• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐವರು ಸಹೋದರರಿಗೆ ಈಕೆಯೊಬ್ಬಳೇ ಮುದ್ದಿನ ಮಡದಿ!

|

ಡೆಹ್ರಾಡೂನ್, ಮಾ 19: ಈಕೆಯ ವಯಸ್ಸು ಇಪ್ಪತ್ತೊಂದು, ಹೆಸರು ರಾಜೋ ವರ್ಮಾ. ಐದು ಜನ ಸಹೋದರರಿಗೆ ಈಕೆ ಒಬ್ಬಳೇ ಮುದ್ದಿನ ಹೆಂಡತಿ. ರೋಟೇಷನ್ ಆದಾರದಲ್ಲಿ ಪ್ರತಿ ರಾತ್ರಿ ಸಹೋದರರಲ್ಲಿ ಒಬ್ಬರಿಗೆ ದೈಹಿಕ ಸುಖ.

ಇದು ಈಕೆಯ ಒನ್ ಲೈನ್ ದಿನಚರಿ. ಈಕೆಗೆ ಈಗ ಹದಿನೆಂಟು ತಿಂಗಳ ಗಂಡು ಮಗುವಿದೆ, ಮಗುವಿಗೆ ಅಪ್ಪ ಯಾರು? ಮನೆಯೊಡತಿ ರಾಜೋ ವರ್ಮಾಗೆ ಈ ಬಗ್ಗೆ ಐಡಿಯಾ ಇಲ್ಲ, ಬೇಕಾಗಿಯೂ ಇಲ್ಲ ಎನ್ನುವುದು ವಿಪರ್ಯಾಸ.

ಈಕೆಯ ಮೊದಲ ಗಂಡನ ಹೆಸರು ಗುಡ್ಡು. ಸಹೋದರರ ಜೊತೆ ನನ್ನ ಹೆಂಡತಿ ದೈಹಿಕ ಸುಖ ಅನುಭವಿಸುತ್ತಿರುವುದಕ್ಕೆ ನನಗೆ ಬೇಸರವಾಗಲಿ ಅಥವಾ ಹೊಟ್ಟೆಕಿಚ್ಚಾಗಲಿ ಇಲ್ಲ ಎಂದು ಖುಷಿ ಖುಷಿಯಿಂದ ಬೆನ್ನು ತಟ್ಟಿಕೊಳ್ಳುತ್ತಾನೆ ಈಕೆಯ ಪುಣ್ಯಾತ್ಮ ಮೊದಲ ಗಂಡ.

ಐದು ಜನ ಗಂಡಂದಿರ ಜೊತೆ ಹಾಸಿಗೆ ಹಂಚಿ ಕೊಳ್ಳುವುದು ಮೊದಮೊದಲು ಸರಿಯಾದ ನಿರ್ಧಾರವಲ್ಲವೆಂದು ಅನಿಸಿದರೂ ಬದಲಾದ ಸನ್ನಿವೇಶದಲ್ಲಿ ಎಲ್ಲರಿಗೂ ದೈಹಿಕ ಸುಖ ನೀಡುವುದು ಹೆಂಡತಿಯಾದ ನನ್ನ ಧರ್ಮವೆನ್ನುತ್ತಾಳೆ ಈಕೆ.

ರಾಜೋ ವರ್ಮಾ

ರಾಜೋ ವರ್ಮಾ

ನಾಲ್ಕು ವರ್ಷಗಳ ಹಿಂದೆ ಹಿಂದೂ ಸಂಪ್ರದಾಯದ ಪ್ರಕಾರ ಗುಡ್ಡುವನ್ನು ರಾಜೋ ವರ್ಮ ವರಿಸಿದ್ದಳು. ಕಾನೂನು ಪ್ರಕಾರವಾಗಿ ಈತನೇ ಇವಳ ಪತಿ ಮಹಾರಾಜ.

ರಾಜೋ ವರ್ಮಾ

ರಾಜೋ ವರ್ಮಾ

ಡೆಹ್ರಾಡೂನಿಗೆ ಸಮೀಪದ ಹಳ್ಳಿಯಲ್ಲಿ ವಾಸವಾಗಿರುವ ಗುಡ್ಡುವಿಗೆ ನಾಲ್ಕು ಜನ ತಮ್ಮಂದಿರು. ಅಲ್ಲಿನ ಹಳ್ಳಿಯ ಸಂಪ್ರದಾಯವೇನೆಂದರೆ ಗಂಡನ ಜೊತೆವಿರುವ ಉಳಿದ ನಾಲ್ಕೂ ಜನ ಸಹೋದರರನ್ನು ಗಂಡನ ಸ್ಥಾನದಲ್ಲಿ ನೋಡಬೇಕೆನ್ನುವುದು.

ರಾಜೋ ವರ್ಮಾ

ರಾಜೋ ವರ್ಮಾ

ಬಜ್ಜು (ವಯಸ್ಸು 32), ಸಂತ್ ರಾಮ್ (ವಯಸ್ಸು 28), ಗೋಪಾಲ (ವಯಸ್ಸು 26) ಮತ್ತು ದಿನೇಶ್ (ವಯಸ್ಸು 24) ಈ ನಾಲ್ಕೂ ಜನ ಸಹೋದರರು ಕಳೆದ ವರ್ಷ ರಾಜೋ ವರ್ಮಳ ವಯಸ್ಸು ಹದಿನೆಂಟು ದಾಟಿದ ನಂತರ ಮದುವೆಯಾಗಿದ್ದರು.

ರಾಜೋ ವರ್ಮಾ

ರಾಜೋ ವರ್ಮಾ

ನಾನು ನನ್ನ ಮೊದಲ ಅಣ್ಣ ಗುಡ್ಡುವಿನ ಹಾಗೆ ಯಾವುದೇ ಮುಲಾಜಿಲ್ಲದೆ ಈಕೆಯ ಜೊತೆಗೆ ಮಲಗುತ್ತೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತಾನೆ ಗುಡ್ಡುವಿನ ಸಹೋದರ ಬಜ್ಜು. ಗಂಡಂದಿರು ಕೆಲಸಕ್ಕೆ ಹೋದಾಗ ಈಕೆ ಮನೆಗೆಲಸ ಮಾಡಿಕೊಂಡು ಮಗುವಿನ ಆರೈಕೆಯಲ್ಲಿ ಇರುತ್ತಾಳೆ.

ರಾಜೋ ವರ್ಮಾ

ರಾಜೋ ವರ್ಮಾ

ನನ್ನ ತಾಯಿ ಕೂಡಾ ಮೂರು ಜನ ಸಹೋದರರನ್ನು ಮದುವೆಯಾಗಿದ್ದಳು. ಪ್ರಪಂಚದಲ್ಲಿರುವ ಇತರ ಹೆಂಗಸಿರಿಗಿಂತ ನಾನೇ ಸುಖವಾಗಿದ್ದೇನೆ ಅನ್ನುತ್ತಾಳೆ ರಾಜೋ ವರ್ಮಾ. ಇದನ್ನೆಲ್ಲಾ ಒದಿದ ಮೇಲೆ ನಮಗೂ ನಿಮಗೂ ಕಾಡುವ ಪ್ರಶ್ನೆ ಪ್ರಪಂಚದಲ್ಲಿ ಹೀಗೂ.. ಉಂಟೇ..

English summary
Rajo Verma, 21, lives in a one-room shack with all five, sleeping with a different one each night on a rota. The housewife has no idea which one is the father of her toddler son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more