• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಗಿದ 'ಆಪರೇಶನ್ ರೆಡ್ಡೀಸ್': ಲಕ್ಷ್ಮಿನಾರಾಯಣ ದಿಲ್ಲಿಯತ್ತ

By Srinath
|
cbi-jd-vv-lakshmi-narayana-transferred-to-delhi-reddy
ಹೈದರಾಬಾದ್‌, ಮಾರ್ಚ್ 18: ಜನಾರ್ದನ ರೆಡ್ಡಿ ಸೇರಿದಂತೆ ಘಟಾನುಘಟಿಗಳನ್ನು ಇನ್ನಿಲ್ಲದಂತೆ ಕಾಡಿದ ಹೈದರಾಬಾದ್ ಸಿಬಿಐನ ಖಡಕ್ ಅಧಿಕಾರಿ ವಿವಿ ಲಕ್ಷ್ಮಿನಾರಾಯಣ ಹೈದರಾಬಾದ್ ಬಿಟ್ಟು ದೆಹಲಿಯಲ್ಲಿ ಕೇಂದ್ರ ಸ್ಥಾನಕ್ಕೆ ವಾಪಸಾಗಿದ್ದಾರೆ.

ಇದರಿಂದ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೈಲಿನಿಂದ ಹೊರಬಂದು ಶ್ರೀರಾಮುಲುವಿನ ಬಿಎಸ್ಆರ್ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಲು ಅಥವಾ ಕಾನೂನು ಸಮ್ಮತಿಸುವುದಾದರೆ ಚುನಾವಣಾ ಕಣಕ್ಕಿಳಿಯಲೂ ಮೌನ ಚಿಂತನೆಯಲ್ಲಿ ತೊಡಗಿರುವ ಜನಾರ್ದನ ರೆಡ್ಡಿಗೆ ಆನೆ ಬಲಬಂದಂತಾಗಿದೆ. ರೆಡ್ಡಿ ರೊಟ್ಟಿ, ತುಪ್ಪಕ್ಕೆ ಜಾರಿಬಿದ್ದಂತಾಗಿದೆ.

ರೆಡ್ಡಿ ಬಂಧನವಾಗಿ ಒಂದೂವರೆ ವರ್ಷವಾಗಿದ್ದು, ಇತ್ತೀಚೆಗೆ ರಾಜಕೀಯ ಸಮೀಕರಣಗಳು ಬದಲಾಗತೊಡಗಿವೆ. ಕಾಂಗ್ರೆಸ್ ಪಕ್ಷವು ರೆಡ್ಡಿ ಪಟಾಲಂ ವಿರುದ್ಧ ಮೃಧು ಧೋರಣೆ ತಾಳುತ್ತಿದೆ. ಇದಕ್ಕೆ ಜಗನ್ ಮೋಹನ್ ರೆಡ್ಡಿ ಸದ್ಯದಲ್ಲೇ ಮತ್ತೆ ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿದೆ. ಅಥವಾ ಇದೇ ಲಕ್ಷ್ಮಿನಾರಾಯಣರನ್ನು ಕಾಂಗ್ರೆಸ್ ಪಕ್ಷವು ದಾಳವಾಗಿ ಬಳಿಸಿಕೊಂಡ ಪರಿಣಾಮ ರೆಡ್ಡಿಗಳು ಅನಿವಾರ್ಯವಾಗಿ ಕಾಂಗ್ರೆಸಿನತ್ತ ಮೃಧು ಭಾವ ತಾಳುವಂತಾಗಿದೆ.

ಹಾಗಾಗಿ 'ಆಪರೇಶನ್ ರೆಡ್ಡೀಸ್' ಮುಗಿದ ಬೆನ್ನಲ್ಲೇ 7 ವರ್ಷಗಳಿಂದ ನಿಯೋಜನೆ ಮೇಲೆ ಆಂಧ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದ ಆಂಧ್ರದವರೇ ಆದ high profile ಲಕ್ಷ್ಮಿನಾರಾಯಣ ದೆಹಲಿ ತಲುಪಿಕೊಂಡಿದ್ದಾರೆ.

ಖಡಕ್‌ ಅಧಿಕಾರಿ ಎಂದೇ ಹೆಸರಾಗಿದ್ದ ವಿವಿಎಲ್, ಒಎಂಸಿ ಅಕ್ರಮ ಗಣಿಗಾರಿಕೆ, ಜಗನ್‌ ಅಕ್ರಮ ಆಸ್ತಿ ಪ್ರಕರಣ, ಎಮ್ಮಾರ್‌ ಹಗರಣ, ಅದಕ್ಕೂ ಮೊದಲ ಭಾರತದ ಮಟ್ಟಿಗೆ ಅತಿ ದೊಡ್ಡ ಹಗರಣವಾದ ಸತ್ಯಂ ಕಂಪ್ಯೂಟರ್ಸ್ ಹಗರಣ ಸೇರಿದಂತೆ ಹಲವಾರು ಪ್ರಕರಣಗಳನ್ನು ಯಶಸ್ವಿಯಾಗಿ ತನಿಖೆ ನಡೆಸಿ, ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದರು.

ರೆಡ್ಡಿಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಕ್ಷ್ಮಿನಾರಾಯಣ ತಾವಿರುವವರಗೂ ಖಡಕ್ಕಾಗಿ ವಿಚಾರಣೆ ನಡೆಸಿದ್ದರು. ಇನ್ಮುಂದೆ ಪ್ರಕರಣಗಳ ತನಿಖೆಯಲ್ಲಿ ರಾಜಕೀಯ ಒತ್ತಡಗಳು ಸುಳಿಯಲಿದ್ದು, ಅದಕ್ಕೆಲ್ಲ ಮಣೆ ಹಾಕುವ ಜಾಯಮಾನ ಲಕ್ಷ್ಮಿನಾರಾಯಣ ಅವರದ್ದಲ್ಲ. ಅದಕ್ಕೆಲ್ಲ un-fit ಆಗಿರುವ ಲಕ್ಷ್ಮಿನಾರಾಯಣ ಉತ್ತರಾಭಿಮುಖವಾಗಿ ಸೀದಾ ಸಿಬಿಐ ಕೇಂದ್ರ ಕಚೇರಿ ತಲುಪಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CBI JD VV Lakshminarayana transferred to New Delhi Reddy relief. Hyderabad CBI JD VV Lakshminarayana shunted out from Hyderabad to New Delhi. CBI Janardhan Reddy brought to Parappana Agrahara jail

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more