ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ 266ನೇ ಪೋಪ್

By Prasad
|
Google Oneindia Kannada News

Jorge Mario Bergoglio is the new pope
ವ್ಯಾಟಿಕನ್ ಸಿಟಿ, ಮಾ. 14 : ಪೋಪ್ ಬೆನೆಡಿಕ್ಟ್ XVI ಅವರ ಉತ್ತರಾಧಿಕಾರಿಯಾಗಿ ಅರ್ಜೆಂಟಿನಾದ ಜಾರ್ಗ್ ಮಾರಿಯೊ ಬೆರ್ಗೋಗ್ಲಿಯೋ (76) ಅವರು ಬುಧವಾರ ರಾತ್ರಿ ಆಯ್ಕೆಯಾಗಿದ್ದಾರೆ. ವ್ಯಾಟಿಕನ್ ಸಿಟಿಯಲ್ಲಿ ನೆರೆದಿದ್ದ ಸಹಸ್ರಾರು ಕ್ರೈಸ್ತರು ಮತ್ತು ವಿಶ್ವದಾದ್ಯಂತ ಇರುವ ಕ್ರೈಸ್ತ ಧರ್ಮೀಯರು 266ನೇ ಧರ್ಮಗುರುವನ್ನು ಹರ್ಘೋದ್ಗಾರದಿಂದ ಸ್ವಾಗತಿಸಿದ್ದಾರೆ.

13ನೇ ಶತಮಾನದಲ್ಲಿ ಬಡತನದಲ್ಲಿಯೇ ಬದುಕಿದ ಇಟಲಿಯ ಧರ್ಮಗುರು ಫ್ರಾನ್ಸಿಸ್ ಅವರ ಹೆಸರನ್ನು ಜಾರ್ಗ್ ಅವರು ಇಟ್ಟುಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಮೊದಲ ಅಮೆರಿಕನ್ ಧರ್ಮಗುರುವಾಗಿದ್ದು, ಒಂದು ಶತಮಾನದ ಇತಿಹಾಸ ಗಮನಿಸಿದರೆ ಯುರೋಪ್‌ನಿಂದ ಹೊರಗಿರುವ ಮೊದಲ ಧರ್ಮಗುರುವಾಗಿದ್ದಾರೆ.

ಆಯ್ಕೆಯಾಗುತ್ತಿದ್ದಂತೆ ಸೇಂಟ್ ಪೀಟರ್ಸ್ ವೃತ್ತದಲ್ಲಿ ನೆರೆದಿದ್ದ ಸಹಸ್ರಾರು ಕ್ರೈಸ್ತ ಧರ್ಮೀಯರತ್ತ ಕೈಬೀಸಿ ಅಭಿನಂದನೆಯನ್ನು ಪೋಪ್ ಫ್ರಾನ್ಸಿಸ್ ಸ್ವೀಕರಿಸಿದರು. ಜನರು ಕೂಡ ಕಿವಿಗಡಚಿಕ್ಕುವ ಚಪ್ಪಾಳೆ ಹರ್ಘೋದ್ಗಾರಗಳ ನಡುವೆ ಒಬ್ಬರಿಗೊಬ್ಬರು ಅಪ್ಪಿಕೊಂಡು, ಮುತ್ತು ನೀಡುವ ಮುಖಾಂತರ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಪೋಪ್ ಆಯ್ಕೆಯ ದ್ಯೋತಕವಾಗಿ ಸಿಸ್ಟೈನ್ ಚಾಪೆಲ್‌ನ ಚಿಮಣಿಯ ಮೂಲಗ ಬಿಳಿಬಣ್ಣದ ಹೊಗೆಯನ್ನು ಹೊರಬಿಡಲಾಯಿತು.

ದಶಕಗಳ ಕಾಲ ಧರ್ಮಗುರುವಾಗಿ ಆಡಳಿತ ನಡೆಸುವ ವ್ಯಕ್ತಿಯ ಬದಲು ಹೆಚ್ಚು ಅನುಭವವಿರುವ, ಜನಪ್ರಿಯವಾಗಿರುವ, ವಿನಯ ಸಂಪನ್ನರಾಗಿರುವ, ಜನರನ್ನು ಕ್ರೈಸ್ತ ಧರ್ಮದೆಡೆಗೆ ಸೆಳೆಯುವ ಪೋಪ್‌ರನ್ನು ಆರಿಸುವ ಉದ್ದೇಶದಿಂದ ತ್ವರಿತಗತಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಪೋಪ್ ಆಗಿ ಆಯ್ಕೆಯಾದ ಮೇಲೆ ತಮ್ಮ ಹರ್ಘವನ್ನು ಹಿಂದಿನ ಪೋಪ್ ಬೆನೆಡಿಕ್ಟ್ ಅವರಿಗೆ ಕರೆ ಮಾಡುವ ಮುಖಾಂತರ ಪೋಪ್ ಫ್ರಾನ್ಸಿಸ್ ಹಂಚಿಕೊಂಡರು. "ಸಹೋದರರೆ ಮತ್ತು ಸಹೋದರಿಯರೆ, ಗುಡ್ ಈವ್ನಿಂಗ್" ಎಂದು ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಮಾತ್ರವಲ್ಲ ಹಿಂದಿನ ಪೋಪ್ ಬೆನೆಡಿಕ್ಟ್ ಅವರಿಗಾಗಿ ಪ್ರಾರ್ಥಿಸಿ ಎಂದು ಜನರನ್ನು ಕೋರಿದರು.

ಸಲಿಂಗಿಗಳ ಮದುವೆ, ಗರ್ಭಪಾತ ಮತ್ತು ಗರ್ಭನಿರೋಧಕ ಬಳಕೆಯನ್ನು ತಾವು ವಿರೋಧಿಸುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಸಲಿಂಗಿಗಳ ಮದುವೆ ದೈವೇಚ್ಛೆಯ ಮೇಲೆ ನಡೆಸುವ ವಿಧ್ವಂಸಕ ಕೃತ್ಯ ಎಂದು ಅವರು ಬಣ್ಣಿಸಿದ್ದಾರೆ. ಅವರು ಪೋಪ್ ಆಗುತ್ತಿದ್ದಂತೆ ದಶಕಗಳ ಹಿಂದೆ ಅವರ ವಿರುದ್ಧ ಮಾಡಲಾಗಿದ್ದ ಕೆಲ ಆರೋಪಗಳು ಜೀವ ಪಡೆದುಕೊಂಡಿವೆ. ಅವರ ಮೇಲೆ ಧರ್ಮಗುರುಗಳನ್ನು ಅಪಹರಿಸಿ, ಅವರ ಹತ್ಯೆಗೆ ಸಂಚು ಹೂಡಿದ ಆರೋಪಗಳನ್ನು ಹೊರಿಸಲಾಗಿತ್ತು.

English summary
76-year-old Jorge Mario Bergoglio from Argentina, South America, has been elected as 266th pope of Vatican city. He is the first American and first non-Europian in a millennium. He chose the Fancis, the name of the Italian preacher who lived life in poverty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X