ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸ್ಥಾನ ಕಳೆದುಕೊಂಡಿದ್ದು ಹೀಗೆ : ಡಿವಿಎಸ್

By Mahesh
|
Google Oneindia Kannada News

DV Sadananda Gowda reveals about his resignation
ಹಾವೇರಿ, ಮಾ.25: ಬಿಜೆಪಿ ತೊರೆದು ಕೆಜೆಪಿ ಸೇರಿರುವ ಮಾಜಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ತೀವ್ರ ವಾಗ್ದಾಳಿ ನಡೆಸಿ, ತಾವು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ಉದಾಸಿ ಎಂಬ ಹಗರಣಗಳ ಹುತ್ತಕ್ಕೆ ಕೈ ಹಾಕಿದ್ದೇ ಕಾರಣ ಎಂದಿದ್ದಾರೆ.

ಉದಾಸಿ ಒಬ್ಬ ಭಾರಿ ಭ್ರಷ್ಟಾಚಾರಿ. ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಉದಾಸಿ ಅವರು, ಪ್ರತಿ ಟೆಂಡರ್‌ನಲ್ಲಿ ಹಣ ಕೀಳುತ್ತಿದ್ದರು. ಆದರೆ ನಾನು ಅವರ ಅಕ್ರಮಕ್ಕೆ ಕಡಿವಾಣ ಹಾಕಿ, ಸಿಎಂ ಕುರ್ಚಿ ಕಳೆದುಕೊಂಡೆ ಎಂದು ಸದಾನಂದ ಗೌಡ ಹೇಳಿದ್ದಾರೆ.

ಆದರೆ ಡಿವಿ ದದಾನಂದ ಗೌಡ ಅವರ ಆರೋಪವನ್ನುತಳ್ಳಿ ಹಾಕಿದ ಉದಾಸಿ, ಸಿಎಂ ಕುರ್ಚಿ ಕಳೆದುಕೊಂಡ ನಂತರ ಅವರಿಗೆ ಮತಿ ಭ್ರಮಣೆ ಆಗಿದೆ ಎಂದಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಭ್ರಷ್ಟಾಚಾರದ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸದಾನಂದಗೌಡರು ಮೊದಲು ಗೌರವದಿಂದ ಮಾತಾಡೋದನ್ನು ಕಲಿಯಲಿ ಎಂದು ಉದಾಸಿ ಕಿಡಿ ಕಾರಿದರು.

English summary
Former CM DV Sadananda Gowda reveals secret behind his resignation from CM Post. DVS said he lost his chair after ordering probe against Scams of Yeddyurappa supporter senior leader CM Udasi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X