ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ವಿಶ್ವ ದಾಖಲೆ ಕೆತ್ತಿದ ನರೇಂದ್ರ ಮೋದಿ

By Srinath
|
Google Oneindia Kannada News

Gujarat CM Narendra Modi 3-D avataar enters Guinness World Records
ಅಹಮದಾಬಾದ್, ಮಾ.15: ಗುಜರಾತಿನ ನರೇಂದ್ರ ಮೋದಿ ಅವರು ಕಳೆದ ಡಿಸೆಂಬರಿನಲ್ಲಿ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರಲ್ಲ. ಆ ಪ್ರಯತ್ನ ಜಾರಿಯಲ್ಲಿದ್ದಾಗ ಅವರು ಗಿನ್ನಿಸ್ ವಿಶ್ವ ದಾಖಲೆಯನ್ನೂ ಮಾಡಿದ್ದಾರೆ.

ಮೋದಿ ಮೋಡಿಯ 3ಡಿ ಅವತಾರ: ಒಂದೇ ಸಮಯದಲ್ಲಿ ನಾನಾ ಕ್ಷೇತ್ರಗಳ ಮತದಾರ ಪ್ರಭುಗಳೊಂದಿಗೆ ಸಂಪರ್ಕ ಸಾಧಿಸಿ, ಪ್ರಚಾರ ಭಾಷಣ ಮಾಡಿದ ಪ್ರಕ್ರಿಯೆ ಈಗ ವಿಶ್ವ ಮಾನ್ಯತೆ ಪಡೆದಿದ್ದು, Guinness Book of World Recordsಗೆ ಸೇರ್ಪಡೆಯಾಗಿದೆ.

ಅಂದರೆ ಮೋದಿ 55 ನಿಮಿಷ ಕಾಲ ಹೀಗೆ ಒಮ್ಮೆ ಚುನಾವಣೆ ಪ್ರಚಾರ ಭಾಷಣ ಮಾಡಿದ್ದರು. Pepper's Ghost Illusion ಎಂಬ ಆ ತಂತತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ NChant 3D ಕಂಪನಿಯ ರಾಜ್ ಕಾಸು ರೆಡ್ಡಿ ಮತ್ತು ಮಣಿ ಶಂಕರ್ ಈ ದಾಖಲೆಗೆ ಭಾಜನರಾಗಿದ್ದಾರೆ.

2012ರ ಡಿಎಂಬರ್ 12ರಂದು ಒಂದೇ ಬಾರಿಗೆ ಒಟ್ಟು 52 ಭಾಗಗಳಲ್ಲಿ ಮೋದಿ 3ಡಿ ಅವತಾರದಲ್ಲಿ ಕಾಣಿಸಿಕೊಂಡು ಯಶಸ್ವಿಯಾಗಿ ಪ್ರಚಾರ ನಡೆಸಿದ್ದರು. ಅದಕ್ಕೂ ಮೊದಲು ನವೆಂಬರ್ 18ರಂದು ಗುಜರಾತಿನ ನಾಲ್ಕು ನಗರಗಳಲ್ಲಿ ಜಮಾಯಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗುಜರಾತಿನಲ್ಲಿ ಮೋದಿ ಮೋಡಿಯ 3ಡಿ ಅವತಾರದ್ದೇ ಎಲ್ಲೆಡೆ ವ್ಯಾಪಕ ಚರ್ಚೆಯಾಗಿತ್ತು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಒಂದೇ ಬಾರಿಗೆ ಬಹಳಷ್ಟು ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪ್ರಚಾರ ನಡೆಸಿದ್ದರು.

ಬ್ರಿಟನ್ನಿನ Musion ಕಂಪನಿಯು ಈ ವಿಡಿಯೋ ಅತ್ಯುನ್ನತ ತಂತ್ರಜ್ಞಾನವನ್ನು NChant 3D ಕಂಪನಿಗಾಗಿ ಸಿದ್ಧಪಡಿಸಿದ್ದರು. ಹಾಲಿವುಡ್ ನಲ್ಲಿ ಈ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Gujarat CM Narendra Modi 3-D avataar enters Guinness World Records,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X