ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಎಸ್ ಬಿಸಿಯಿಂದ ಸಾವಿರಾರು ಉದ್ಯೋಗ ಕಡಿತ

By Mahesh
|
Google Oneindia Kannada News

HSBC hints thousands more job cuts
ಬೆಂಗಳೂರು, ಮಾ.19 : ವಿದೇಶಿ ಬ್ಯಾಂಕ್ ಗಳ ಮೇಲೆ ಭಾರತದಲ್ಲಿ ಅನುಮಾನದ ಹುತ್ತ ಬೆಳೆಯುತ್ತಿರುವ ಸಂದರ್ಭದಲ್ಲೇ ಎಚ್ಎಸ್ ಬಿಸಿ ಬ್ಯಾಂಕ್ ಸಾವಿರಾರು ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಯುರೋಪಿನ ಅತಿ ದೊಡ್ಡ ಬ್ಯಾಂಕಿನ ಜಾಲ ಹೊಂದಿರುವ, ಅಮೆರಿಕದ ಪ್ರಮುಖ ಬ್ಯಾಂಕ್ ಕೂಡಾ ಆಗಿರುವ ಎಚ್ ಎಸ್ ಬಿಸಿ ಸುಮಾರು 5,000 ಉದ್ಯೋಗಿಗಳನ್ನು ಹೊರ ದಬ್ಬಲು ಮುಂದಾಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಮೇ ತಿಂಗಳಿನೊಳಗೆ ವಿಶ್ವದಾದ್ಯಂತ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಿ, ತನ್ನ ನಿರ್ವಹಣಾ ವೆಚ್ಚದ ಹೊರೆ ಇಳಿಸಿಕೊಳ್ಳಲು ಎಚ್ ಎಸ್ ಬಿಸಿ ಮುಂದಾಗಿದೆ. ಲಂಡನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್ಎಸ್ ಬಿಸಿ, ಉದ್ಯೋಗ ಕಡಿತದಿಂದಾಗಿ ಸುಮಾರು 1 ಬಿಲಿಯನ್ ಡಾಲರ್ (774 ಯುರೋಗಳು) ಉಳಿಸಲಿದೆ. ಪ್ರಸಕ್ತ ವರ್ಷದಲ್ಲಿ ವೆಚ್ಚಗಳನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಮುಖ್ಯ ಕಾರ್ಯನಿರ್ವಾಹಕ ಸ್ಟುವರ್ಟ್ ಗಲ್ಲಿವರ್ ಹೇಳಿದ್ದಾರೆ.

ಇತ್ತೀಚೆಗೆ ವಿಶ್ವದಾದ್ಯಂತ ಸುಮಾರು 30,000 ಉದ್ಯೋಗ ಕಡಿತ ಮಾಡುವ ಮೂಲಕ ಮುಂದಿನ ಎರಡು ವರ್ಷಗಳಲ್ಲಿ 3.5 ಬಿಲಿಯನ್ ಡಾಲರ್ ಉಳಿತಾಯ ಮಾಡಲಾಗುವುದು ಎಂದು ಬ್ಯಾಂಕ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2012ರಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ 16.5 ರಷ್ಟು ಕುಸಿತ ಕಂಡಿತ್ತು. ಅಮೆರಿಕದ ಮನಿ ಲಾಂಡ್ರಿಂಗ್ ದಂಡಗಳು, ಹೆಚ್ಚಿನ ತೆರಿಗೆ ಪಾವತಿ, ಅಕೌಂಟಿಂಗ್ ಶುಲ್ಕ, ಹಗರಣಗಳಲ್ಲಿ ಹಣ ಸೋರಿಕೆ ಎಲ್ಲವೂ ಎಚ್ ಎಸ್ ಬಿಸಿಗೆ ಮುಳುವಾಗಿದೆ. ಸದ್ಯಕ್ಕೆ ಎಚ್ ಎಸ್ ಬಿಸಿ ಏಷ್ಯಾದಲ್ಲಿ ತನ್ನ ಮಾರುಕಟ್ಟೆ ಹುಡುಕುತ್ತಿದೆ.

ಅಕ್ರಮ ಹಣ ರವಾನೆ, ಅಕ್ರಮ ಔಷಧಿ ಸಾಗಾಟ, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮಗೊಳಿಸಿದ ಆರೋಪ ಹೊತ್ತಿರುವ ಬ್ಯಾಂಕಿಂಗ್ ಸಂಸ್ಥೆ ಎಚ್ ಎಸ್ ಬಿಸಿ ಈಗ ಭಾರಿ ದಂಡಕ್ಕೆ ಬಲಿಯಾಗಬೇಕಾಯಿತು. ಅಮೆರಿಕದ ಕಾನೂನು ಉಲ್ಲಂಘಿಸಿದ ಆರೋಪಕ್ಕೆ 1.92 ಬಿಲಿಯನ್ ಡಾಲರ್ ನಷ್ಟು ಭಾರಿ ಮೊತ್ತ ತೆರಬೇಕಾಯಿತು

ಆಮೆರಿಕ ಮತ್ತು ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಉಗ್ರರ ವ್ಯಾಪಕ ಜಾಲಕ್ಕೆ ಅಕ್ರಮ ಹಣ ವರ್ಗಾವಣೆ ಆಧಾರವಾಗಿದೆ. ಅಲ್ ಖೈದಾ ಉಗ್ರ ಸಂಘಟನೆಯ ಜಾಲದ ವ್ಯಕ್ತಿ ಸ್ಥಾಪಿತ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕ್(Al Rajhi Bank) ಜೊತೆ ಎಚ್ ಎಸ್ ಬಿಸಿ ವ್ಯವಹಾರ ಇಟ್ಟುಕೊಂಡಿದೆ.

ಸೌದಿ ಅರೇಬಿಯಾ, ಬಾಂಗ್ಲಾದೇಶ, ಸಿರಿಯಾ, ಕ್ಯೂಬಾ, ಮೆಕ್ಸಿಕೋ, ಇರಾನ್, ಉತ್ತರ ಕೊರಿಯಾ, ಬರ್ಮಾ, ಕೇಮ್ಯಾನ್ ಐಲ್ಯಾಂಡ್ಸ್, ಜಪಾನ್ ಮತ್ತು ರಷ್ಯಾದ ವಿವಿಧ ಸಂಸ್ಥೆಗಳ ಜತೆ ಈ ಬ್ಯಾಂಕ್ ಹಲವಾರು ಪ್ರಶ್ನಾರ್ಹ ಹಣಕಾಸಿನ ವ್ಯವಹಾರ ನಡೆಸಿದೆ.

English summary
HSBC could cut up to another 5,000 jobs as Europe's biggest bank looks to find further savings, the Financial Times reported
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X