ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಂಟ್ರಲ್ ಕಾಲೇಜು ಕ್ಯಾಂಪಸ್ ಮ್ಯೂಸಿಯಂ ಆಗಲಿದೆ

By Mahesh
|
Google Oneindia Kannada News

ಬೆಂಗಳೂರು, ಮಾ.19: ನಗರದ ವಿಶಿಷ್ಟ ಐತಿಹಾಸಿಕ ಸೌಧಗಳಲ್ಲಿ ಒಂದೆನಿಸಿರುವ ಸೆಂಟ್ರಲ್ ಕಾಲೇಜು ಇನ್ಮುಂದೆ ಭವ್ಯವಾದ ಮ್ಯೂಸಿಯಂ ಆಗಿ ಆಕರ್ಷಿಸಲಿದೆ. ಬೆಂಗಳೂರು ವಿವಿ ಉಪ ಕುಲಪತಿ ಅವರ ಯೋಜನೆ ಕಾರ್ಯಗತವಾದರೆ ಸೆಂಟ್ರಲ್ ಕಾಲೇಜು ಕ್ಯಾಂಪಸ್ ಸದ್ಯದಲ್ಲೇ ಮ್ಯೂಸಿಯಂ ಆಗಿ ಬದಲಾಗಲಿದೆ.

ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಬಿ ತಿಮ್ಮೇಗೌಡ ಅವರ ಸಲಹೆ ಪ್ರಕಾರ ಸೆಂಟ್ರಲ್ ಕಾಲೇಜು ಕ್ಯಾಂಪಸ್ ಅನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಕಾಲೇಜಿನ ಐತಿಹಾಸಿಕ ಮಹತ್ವವನ್ನು ಉಳಿಸಿಕೊಳ್ಳುವ ಯತ್ನ ನಡೆದಿದೆ. ಕ್ಯಾಂಪಸಿನ ಅಂದ ಚೆಂದಕ್ಕೆ ಭಂಗ ಬರದಂತೆ ಪರಿವರ್ತನೆ ಕಾರ್ಯ ನಡೆಯಲಿದೆಯಂತೆ.

BU plans to convert Central College into Museum

ಶತಮಾನದಷ್ಟು ಹಳೆಯದಾದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಹೊಸದಾಗಿ ರೂಪುಗೊಂಡಿರುವ ಡಿವಿಜಿ ಜ್ಞಾನವಾಹಿನಿ ವಿಶ್ವವಿದ್ಯಾಲಯ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ಕಚೇರಿ ಸಿಗುವ ತನಕ ಇದೇ ಕ್ಯಾಂಪಸ್ ನಲ್ಲೇ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಡಿವಿಜಿ ವಿವಿ ವಿಶೇಷ ಅಧಿಕಾರಿ ಕೆಆರ್ ವೇಣುಗೋಪಾಲ್ ಹೇಳಿದ್ದಾರೆ.

ಆದರೆ, ಈ ಬಗ್ಗೆ ಇನ್ನೂ ಸರ್ಕಾರದ ಜೊತೆ ಮಾತುಕತೆ ನಡೆಸಬೇಕಿದೆ. ಸೆಂಟ್ರಲ್ ಕಾಲೇಜ್ ಲಕ್ಷಾಂತರ ನೆನಪುಗಳನ್ನು ಹೊರ ಹೊಮ್ಮಿಸುವ ಸುಂದರ ತಾಣವಾಗಿ ಉಳಿಯಬೇಕು ಎಂಬುದು ನಮ್ಮ ಯೋಜನೆ ಎಂದು ಪ್ರೊ ತಿಮ್ಮೇಗೌಡ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸುಮಾರು ಐದು ವರ್ಷಗಳ ಕಾಲ ಹೊಸ ವಿಶ್ವ ವಿದ್ಯಾಲಯ ಕ್ಯಾಂಪಸ್ ಆಗಿ ಸೆಂಟ್ರಲ್ ಕಾಲೇಜು ಉಳಿಯಲಿದ್ದು ನಂತರ ಕಾಲೇಜು ಆವರಣದ ಸ್ವರೂಪ ಬದಲಾಗಲಿದೆ. ಇತ್ತೀಚೆಗೆ ಬೆಂಗಳೂರು ವಿಶ್ವ ವಿದ್ಯಾಲಯವನ್ನು ಇಬ್ಭಾಗ ಮಾಡಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ(ಜ್ಞಾನ ಭಾರತಿ ಕ್ಯಾಂಪಸ್) ಹಾಗೂ ಡಿವಿಜಿ ಜ್ಞಾನವಾಹಿನಿ ವಿವಿ (ಹೊಸಕೋಟೆ ಕ್ಯಾಂಪಸ್) ಹೊಸ ವಿವಿಗಳಾಗಿದೆ.

ಪ್ರೊ. ಎಲ್ ಎಸ್ ಶೇಷಗಿರಿ ರಾವ್ ಅಳಲು: ಹೆರಿಟೇಜ್ ಕಟ್ಟಡಗಳನ್ನು ಉಳಿಸಿಕೊಳ್ಳಲು ಬಯಸುವ ನಾವು ಇಂಥ ಹೆರಿಟೆಜ್ ಕಾಲೇಜುಗಳನ್ನು ಉಳಿಸಿಕೊಳ್ಳಲು ಮನಸ್ಸು ಮಾಡಬೇಡವೇ? ಆಗ ಪ್ರತಿ ವರ್ಷ ಸಿ.ವಿ. ರಾಮನ್ ಇಲ್ಲಿ ಒಂದು ಉಪನ್ಯಾಸ ಕೊಡುತ್ತಿದ್ದರು.

ನಾವು, ನಾನಾ ಭಾಷೆಗಳ ವಿದ್ಯಾರ್ಥಿಗಳು, ಅಧ್ಯಾಪಕರು ತಪ್ಪದೆ ಕೇಳುತ್ತಿದ್ದೆವು. ರಾಜಾಜಿ, ಸರ್ ಮಿರ್ಜಾ ಇಸ್ಮಾಯಿಲ್, ನವರತ್ನ ರಾಮರಾವ್ ಮಾಸ್ತಿ ಮೊದಲಾದವರು ವಿದ್ಯಾರ್ಥಿಗಳಾಗಿದ್ದ ಕಾಲೇಜು.

ನಮ್ಮ ತರಗತಿಗಳಿಗೆ ಪಾಠ ಹೇಳಿದವರು ಬಿಎಂಶ್ರೀ, ಎಸ್ ವಿ ರಂಗಣ್ಣ, ಕೆ ಅನಂತರಾಮಯ್ಯ, ಕುವೆಂಪು, ವಿಸೀ ಜಿಪಿ ರಾಜರತ್ನಂ ಮುಂತಾದವರು. ನನ್ನ ಪೀಳಿಗೆಯ ಸಾಹಿತಿಗಳನೇಕರಿಗೆ ಸೆಂಟ್ರಲ್ ಕಾಲೇಜು ವೇದಿಕೆ ಒದಗಿಸಿದೆ.

ಬೆಂಗಳೂರು ವಿವಿ ಬಗ್ಗೆ ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ನೋಡಿದರೆ ದುಃಖವಾಗುತ್ತದೆ.ಬೆಂಗಳೂರು ವಿವಿ ಘನತೆಗೆ ಭಂಗ ತರಬೇಡಿ.ಕೊಡುಗೆಯನ್ನು ಕಡೆಗಣಿಸಬೇಡಿ ಎಂದು ಇತ್ತೀಚೆಗೆ ಹಲವಾರು ದಿನಪತ್ರಿಕೆಗಳ ವಾಚಕರ ವಾಣಿಯಲ್ಲಿ ಪ್ರೊ ಎಲ್ ಎಸ್ ವಿನಂತಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು

English summary
Bangalore University (BU) is planning to convert the Central College building into Museum to retain its importance. BU Vice-chancellor, B Thimme Gowda suggested that the iconic central campus be converted in to a museum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X