ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ ಉದ್ಯೋಗಿ ಪಾಯಲ್ ಹತ್ಯೆ ಸಿಬಿಐ ತನಿಖೆಗೆ

By Mahesh
|
Google Oneindia Kannada News

CBI to probe Dell Employee Payal Murder Case
ನವದೆಹಲಿ, ಮಾ.16: ಬೆಂಗಳೂರಿನ ಜೆ.ಪಿ ನಗರದ ನಿವಾಸಿ ಡೆಲ್ ಸಂಸ್ಥೆ ಉದ್ಯೋಗಿ ಪಾಯಲ್ ಸುರೇಖಾ ಪ್ರಕರಣ ಕೊನೆಗೂ ಸಿಬಿಐ ತನಿಖೆಗೆ ವಹಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಿಗೂಢವಾಗಿ ಉಳಿದಿರುವ ಪ್ರಕರಣದ ತನಿಖೆ ವಹಿಸಿಕೊಳ್ಳಲು ಸಿಬಿಐ ನಿರಾಕರಿಸಿತ್ತು. ಆದರೆ, ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ತನಿಖೆ ನಡೆಸುವಂತೆ ನಿರ್ದೇಶಿಸಿದೆ.

ಯುವತಿ ತಂದೆ ದೀನದಯಾಳ್ ಸುರೇಖಾ ಮತ್ತು ಆರೋಪಿ ಜೇಮ್ಸ ಕುಮಾರ್ ರೇ ಸಲ್ಲಿಸಿದ ಎರಡು ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ದೀಪಕ್ ಮಿಶ್ರ ಅವರಿದ್ದ ನ್ಯಾಯಪೀಠ ಸಿಬಿಐ ತನಿಖೆಗೆ ನಿರ್ದೇಶಿಸಿತು.

ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಪಾಯಲ್ ಸುರೇಖಾ(29) ಅಮಾನುಷ ಕೊಲೆ ಕೇಸ್ ಕ್ಲೋಸ್ ಆಗಿದೆ. ಈ ಪ್ರಕರಣ ತನಿಖೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಷರಾ ಹಾಕಿ ಸಿಬಿಐ ತನ್ನ ಅಫಿಡವಿಟ್ ಅನ್ನು ಗುರುವಾರ(ಏ.19) ಹೈಕೋರ್ಟ್ ಗೆ ಸಲ್ಲಿಸಿದೆ.

ಸಿಬಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾ ಆನಂದ್ ಅವರು ಎಸಿಪಿ ಜಿತೇಂದ್ರನಾಥ್ ಅವರಿಗೆ ನಿರ್ದೇಶನ ನೀಡಿ ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ಮುಂದುವರೆಸುವಂತೆ ಸೂಚಿಸಲಾಗಿತ್ತು.

ಅಸ್ಸಾಂ ಮೂಲದ ಪಾಯಲ್ (29) ಅವರನ್ನು ಡಿ.17,2010ರಂದು ಜೆಪಿ ನಗರದ ತಮ್ಮ ಅಪಾರ್ಟ್ಮೆಂಟ್ ನಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಜೇಮ್ಸ ಕುಮಾರ್ ರೇ ಅವರನ್ನು ನಾಲ್ಕು ದಿನದ ನಂತರ ಬಂಧಿಸಿದ್ದರು. ಅನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ರೇ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಸಿಬಿಐ ನಿರ್ಣಯಕ್ಕೆ ಕಾರಣ? : ಕೆಳ ಹಂತದ ನ್ಯಾಯಾಲಯ ಸಿಬಿಐಗೆ ನಿರ್ದೇಶನ ನೀಡುವ ಅಧಿಕಾರ ಇಲ್ಲ ಎನ್ನುವ ಸಣ್ಣ ಕಾರಣ ಹಿಡಿದುಕೊಂಡು ತನಿಖೆ ವಿಳಂಬಗೊಳಿಸಿದ ಸಿಬಿಐ, ಈಗ ಕೇಸ್ ನಿಂದ ಕೈತೊಳೆದುಕೊಂಡಿದೆ.

ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮಾತ್ರ ತನಿಖೆ ಆದೇಶಿಸಿದರೆ ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿರುವ ಸಿಬಿಐ ಸೂಪಿರಿಯಾರಿಟಿ ಕಾಂಪ್ಲೆಕ್ಸ್ ಗೆ ಒಳಗಾದಂತೆ ನಡೆದುಕೊಳ್ಳುತ್ತಿದೆ.

ಪೊಲೀಸ್ ಫೈಲ್ ಕ್ಲೋಸ್ ಆಗಿದೆ: ಪಾಯಲ್ ಸುರೇಖಾ ಕೊಲೆ ಕೇಸಿಗೆ ಮುಕ್ತಾಯ ಹಾಡಿರುವ ಜೆಪಿ ನಗರ ಪೊಲೀಸರು, ಪಾಯಲ್ ಪತಿ ಅನಂತ್ ನಾರಾಯಣ ಮಿಶ್ರಾ ಹೇಳಿಕೆ ಪಡೆದು ಆತನ ಬಿಸಿನೆಸ್ ಪಾರ್ಟ್ನರ್ ಜೇಮ್ಸ್ ಕುಮಾರ್ ರಾಯ್ ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು.

ಆದರೆ, ಪಾಯಲ್ ತಂದೆ ಮಾತ್ರ 'ನನ್ನ ಮಗಳ ಅತ್ತೆ ಮನೆಯರ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸಿಬಿಐ ಸಂಸ್ಥೆಯ ಬದಲಿಗೆ ಪೊಲೀಸರ ಕೈಗೆ ಕೇಸ್ ಒಪ್ಪಿಸಿತ್ತು.

ಮಹಿಳೆ ಪತಿ ಕಟಕ್‌ನ ಅನಂತ ನಾರಾಯಣ ಮಿಶ್ರ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಸುಪ್ರೀಂ ಕೋರ್ಟ್ ಗೆ ಪಾಯಲ್ ತಂದೆ ಮೇಲ್ಮನವಿ ಸಲ್ಲಿಸಿದ್ದರು. ಒರಿಸ್ಸಾದಲ್ಲಿ ಡಿವೈಎಸ್‌ಪಿ ಆಗಿ ಕೆಲಸ ಮಾಡುತ್ತಿರುವ ಅನಂತ ನಾರಾಯಣ ಮಿಶ್ರ ಅವರ ತಂದೆತಾಯಿ ಬೆಂಗಳೂರು ಪೊಲೀಸರ ಮೇಲೆ ಪ್ರಭಾವ ಬೀರಿ ತನಿಖೆ ದಿಕ್ಕು ತಪ್ಪಿಸಿದ್ದಾರೆ ಎಂದು ತ್ರಿಪಾಠಿ ದೂರಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Supreme court on Friday(Mar.15) ordered CBI to probe into Bangalore Dell employee Payal Surekha murder case.A native of Assam, Payal, 29, was found murdered in JP Nagar apartment, Bangalore Dec 10,2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X