ ರೇವ್ ಪಾರ್ಟಿಯೊಂದರಲ್ಲಿ ಮಜಾ ಉಡಾಯಿಸುತ್ತಿದ್ದ ನೂರಾರು ಮಂದಿಯನ್ನು ಪುಣೆ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸೆರೆಸಿಕ್ಕ 300ಕ್ಕೂ ಅಧಿಕ ಜನರ ಪೈಕಿ ಉಗ್ರಗಾಮಿ ನಿಗ್ರಹ ದಳ(ATS) ಅಧಿಕಾರಿ ಹಾಗೂ ಆತನ ಪತ್ನಿ ಇರುವುದು ಪತ್ತೆಯಾಗಿತ್ತು.

ಕಿರುತೆರೆ ತಾರೆಯರಾದ ಅಪೂರ್ವ ಅಗ್ನಿಹೋತ್ರಿ, ಶಿಲ್ಪ ಅಗ್ನಿಹೋತ್ರಿ ಅವರ ಹೆಸರು ಚಾರ್ಜ್ ಶೀಟ್ ನಲ್ಲಿ ಕಂಡು ಬಂದಿದೆ. ಸುಮಾರು 1,200 ಪುಟಗಳ ಆರೋಪ ಪಟ್ಟಿಯಲ್ಲಿ 86 ಜನ ಆರೋಪಿಗಳನ್ನು ಹೆಸರಿಸಲಾಗಿದೆ. 36 ಜನ ವಿದೇಶಿಯರು ವಾಂಟೆಂಡ್ ಲಿಸ್ಟ್ ನಲ್ಲಿದ್ದಾರೆ. ಪುಣೆ ವಾರಿಯರ್ಸ್ ಪರ ಆಡುತ್ತಿದ್ದ ವಾಯ್ನ್ ಪಾರ್ನೆಲ್ ಮೇಲೆ ನಾಪತ್ತೆ ಪ್ರಕರಣ ದಾಖಲಾಗಿದ್ದು, ಸರ್ಚ್ ವಾರೆಂಟ್ ಹೊರಡಿಸಲಾಗಿದೆ ಎಂದು ಮುಂಬೈ ಪೊಲೀಸರು ಸೋಮವಾರ(ಮಾ.25) ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜುಹೂ ಪ್ರದೇಶ ಹೋಟೆಲ್ ನ ಮಾಲೀಕ ವಿಷಯ್ ಹಂಡಾ, ಡಿಜೆ ದೀಪೇಶ್ ಶರ್ಮ ಹಾಗೂ ರಾಕೇಶ್ ಶರ್ಮ, ಅಗ್ನಿಹೋತ್ರಿಗಳು, ರಾಹುಲ್ ಶರ್ಮ ಪ್ರಮುಖ ಆರೋಪಿಗಳಾಗಿದ್ದಾರೆ.

ಓಕ್ ವುಡ್ ಪ್ರಿಮಿಯರ್ ಹೋಟೆಲ್ ನಲ್ಲಿದ್ದುದು ನಿಜ. ಆದರೆ ಬೇರೆಯದೇ ಪಾರ್ಟಿಗಾಗಿ ಅಲ್ಲಿಗೆ ತೆರಳಿದ್ದೆ ಎಂದು ಅವರು ಹೇಳಿಕೆ ನೀಡಿದ್ದಾರೆ. 'ಜುಹೂನಲ್ಲಿರುವ ಓಕ್ ವುಡ್ ಪ್ರಿಮಿಯರ್ ಹೋಟೆಲಿನಲ್ಲಿ ಆಯೋಜಿಸಲಾಗಿದ್ದ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ನಾನು ಅಲ್ಲಿಗೆ ಹೋಗುವ ವೇಳೆಗೆ ಯಾರೂ ಅಲ್ಲಿರಲಿಲ್ಲ' ಎಂದು ರಾಹುಲ್ ಹೇಳಿಕೆ ನೀಡಿದ್ದರು.

ಓಕ್ ವುಡ್ ಹೋಟೆಲ್ ರೇವ್ ಪಾರ್ಟಿಯಲ್ಲಿ ಸೆರೆ ಸಿಕ್ಕವರಲ್ಲಿ 38 ಯುವತಿಯರು, 58 ಯುವಕರು, 19 ವಿದೇಶಿಯರು ಇದ್ದರು. ಬಂಧಿತರಲ್ಲಿ ಸಮಾಜದ ಗಣ್ಯವ್ಯಕ್ತಿಗಳು, ಉದ್ಯಮ, ಚಿತ್ರರಂಗ, ಕ್ರೀಡೆ, ರಾಜಕೀಯ ವಲಯದ ಮುಖಂಡರ ಕುಟುಂಬಕ್ಕೆ ಸೇರಿದವರಾಗಿದ್ದರು. ಎಲ್ಲರ ಮೇಲೂ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ 54 A ಪ್ರಕಾರ ಪಾಸಿಟಿವ್ ಎಂದು ವರದಿ ಮಾಡಲಾಗಿದೆ.

ಮಾದಕ ವ್ಯಸನದಿಂದ ಹೊರ ಬರಲು ವ್ಯಸನ ನಿಯಂತ್ರಣ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಬಹುದಾಗಿದೆ. ಓಕ್ ವುಡ್ ಹೋಟೆಲ್ ಎಂಡಿ ಹುಸೇನ್ ತಾನು ಸರ್ಕಾರಿ ಸ್ವಾಮ್ಯದ ಕೇಂದ್ರಕ್ಕೆ ಹೋಗಿ ಚಟ ಬಿಡಿಸುವ ಔಷಧಿ ತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದಾನೆ.

English summary
Chargesheet filed by Mumbai police in regard to Juhu rave party in 2012 says IPL cricket player Rahul Sharma, South African all-rounder Wayne Parnell and television actor couple Apoorva Agnihotri and Shilpa Agnihotri used drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X