ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ತಲೆಎತ್ತಿದ ಇನ್ನೊಂದು ರಾಜಕೀಯ ಪಕ್ಷ

|
Google Oneindia Kannada News

Karnataka
ಬೆಂಗಳೂರು, ಮಾ.19 : ಕರ್ನಾಟಕ ವಿಧಾನಸಭೆ ಚುನಾವಣೆಯ ಸಿದ್ಧತೆಗಳು ಆರಂಭವಾಗುತ್ತಿರುವಾಗಲೇ ರಾಜ್ಯದಲ್ಲಿ ಹೊಸ-ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತಿವೆ. ಉತ್ತರ ಭಾತರಕ್ಕೆ ಮಾತ್ರ ಸೀಮಿತವಾಗಿದ್ದ ಬಿಜೆಡಿ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡಿದೆ. ಕರ್ನಾಟದಲ್ಲಿ ತನ್ನ ನೂತನ ಶಾಖೆಯನ್ನು ಪ್ರಾರಂಭಿಸಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆಸ ಸರಳ ಸಮಾರಂಭದಲ್ಲಿ ಭಾರತೀಯ ಜನತಾ ದಳ (ಬಿಜೆಡಿ)ಯ ರಾಜ್ಯ ಘಟಕಕ್ಕೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಅಶ್ವಿನ್ ಸಿಂಗ್ ಸಿಸೋಡಿಯಾ ಚಾಲನೆ ನೀಡಿದರು. ಅಂಬೇಡ್ಕರ್ ಅಬ್ದುಲ್ ಕಲಾಂ ಅವರತಂಹ ವ್ಯಕ್ತಿಗಳ ಆದರ್ಶಗಳನ್ನು ಮುಂದಿಟ್ಟುಕೊಂಡು ಬೆಜೆಡಿ ಪಕ್ಷವನ್ನು ಕಟ್ಟಿ ಬೆಳೆಸಲಾಗಿದೆ ಎಂದರು.

ಜಾಗತಿಕವಾಗಿ ಭಾರತ ಪ್ರಬಲ ಶಕ್ತಿಯಾಗಿ ಹೊರಹೊಮ್ಮತ್ತಿದೆ. ಇಂತಹ ಸಂದರ್ಭದಲ್ಲಿ ಸಮರ್ಥ ಆಡಳಿತ ನೀಡುವ ನಾಯಕರ ಅಗತ್ಯತೆ ಹೆಚ್ಚಿದೆ. ಯುವಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಾ, ದೇಶದಲ್ಲಿ ಭವಿಷ್ಯದಲ್ಲಿ ನಾಯಕರ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಿಗೆ ಬಿಜೆಡಿ ಪಕ್ಷ ಸೀಮಿತವಾಗಿತ್ತು. ಕರ್ನಾಟದಲ್ಲಿ ಬಿಜೆಡಿ ಶಾಖೆಯನ್ನು ಆರಂಭಿಸುವ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆಗೆ ಚಾಲನೆ ನೀಡಿದ್ದೇವೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಜೈ.ಜಿ.ನಾಗರಾಜ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಮೌಲ್ಯ ಆಧಾರಿತ ರಾಜಕಾರಣದ ಅವಶ್ಯಕತೆ ಇದೆ. ರಾಜ್ಯದ ಪ್ರಾದೇಶಿಕ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುವ ಪಕ್ಷದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಜೊತೆಗೆ ನಡೆದ ಪಕ್ಷದ ಸಭೆಯಲ್ಲಿ ಕೆಜೆಡಿಯ ರಾಜ್ಯಾಧ್ಯಕ್ಷರಾಗಿ ಎಂ.ಎಸ್.ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು. ಪಕ್ಷದ ದಕ್ಷಿಣ ಭಾರತದ ಸಂಚಾಲಕ ಇ.ಲಕ್ಷ್ಮೀನಾರಾಯಣ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟದಲ್ಲಿ ಇತ್ತೀಚೆಗಷ್ಟೆ ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ (ಬಿಎಜೆಪಿ) ಎಂಬ ಪ್ರಾದೇಶಿಕ ಪಕ್ಷ ಪ್ರಾರಂಭಗೊಂಡಿತ್ತು. ಪ್ರಸ್ತುತ ಬಿಜೆಡಿ ಪಕ್ಷ ಪ್ರಾರಂಭಗೊಂಡಿದೆ. ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಮತ್ತಷ್ಟು ಪಕ್ಷಗಳು ಹುಟ್ಟಿಕೊಳ್ಳುವ ಸಂಭವಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
In Karnataka new political party will integrated. On Monday, March, 17 new political party named BJD opened. Baratheya Janatha Dal is newly opened party full name. Party national leader Ashwin Singh Sisodia integrated the party. M.S.Srinivas is a party state president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X