ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗೆ ಸಿಗಲಿದೆ ಟಿಕೆಟ್, ರಾಹುಲ್ ಕೈಗೆ ಭವಿಷ್ಯ

By Mahesh
|
Google Oneindia Kannada News

ಬೆಂಗಳೂರು, ಮಾ.16: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಸ್ವಿ ಸ್ ಟೌನ್ ರೆಸಾರ್ಟ್ ನತ್ತ ದೌಡಾಯಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ನೇತೃತ್ವದ ಸಮಿತಿ ಸುಮಾರು 2150 ಅರ್ಜಿಗಳನ್ನು ಫಿಲ್ಟರ್ ಮಾಡಿದ್ದು, ಶೀಘ್ರದಲ್ಲೇ ಸಂಭಾವ್ಯ ಪಟ್ಟಿ ಹೊರಹಾಕುವ ನಿರೀಕ್ಷೆಯಿದೆ.

ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಸೇರುತ್ತಿದೆ. ಪ್ರತಿ ಕ್ಷೇತ್ರದಲ್ಲೂ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಇದು ಕಾಂಗ್ರೆಸ್ ನ ಬಲವನ್ನು ಹೆಚ್ಚಿಸಿದೆ. ಜನತೆ ಬಿಜೆಪಿ ಹಾಗೂ ಜೆಡಿಎಸ್ ದುರಾಡಳಿತದಿಂದ ರೋಸಿ ಹೋಗಿದ್ದಾರೆ. ದೇವನಹಳ್ಳಿ ಬಳಿಯ ರೆಸಾರ್ಟ್‌ವೊಂದರಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಸಭೆಯಲ್ಲಿ 224 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ರಾಜ್ಯ ಉಸ್ತುವಾರಿ ಮಧು ಸೂದನ್ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಸೇರಿದಂತೆ ಒಟ್ಟಾರೆ 59 ಸದಸ್ಯರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಹಿರಿಯ ಮುಖಂಡ ಡಿಕೆ ಶಿವಕುಮಾರ್ ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಕಾರ್ಯಕ್ರಮ ಉತ್ತೇಜನ ನೀಡಿದೆ. ಹೀಗಾಗಿ, ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ತೀವ್ರಗೊಳಿಸಲಾಗಿದೆ. ಅಂತಿಮ ಪಟ್ಟಿಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನೋಡಿ ಒಪ್ಪಿಗೆ ಸೂಚಿಸಿದ ಮೇಲೆ ಪ್ರಕಟಿಸಲಾಗುವುದು. ಮಾ.21ರೊಳಗೆ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಅಂದ ಹಾಗೆ ಸಭೆಗೆ ರಾಹುಲ್ ಬರ್ತಾರಾ.. ಮುಂದೆ ಓದಿ....

ಅರ್ಜಿಗಳ ಮಹಾಪೂರ

ಅರ್ಜಿಗಳ ಮಹಾಪೂರ

ಕಾಂಗ್ರೆಸ್ ಟಿಕೆಟ್ ಕೋರಿ 2,150 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಚುನಾವಣಾ ಸಮಿತಿ ಸಭೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ತಲಾ ಮೂವರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುತ್ತದೆ. ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲೂ ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧೆ ಬಯಸಿದ್ದಾರೆ.

ಚುನಾವಣಾ ಸಮಿತಿಯಲ್ಲಿ ಯಾರಿದ್ದಾರೆ?

ಚುನಾವಣಾ ಸಮಿತಿಯಲ್ಲಿ ಯಾರಿದ್ದಾರೆ?

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆ.ರೆಹಮಾನ್ ಖಾನ್, ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಸೇರಿದಂತೆ 59ಕ್ಕೂ ಅಧಿಕ ಮುಖಂಡರು.

ಶಾಮನೂರು ಶಿವಶಂಕರಪ್ಪ, ಉಮಾಶ್ರೀ, ಎ.ಕೃಷ್ಣಪ್ಪ, ಎಚ್.ಸಿ. ಮಹದೇವಪ್ಪ, ಕೆ.ಸಿ.ಕೊಂಡಯ್ಯ, ಸತೀಶ ಜಾರಕಿಹೊಳಿ ಸೇರಿ ಎಂಟು ಮಂದಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಎಸ್ಸೆಂ ಕೃಷ್ಣ ಎಲ್ಲಿ?

ಎಸ್ಸೆಂ ಕೃಷ್ಣ ಎಲ್ಲಿ?

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಭೆಯಲ್ಲಿ ಭಾಗವಹಿಸುವ ವಿಷಯ ಇನ್ನೂ ಖಚಿತವಾಗಿಲ್ಲ. ಕೃಷ್ಣ ಅವರ ಪಟ್ಟ ಶಿಷ್ಯ ಡಿಕೆ ಶಿವಕುಮಾರ್ ಉತ್ಸಾಹದಿಂದ ಸಭೆಗೆ ಹೋಗುತ್ತಿದ್ದಾರೆ. ಪಕ್ಷೇತರರ ಜೊತೆ ಚಹಾ ಕೂಟ ಆದಮೇಲೆ ಎಐಸಿಸಿ ಮೀಟಿಂಗ್ ಗೂ ಹೋಗದೆ ಗೈರು ಹಾಜರಾದ ಕೃಷ್ಣ ಅವರ ಪಾತ್ರದ ಬಗ್ಗೆ ಹೈಕಮಾಂಡ್ ಅವರು ಗುಟ್ಟು ಬಿಟ್ಟು ಕೊಟ್ಟಿಲ್ಲ.

ಯಾರಿಗೆ ಟಿಕೆಟ್?

ಯಾರಿಗೆ ಟಿಕೆಟ್?

ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತ. ನಾಲ್ವರು ಪಕ್ಷೇತರ ಶಾಸಕರ ಜೊತೆಗೆ ಬಿಜೆಪಿಯ ಕೆಲವು ಸಚಿವರು, ಶಾಸಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಗಳು, ಐಎಎಸ್, ಐಪಿಎಸ್ ಗಳಿಗೆ ಟಿಕೆಟ್ ಹಂಚಿಕೆ ಬಗ್ಗೆ ಅಪಸ್ವರ ಎದ್ದಿದೆ. ವಿಷಯ ರಾಹುಲ್ ಕಿವಿಗೂ ಮುಟ್ಟಿದೆ. ಯುವಕರಿಗೆ ಆದ್ಯತೆ ನೀಡಿ ಎಂದು ರಾಹುಲ್ ಫರ್ಮಾನು ಹೊರಡಿಸಿದ್ದಾರೆ.

ಪಕ್ಷೇತರರ ಸೇರ್ಪಡೆಗೆ ಓಕೆ

ಪಕ್ಷೇತರರ ಸೇರ್ಪಡೆಗೆ ಓಕೆ

ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಡಿ.ಸುಧಾಕರ್, ವೆಂಕಟರಮಣಪ್ಪ ಮತ್ತು ಶಿವರಾಜ ತಂಗಡಗಿ ಅವರನ್ನು ಸೇರಿಸಿಕೊಳ್ಳಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಆದರೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಉಳಿದವರ ಸೇರ್ಪಡೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಕಾಂಗ್ರೆಸ್ ನಡೆ ಇನ್ನೂ ನಿಗೂಢವಾಗಿದ್ದು ರಾಹುಲ್ ಕೈಲಿ ಪಕ್ಷೇತರರ ಜಾತಕವಿದೆ.

ರಾಹುಲ್ ಕೈಲಿ ಅಭ್ಯರ್ಥಿಗಳ ಭವಿಷ್ಯ

ರಾಹುಲ್ ಕೈಲಿ ಅಭ್ಯರ್ಥಿಗಳ ಭವಿಷ್ಯ

'ಆಪರೇಷನ್ ಕಮಲ'ದ ಆಮಿಷಕ್ಕೆ ಒಳಗಾಗಿ ಹಿಂದೆ ಕಾಂಗ್ರೆಸ್ ತೊರೆದವರನ್ನು ಪುನಃ ಸೇರಿಸಿಕೊಳ್ಳುವುದು ಬೇಡ

ಆದರೆ, ಗೆಲ್ಲುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳನ್ನು ಕಳೆದುಕೊಳ್ಳುವುದು ಬೇಡ ಎಂಬ ಸಂದೇಶ ರಾಹುಲ್ ನೀಡಿದ್ದಾರೆ. ಅಂದ ಹಾಗೆ ರಾಹುಲ್ ಗಾಂಧಿಗೂ ಈ ಸಭೆಗೆ ಬರುವಂತೆ ಆಹ್ವಾನ ಕಳಿಸಲಾಗಿದೆ. ಅದರೆ, ಬರೋದು ಡೌಟ್ ಮಾ.21ರೊಳಗೆ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ.

ಸಮಾವೇಶಗಳ ಪರ್ವ ಶುರು

ಸಮಾವೇಶಗಳ ಪರ್ವ ಶುರು

ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಗರದ ಆರ್ ಬಿಎನ್ ಎಂಎಸ್ ಮೈದಾನದಲ್ಲಿ ಸರ್ವಜ್ಞ ನಗರ, ಪುಲಿಕೇಶಿ ನಗರ, ಶಾಂತಿನಗರ ಹಾಗೂ ಸರ್ ಸಿ.ವಿ ರಾಮನ್ ನಗರ ಅಸೆಂಬ್ಲಿ ಕ್ಷೇತ್ರದ ಕಾರ್ಯಕರ್ತರ ಬೃಹರ್ ಸಮಾವೇಶ ಮಾ.18ರಂದು ನಡೆಯಲಿದೆ. ಕಾಂಗ್ರೆಸ್ ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ಕಿರಿಯ ಮುಖಂಡರು ಭಾಗವಹಿಸಲಿದ್ದಾರೆ.

English summary
The State Election Committee of the Karnataka Pradesh Congress Committee (KPCC) is holding deliberations in private resort for two days from Saturday to scrutinise more 2,150 applications received from party candidates seeking ticket to contest in 224 the Legislative Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X