• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮಪಿಪಾಸು ಟೈಗರ್ ವುಡ್ಸ್ ಮತ್ತೊಬ್ಬಳು ಸಿಕ್ಕಳು

By Mahesh
|

ನ್ಯೂಯಾರ್ಕ್, ಮಾ.20: ಟೈಗರ್ ವುಡ್ಸ್ ಗಾಲ್ಫ್ ಲೋಕದ ಮಾಸ್ಟರ್ ಬ್ಲಾಸ್ಟರ್. ಸುಮಾರು 121ಕ್ಕೂ ಅಧಿಕ ಮಹಿಳೆಯರ ಸಂಗಡ ಕುಚ್ ಕುಚ್ ನಡೆಸಿದ ಅಪಖ್ಯಾತಿಗೆ ಒಳಗಾದವ.

ಒಂದು ಎರಡು ಮೂರು ಎಂದು ನೂರಾರು ಹೆಂಗೆಳೆಯರ ಸಂಗ ಮಾಡಿದ ಭೂಪರೆಲ್ಲರೂ ಒಂದೇ ಸಲಕ್ಕೆ ನಿವಾಳಿಸಿ ಎಸೆಯುವಂತೆ ವಂಥ ಸುದ್ದಿ ಮೊದಲ ಪತ್ನಿ ರಾಚೆಲ್ ಯುಚಿಟೆಲ್ ಲೀಕ್ ಮಾಡಿದ್ದರು. ಈ ರೀತಿ ಹಿನ್ನೆಲೆಯುಳ್ಳ ವುಡ್ಸ್ ಗೆ ಮತ್ತೊಬ್ಬ ಸಂಗಾತಿ ಸಿಕ್ಕಿದ್ದಾಳಂತೆ.

2009ರ ಟೈಗರ್ ವುಡ್ಸ್ ಮುಟ್ಟಿದ್ದೆಲ್ಲ ಚಿನ್ನ. 14 ಬಾರಿ ಗಾಲ್ಫ್ ಚಾಂಪಿಯನ್ ಆಗುವುದು ಬಹುದೊಡ್ಡ ಸಾಧನೆ. ನೆನಪಿರಲಿ, ಟೆನ್ನಿಸ್ ಬಿಟ್ಟರೆ ಅತಿ ಹೆಚ್ಚು ಸಂಭಾವನೆ ಸಿಗುವಂಥ ಅತ್ಯಂತ ಬೋರಿಂಗ್ ಕ್ರೀಡೆ ಎಂದರೆ ಗಾಲ್ಫ್.

2010ರಲ್ಲಿ ಪತ್ನಿ ಎಲಿನ್ ನಾರ್ ಡೆಗ್ರೆನ್ ರಿಂದ ವಿಚ್ಛೇದನ ಪಡೆದ ಮೇಲೆ ಗಾಲ್ಫ್ ರಾಜ ವುಡ್ಸ್ ಸಾರ್ವಜನಿಕವಾಗಿ ಗಳಗಳನೆ ಅತ್ತು ಕರೆದು ತನ್ನ ರಾಸಲೀಲೆ ಕಥೆಯನ್ನು ಹೇಳಿಕೊಂಡಿದ್ದ. ಅನೇಕಾನೇಕ ಜಾಹೀರಾತುಗಳ ಒಡೆಯನಾಗಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದ್ದ ವುಡ್ಸ್ ಸರ್ರನೆ ಕೆಳಗಿಳಿದಿದ್ದ.

ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಗಾಲ್ಫ್ ಚಾಂಪಿಯನ್ ಟೈಗರ್ ವುಡ್ಸ್ ಗೆ ಬರೋಬ್ಬರಿ 121 ಮಂದಿ ಅಂತರಂಗದ ಗೆಳೆತಿಯರು. ಈ ಎಲ್ಲರೊಂದಿಗೆ ಹಾಸಿಗೆ ಹಂಚಿಕೊಂಡಿರುವುದಾಗಿ ಸ್ವತಃ ಟೈಗರ್ ವುಡ್ಸ್ ಒಪ್ಪಿಕೊಂಡಿದ್ದಾನೆ. ಕೆಲವೇ ಕೆಲ ಮಹಿಳೆಯೊಂದಿಗೆ ಸೆಕ್ಸ್ ಅನುಭವಿಸಿದ ನಿತ್ಯಾನಂದ ಈ ಟೈಗರ್ ವುಡ್ಸ್ ಮುಂದೆ ಯಾವ ಲೆಕ್ಕ ಬಿಡಿ ಎಂದು ನಮ್ಮ ಜನ ಆಡಿಕೊಂಡಿದ್ದರು.

ಟೈಗರ್ ವುಡ್ಸ್ ಬ್ಯಾಕ್

ಟೈಗರ್ ವುಡ್ಸ್ ಬ್ಯಾಕ್

ಈಗ ವುಡ್ಸ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಸ್ಕೀಯಿಂಗ್(ski) ಪಟು ಲಿಂಡ್ಸೆ ವೊನ್ ಖಚಿತಪಡಿಸಿದ್ದಾರೆ. ಅಮೆರಿಕದ ಈ ಇಬ್ಬರು ಕ್ರೀಡಾತಾರೆಯರ ಬದುಕು ಎಲ್ಲಿ ತನಕ ಸಾಗುವುದೋ ಕಾದು ನೋಡಬೇಕಿದೆ.

ಟೈಗರ್ ವುಡ್ಸ್ ಬ್ಯಾಕ್

ಟೈಗರ್ ವುಡ್ಸ್ ಬ್ಯಾಕ್

ಈಗ ಮತ್ತೊಮ್ಮೆ ಗಾಲ್ಫ್ ಲೋಕದಲ್ಲಿ ಸುದ್ದಿ ಮಾಡಿರುವ ವುಡ್ಸ್ ವಿಶ್ವದ ನಂ.2 ಆಟಗಾರ ಎನಿಸಿದ್ದಾರೆ. ದುಬೈ ಸೇರಿದಂತೆ ಹಲವು ಪಿಜಿಎ ಟೂರ್ ಗಳನ್ನು ಗೆದ್ದಿದ್ದಾರೆ. ಜಾಕ್ ನಿಕಾಲಸ್ ಹೆಸರಿನಲ್ಲಿರುವ 18 ಟೈಟಲ್ ಸಾಧನೆ ಬ್ರೇಕ್ ಮಾಡಲು ಕಾದಿದ್ದಾರೆ.

ವುಡ್ಸ್ ಗಳಿಕೆ ಲೆಕ್ಕ ಹಾಕಿದರೆ 26,71,600 ಯುಎಸ್ ಡಾಲರ್ ಇದೆ ಎಂದು ಸರ್ಚ್ ಇಂಜಿಂಗ್ ಗುರು ಗೂಗಲ್ ಹೇಳುತ್ತದೆ.

ಟೈಗರ್ ವುಡ್ಸ್ ಬ್ಯಾಕ್

ಟೈಗರ್ ವುಡ್ಸ್ ಬ್ಯಾಕ್

37 ವರ್ಷದ ವುಡ್ಸ್ ಒಬ್ಬರೆ ಅಲ್ಲ ಗಾಲ್ಫ್ ಕ್ಷೇತ್ರದ ಸದ್ಯದ ನಂ.1 ಉತ್ತರ ಐರ್ಲೆಂಡ್ ನ ರೊರಿ ಮೆಕ್ ರೊಯ್ ಕೂಡಾ 9ನೇ ಶ್ರೇಯಾಂಕಿತ ಟೆನಿಸ್ ಪಟು ಡೆನ್ಮಾರ್ಕ್ ನ ಕರೋಲಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಕ್ರೀಡಾಪಟು ಸಹ ಕ್ರೀಡಾಳುಗಳ ಜೊತೆ ಈ ರೀತಿ ಸಂಬಂಧ ಬೆಸೆಯುತ್ತಿದ್ದಾರೆ.

ಟೈಗರ್ ವುಡ್ಸ್ ಬ್ಯಾಕ್

ಟೈಗರ್ ವುಡ್ಸ್ ಬ್ಯಾಕ್

28 ವರ್ಷದ ವೊನ್ ಕಳೆದ ಫೆಬ್ರವರಿಯಲ್ಲಿ ವಿಶ್ವ Ski ಚಾಂಪಿಯನ್ಸ್ ನಲ್ಲಿ ಬಲ ಮಂಡಿಗೆ ಗಾಯ ಮಾಡಿಕೊಂಡ ಮೇಲೆ ಮತ್ತೆ Ski ಕೋಲು ಹಿಡಿದಿಲ್ಲ. ಒಲಿಂಪಿಕ್ಸ್ ಪದಕ ಗೆದ್ದಿರುವ ವೋನ್ ಮುಂದಿನ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ.

ಟೈಗರ್ ವುಡ್ಸ್ ಬ್ಯಾಕ್

ಟೈಗರ್ ವುಡ್ಸ್ ಬ್ಯಾಕ್

ಇಷ್ಟೆಲ್ಲ ಅಪಖ್ಯಾತಿ ಗಳಿಸಿದರು ಟೈಗರ್ ವುಡ್ಸ್ ಇಂದಿಗೂ ರೋಲ್ ಮಾಡೆಲ್. 1996 ರಲ್ಲಿ ವೃತ್ತಿಪರ ಗಾಲ್ಫ್ ಪಟು ಆಗುತ್ತಿದ್ದಂತೆ ಪ್ರತಿಭಾವಂತ ಯುವ ಗಾಲ್ಫರ್ ಗಳನ್ನು ಪ್ರೋತ್ಸಾಹಿಸಲು ಫೌಂಡೇಷನ್ ಆರಂಭಿಸಿದರು. 50 ಮಿಲಿಯನ್ ಡಾಲರ್ ವೆಚ್ಚದ ಸೆಂಟರ್ ಯುವಕರಿಗೆ ಉತ್ತಮ ವೇದಿಕೆಯಾಗಿದೆ.

ವುಡ್ಸ್ ಬೌದ್ಧ ಮತ ಅನುಯಾಯಿಯಾಗಿದ್ದು, ಸೆಕ್ಸ್ ಸ್ಕ್ಯಾಂಡಲ್ ಗಳಿಂದ ಹೊರಬರಲು ಬುದ್ಧನ ಸಂದೇಶಗಳು ಸಹಾಯ ಮಾಡಿದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. 1999ರಲ್ಲಿ ಲೇಸರ್ ಐ ಸರ್ಜರಿಗೂ ಒಳಗಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tiger Woods dominated golf until 2009 when his marital infidelity with several women was revealed, leading to a televised public apology and a break from golf in a spectacular fall from grace that cost him several rich endorsement deals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more