ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಮೂಲಕ ದೇಶಕ್ಕೆ ನುಸುಳಿದ್ದಾರೆ ಐವರು ಉಗ್ರರು

|
Google Oneindia Kannada News

terrorists
ನವದೆಹಲಿ, ಮಾ.23 : ದೇಶದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಸ್ಪೋಟ ನಡೆಸುವ ಉಗ್ರರ ಸಂಚು ವಿಫಲಗೊಳಿಸಿರುವ ನೆನಪು ಮಾಸುವ ಮುನ್ನವೇ, ಪಾಕಿಸ್ತಾನದಿಂದ ಐವರು ಉಗ್ರರು ಭಾರತಕ್ಕೆ ಪ್ರವೇಶಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಸರ್ಕಾರಗಳಿಗೆ ಸಂದೇಶ ರವಾನಿಸಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೋಯ್ಬಾ ಮತ್ತು ತೆಹ್ರಿ-ಇ-ತಾಲಿಬಾನ್‌ನಿಂದ ತರಬೇತಿ ಪಡೆದ ಐವರು ಶಸ್ತ್ರ ಸಜ್ಜಿತ ಉಗ್ರರು ವಲಸೆ ಬರುವ ಕಾರ್ಮಿಕರ ವೇಷದಲ್ಲಿ ಕೇರಳ ತಲುಪಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿಯಲ್ಲಿ ತಿಳಿಸಿದೆ.

ಪ್ರಸ್ತುತ ಉಗ್ರರು ಕೇರಳ ರಾಜ್ಯಕ್ಕೆ ತಲುಪಿರುವ ಮಾಹಿತಿ ಲಭ್ಯವಾಗಿದ್ದು, ಕೇರಳದ ಮೂಲಕ ಕರ್ನಾಟಕ ಅಥವ ಬೇರೆ ರಾಜ್ಯಗಳಿಗೆ ತೆರಳುವ ಸಾಧ್ಯತೆ ಇರುವುದರಿಂದ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗೃಹ ಇಲಾಖೆಯ ಆಂತರಿಕ ವಿಭಾಗ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ವಿಶೇಷ ಮುನ್ನೆಚ್ಚರಿಕೆ ನೀಡಿದೆ.

ಗೃಹ ಇಲಾಖೆಯ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಉಗ್ರರ ಆಗಮನದ ಕುರಿತಾದ ಖಚಿತ ಮಾಹಿತಿಯನ್ನು ಒದಗಿಸಿದ್ದು, ಸ್ಥಳೀಯ ಉಗ್ರವಾದಿ ಸಂಘಟನೆಗಳೊಂದಿಗೆ ಸೇರಿಕೊಂಡು ವಿದ್ವಸಂಕ ಕೃತ್ಯ ಎಸಗಬಹುದು ಎಂದು ಶಂಕೆ ವ್ಯಕ್ತಪಡಿಸಿದೆ.

ಮುಂಬೈ ದಾಳಿ ಉಗ್ರ ಕಸಬ್ ಮತ್ತು ಸಂಸತ್ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು ಗಲ್ಲು ಶಿಕ್ಷೆಗೆ ಪ್ರತಿಕಾರವಾಗಿ ದಾಳಿ ನಡೆಸಬುಹುದು ಎಂದು ಕೇಂದ್ರ ಸೂಚನೆ ರವಾನಿಸಿದೆ. ಬಾಂಗ್ಲಾದೇಶದ ಗಡಿ ಪ್ರದೇಶದಲ್ಲೂ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ.

ಈ ಉಗ್ರರು ಕೇರಳ, ಬೆಂಗಳೂರು, ಹೊಸದಿಲ್ಲಿ ಸೇರಿದಂತೆ ಪ್ರಮುಖ ನಗರಗಳಿಗೂ ಪ್ರವೇಶಿಸುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ದಾಳಿ ನಡೆಸುವ ಉಗ್ರರ ಸಂಚು ವಿಫಲಗೊಳಿಸಿ ಗುರುವಾರ ಇಬ್ಬರು ಉಗ್ರರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Central Intelligence send clear massage to all states that five Five Pakistani terrorists enter the country. According to union Intelligence Bureau message, Five terrorists enter the Kerala state. Both terrorists should move to other parts of the county's so take necessary care in all states govt ordered
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X