ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ ಸಿ : ಮೌಲ್ಯ ಮಾಪಕರ ಭತ್ಯೆ ಹೆಚ್ಚಳ

|
Google Oneindia Kannada News

SSLC Examination
ಬೆಂಗಳೂರು, ಮಾ.20 :ಎಸ್ಎಸ್ಎಲ್ ಸಿ ಪರೀಕ್ಷಾ ಮೌಲ್ಯಮಾಪಕರು ಮತ್ತು ಪರೀಕ್ಷೆಗೆ ಹಾಜರಾರುವ ಸಿಬ್ಬಂದಿಗಳ ಭತ್ಯೆಯನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ನಿರ್ಧಾರಕ್ಕೆ ಶಿಕ್ಷಕರು ಕ್ಯಾತೆ ತೆಗೆದಿದ್ದು, ಬೇಡಿಕೆ ಈಡೇರಿಸದಿದ್ದರೆ ಮೌಲ್ಯ ಮಾಪನ ಬಹಿಷ್ಕರಿಸುವುದಾಗಿ ಎಚ್ಚರಿಗೆ ನೀಡಿವೆ.

ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿ ಮೂರು ವರ್ಷಗಳಿಗೊಮ್ಮೆ ಮೌಲ್ಯಮಾಪಕರು ಮತ್ತು ಪರೀಕ್ಷಾ ಸಿಬ್ಬಂದಿಯ ಭತ್ಯೆಗಳನ್ನು ಪರಿಷ್ಕರಿಸಿ ಹೆಚ್ಚಿಸುತ್ತದೆ. ಅದರಂತೆ ಈ ಬಾರಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಆದರೆ, ಮಂಡಳಿಯ ಈ ಕ್ರಮ ರಾಜ್ಯ ಶಿಕ್ಷಕರ ಮತ್ತು ಉಪನ್ಯಾಸಕರ ಕ್ರಿಯಾಸಮಿತಿಗಯ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಕ್ಕೆ ಶಿಕ್ಷಕರ ಬೇಡಿಕೆಗಳನ್ನು ಮಾ.31ರೊಳಗೆ ಈಡೇರಿಸುವಂತೆ ಗಡುವು ನೀಡಿದರು ಕ್ರಿಯಾಸಮಿತಿ, ಇಲ್ಲದಿದ್ದರೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಮೌಲ್ಯ ಮಾಪನ ಬಹುಷ್ಕರಿಸುವುದಾಗಿ ಎಚ್ಚರಿಕೆ ನೀಡಿವೆ.

ಎಷ್ಟು ಹೆಚ್ಚಳ : ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗುವ ಸಿಬ್ಬಂದಿ ಮತ್ತು ಮೌಲ್ಯ ಮಾಪಕರ ಭತ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಸಾಗಿಸುವ ಸಿಬ್ಬಂದಿಯಿಂದ ಮೌಲ್ಯ ಮಾಪಕರವರೆಗಿನ ಭತ್ಯೆ ಹೆಚ್ಚಿಸಲಾಗಿದೆ.

ಡಿ ದರ್ಜೆ ಸಿಬ್ಬಂದಿಗಳಿಗೆ 200 ರೂ.ಇದ್ದ ಭತ್ಯೆಯನ್ನು 300 ರೂ.ಗಳಿಗೆ ಏರಿಸಲಾಗಿದೆ. ಮೌಲ್ಯ ಮಾಪನ ವಿಭಾಗದಲ್ಲಿ ಪ್ರಥಮ ಭಾಷೆಗೆ (8.30 ರೂ. ರಿಂದ 11 ರೂ.), ದ್ವಿತೀಯ/ ತೃತೀಯ ಭಾಷೆ (7.40 ರೂ. ರಿಂದ 10 ರೂ.), ಐಚ್ಛಿಕ ವಿಷಯ (8 ರೂ. ರಿಂದ 10.60 ರೂ.) ಹೆಚ್ಚಳ ಮಾಡಲಾಗಿದೆ.

* ಮೌಲ್ಯ ಮಾಪನ ಕೇಂದ್ರಗಳ ಜಂಟಿ ಮುಖ್ಯ ಪರಿವೀಕ್ಷಕರು : 3025ರಿಂದ 4025ಕ್ಕೆ ಏರಿಕೆ
* ಉಪ ಮುಖ್ಯ ಪರವೀಕ್ಷಕರು : 2275ರಿಂದ 3025
* ಕ್ಯಾಂಪ್ ಕಸ್ಟೋಡಿಯನ್ : 2000 ದಿಂದ 2500
* ಕ್ಯಾಂಪ್ ಸಹಾಯಕರು : 400 ರಿಂದ 700

ಸರ್ಕಾರದ ಈ ಆದೇಶವೂ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಸರ್ಕಾರ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Govt of karnataka hiked the allowance of SSLC Examination valuers and workers. On, Tuesday, March 19, The Karnataka Secondary Education Examination Board announced new hiked the allowance list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X