• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಗೇ ನುಗ್ಗಿ 8 ಗಂಟೆ ಪ್ರೇಯಸಿಯ ರೇಪ್ ಮಾಡಿದರು

By Srinath
|

ಮುಂಬೈ, ಮಾ.15: ವಿಲೆ ಪಾರ್ಲೆಯಲ್ಲಿರುವ ಕ್ಯಾಬ್ ಚಾಲಕನ ಪ್ರೇಯಸಿಯನ್ನು ನಾಲ್ವರು ಕುಡುಕ ಯುವಕ ಗೂಂಡಾಗಳು ಗುರುವಾರ ಬೆಳಗಿನ ಜಾವ 2 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೂ ಗ್ಯಾಂಗ್ ರೇಪ್ ಮಾಡಿದ್ದಾರೆ.

ಘಟನೆ ವಿಚಿತ್ರವಾಗಿದೆ. ಏನಪಾ ಅಂದರೆ Cool Cab ಸಂಸ್ಥೆಯ ಟ್ಯಾಕ್ಸಿ ಚಾಲಕ ತನ್ನ ಹೆಂಡತಿಯನ್ನು ತವರು ಮನೆಗೆ ಕಳಿಸಿದ್ದ. ಮತ್ತು ಮಕ್ಕಳನ್ನು ಬಾವಮೈದುನನ ಮನೆಗೆ ಕಳಿಸಿದ್ದ. ಆದರೆ ಮನೆಯಲ್ಲಿ ಒಬ್ಬನೇ ಉಳಿದುಕೊಂಡ. ಏಕಾಂತದಲ್ಲಿ ಟ್ಯಾಕ್ಸಿ ಚಾಲಕ ತಡ ಮಾಡದೆ ತನ್ನ ಪ್ರೇಯಸಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ.

ಸರಿ ಹಾಗೆ ಮನೆಗೆ ಬಂದ 23 ವರ್ಷದ ಗರ್ಲ್ ಫ್ರೆಂಡ್ ಜತೆ ರಾತ್ರಿ ಸರಸಕ್ಕೆ ಇಳಿದಿದ್ದಾನೆ. ಇದು ನಡು ರಾತ್ರಿ 2 ಗಂಟೆ ವರೆಗೂ ಮುಂದುವರಿದಿದೆ. ಸರಿಯಾಗಿ ಆ ಅವೇಳೆಯಲ್ಲೇ ಕುಡಿದ ಮತ್ತಿನಲ್ಲಿದ್ದ ನಾಲ್ವರು ಗೂಂಡಾಗಳು ಸೀದಾ ಚಾಲಕನ ಮನೆಗೆ ಎಂಟ್ರಿ ಕೊಡುತ್ತಾರೆ.

ಚಾಕು ತೋರಿಸಿ ಚಾಲಕನನ್ನು ಬಾತ್ ರೂಮಿನಲ್ಲಿ ಕೂಡಿಹಾಕುತ್ತಾರೆ. ಆ ನಂತರ ಚಾಲಕನ ಗರ್ಲ್ ಫ್ರೆಂಡ್ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಾರೆ. ಈ ಮಧ್ಯೆ, ಚಾಲಕ ತನ್ನ ಗೆಳೆಯನಿಗೆ ಫೋನ್ ಮಾಡಿ, ತನಗೊದಗಿದ ದುಃಸ್ಥಿತಿಯನ್ನು ಅರಹುತ್ತಾನೆ. ಆದರೆ ಚಾಲಕ ಜೋಕ್ ಮಾಡುತ್ತಿದ್ದಾನೆ ಎಂದು ಗೆಳೆಯ ಸಹಾಯ ಮಾಡುವುದಕ್ಕೆ ಮುಂದಾಗುವುದಿಲ್ಲ. ಇತ್ತ ಚಾಲಕ ಮತ್ತು ಅವನ ಗರ್ಲ್ ಫ್ರೆಂಡ್ ದುಃಸ್ಥಿತಿ ಮುಂದುವರಿಯುತ್ತದೆ.

ಆರೋಪಿಗಳನ್ನು ರಾಜೇಶ್ ವರ್ಮಾ (21), ಮಹೇಶ್ ಕೇವತ್ (20), ಕೃಷ್ಣ ಕೇವತ್ (23) ಮತ್ತು ರಾಮಚಂದ್ರ ಹುಂಬೆ (30) ಎಂದು ಗುರುತಿಸಲಾಗಿದ್ದು, ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.

ಟ್ಯಾಕ್ಸಿ ಚಾಲಕ ಹೆಂಡತಿಗೆ ಅನ್ಯಾಯ ಮಾಡಿರುವುದರ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದು, ವಿಷಯ ತಿಳಿದರೆ ಅವಳು ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ಆತಂಕಗೊಂಡಿದ್ದಾನೆ.

ಪೊಲೀಸರಿಗೆ ವಿಷಯ ಗೊತ್ತಾಗಿದ್ದು ಹೇಗೆ?: ರಾತ್ರಿ ಒಂದ್ಹೊತ್ತಿನಲ್ಲಿ ತಮ್ಮ ಗೆಳೆಯ ಫೋನ್ ಮಾಡಿದ್ದು, ತನ್ನ ಮನೆಗೆ ನುಗ್ಗಿದ ಗೂಂಡಾಗಳು ಅತ್ಯಾಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ ಎಂಬ ವಿಷಯವನ್ನು ಆ ಗೆಳೆಯ ಮತ್ತೊಬ್ಬ ಚಾಲಕ ಗೆಳೆಯನಿಗೆ ಬೆಳಗ್ಗೆ ತಿಳಿಸುತ್ತಾನೆ. ಆಗ ವಿಷಯ ನಿಜವಿರಬಹುದು ಎಂದು ಆತಂಕಗೊಂಡ ಆ ಮೂರನೆಯ ಗೆಳೆಯ ಪೊಲೀಸರಿಗೆ ವಿಷಯ ತಿಳಿಸುತ್ತಾನೆ. ಪೊಲೀಸರು ಬಂದು ನೋಡಿದಾಗ ಕಿಟಕಿಯಲ್ಲಿ ಬಗ್ಗಿ ನೋಡಿದಾಗ ಅತ್ಯಾಚಾರ ನಡೆಯುತ್ತಿರುವುದು ಪೊಲೀಸರ ಕಣ್ಣಿಗೆ ಬೀಳುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Four youths gangrape girlfriend of Cool Cab driver for 8 hours. A 23-year-old woman was threatened with a knife at 2 am on Thursday and repeatedly gangraped till the police arrived at the scene of crime at 10 am. The boyfriend of the woman, who was locked in the bathroom, tried calling for help, but his distress call was taken as a joke.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more