ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಹ್ಯಾಕರ್ ಹಾವಳಿ : ಒಬಾಮಾ ಖಾತೆಗೆ ಕನ್ನ

|
Google Oneindia Kannada News

US President Barack Obama
ವಾಷಿಂಗ್ಟನ್ , ಮಾ.14 : ಹ್ಯಾಕರ್ ಗಳ ಹಾವಳಿ ವಿಪರೀತವಾಗಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕಾ ಮೇಲೆ ಹ್ಯಾಕರ್ ಗಳು ಕಣ್ಣು ಹಾಕಿದ್ದಾರೆ. ಅಮೆರಿಕಾದ ಅಧ್ಯಕ್ಷ ಬಾರಕ್ ಒಬಾಮ ಸೇರಿದಂತೆ ಅತಿ ಗಣ್ಯರ ಇ ಮೇಲ್ ಖಾತೆಗಳಿಗೆ ಕನ್ನ ಹಾಕಿ ಮಾಹಿತಿಗಳನ್ನು ಕದಿಯಲಾಗಿದೆ.

ಅಮೆರಿಕಾದ ಅಧ್ಯಕ್ಷ ಬಾರಕ್ ಒಬಾಮ ದಂಪತಿ, ದೇಶದ ಪ್ರಮುಖ ರಾಜಕಾರಣಿ ಹಿಲರಿ ಕ್ಲಿಂಟನ್ ಮತ್ತು ಸಾರಾ ಪಾಲಿನ್, ಹಾಲಿವುಡ್ ನಟಿ ಸೇರಿದಂತೆ ವಿವಿಧ ಗಣ್ಯ ವ್ಯಕ್ತಿಗಳ ಖಾತೆಗೆ ಕನ್ನ ಹಾಕಿ ಅದರ ಮಾಹಿತಿಯನ್ನು ವೆಬ್ ಸೈಟ್ ವೊಂದರಲ್ಲಿ ಪ್ರಕಟಿಸಲಾಗಿದೆ.

ಹ್ಯಾಕರ್ ಗಳು ನಮ್ಮ ವೆಬ್ ಸೈಟ್ ಮಾಹಿತಿ ಕದಿಯುತ್ತಿರುವುದು ತಿಳಿದಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ದೊರಕಿರಲಿಲ್ಲ. ಅಮೆರಿಕಾದ ಗಣ್ಯ ವ್ಯಕ್ತಿಗಳ ಇ ಮೇಲ್ ಖಾತೆಯ ಮಾಹಿತಿಗಳು ಹ್ಯಾಕ್ ಆಗಿರುವುದು ತಿಳಿದಿರಲಿಲ್ಲ ಎಂದು ನ್ಯೂಯಾರ್ಕ್ ಡೇಲಿ ಪತ್ರಿಕೆ ಪ್ರಕಟಿಸಿದೆ.

ಅಮೆರಿಕಾದ ಪ್ರತಿಷ್ಠತ ಪತ್ರಿಕೆ ದಿ ನ್ಯೂಯಾರ್ಕ್ ಡೇಲಿ ವರದಿಗಾರರು, ಅಟಾರ್ನಿ ಜನರಲ್ ಎರಿಕ್ ಹೋಲ್ಡರ್, ಎಫ್‌ಬಿಐ ನಿರ್ದೇಶಕ ರಾಬರ್ಟ್ ಮ್ಯೂಲೆರ್, ಜೇ ಜೆಡ್, ಬಿಯೋನ್ಸ್ ಮುಂತಾದವರ ಇ ಮೇಲ್ ಖಾತೆಗಳಿಗೆ ಕನ್ನ ಹಾಕಲಾಗಿದೆ ಎಂದು ಪತ್ರಿಕೆ ಬಹಿರಂಗಪಡಿಸಿದೆ.

ಕೇವಲ ಇ ಮೇಲ್ ಖಾತೆಗೆ ಮಾತ್ರ ಕನ್ನ ಹಾಕಿರದ ಹ್ಯಾಕರ್ ಗಳು ಗಣ್ಯರ ಮನೆ ವಿಳಾಸ, ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಹ್ಯಾಕ್ ಮಾಡಿ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಮೂಲಕ ಅಮೆರಿಕಾಕ್ಕೆ ಮುಜುಗರ ಉಂಟುಮಾಡಿದ್ದಾರೆ.

ಹ್ಯಾಕರ್ ಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕಾ ಈ ಕುರಿತು ತನಿಖೆಗೆ ಆದೇಶಿಸಿದೆ. ಗುಪ್ತಚಾರರು ತನಿಖೆ ಪ್ರಾರಂಭಿಸಿದ್ದು, ಕನ್ನ ಹಾಕಿದವರನ್ನು ಕಂಡು ಹಿಡಿಯುವುದಾಗಿ ಭರವಸೆ ನೀಡಿದ್ದಾರೆ. ಚೀನಾ ದೇಶದಲ್ಲಿ ಹ್ಯಾಕರ್ ಗಳ ಸಂಖ್ಯೆ ಹೆಚ್ಚಾಗಿದ್ದು, ಚೀನಾದ ಕೆಲಸವಿರಬಹದು ಎಂದು ಶಂಕಿಸಲಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The hackers enters America. US President Barack Obama, Hillary Clinton and other top politicians E mail account were hacked. The New York Daily News confirmed that America most top person's E mails are hacked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X