• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಶೀಕರಣ: ಅತ್ಯಾಚಾರಕ್ಕೆ ಯತ್ನಿಸಿದ ಮಾಂತ್ರಿಕನ ಸೆರೆ

By Srinath
|

ಮುಂಬೈ, ಮಾ.14: ಮಂತ್ರ-ತಂತ್ರ ಮಾಡುವುದಾಗಿ ನಂಬಿಸಿ, ಮಹಿಳೆಯೊಬ್ಬರನ್ನು ವಶೀಕರಣ ಮಾಡಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ ಮಾಂತ್ರಿಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬುಧವಾರ ಸಂಜೆ ಮಲಾಡ್ (ಪಶ್ಚಿಮ)ದಲ್ಲಿ ಈ ಘಟನೆ ನಡೆದಿದೆ. ಮಲಾಡ್ ನಲ್ಲಿ ಸದರಿ ಮಹಿಳೆಯ ಮನೆಯಲ್ಲಿ ಆಕೆಯ ಮೇಲೆ ಬಲಾತ್ಕಾರ ಮಾಡಲು ಹವಣಿಸುತ್ತಿದ್ದಾಗಲೇ ಬಂಧನಕ್ಕೀಡಾಗಿದ್ದಾನೆ.

ಸಂಭೋಗಿಸುವ ಉದ್ದೇಶದಿಂದ ಮಾಟ, ಮಂತ್ರ ಮಾಡಿ ಮಹಿಳೆಯರನ್ನು ವಂಚಿಸುತ್ತಿದ್ದ ಸ್ವಯಂಘೋಷಿತ ಮಧ್ಯವಯಸ್ಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ವಿರಾರ್ ನಿವಾಸಿ, 35 ವರ್ಷದ ಜಗದೀಶ್ ಭಟ್ ಬಂಧಿತ ಆರೋಪಿ.

ಘಟನೆ ನಡೆದಾಗ ಬಾಧಿತ ಮಹಿಳೆ 37 ವರ್ಷದ ಸ್ಮಿತಾ (ಹೆಸರು ಬದಲಿಸಲಾಗಿದೆ) ಒಬ್ಬರೇ ಮನೆಯಲ್ಲಿದ್ದರು. ಆರೋಪಿ ಜಗದೀಶ, ಮಹಿಳೆಯ ಮನೆಗೆ ತೆರಳಿ ಕಾಲಿಂಗ್ ಬೆಲ್ ಒತ್ತಿದ್ದಾನೆ. ಆಕೆ ಬಾಗಿಲು ತೆರೆಯುತ್ತಿದ್ದಂತೆ ಮಂತ್ರಗಳನ್ನು ಪಠಿಸತೊಡಗಿದ ಜಗದೀಶ, ನಿಮಗೆ ಯಾವುದೇ ಸಮಸ್ಯೆ ಬಾಧಿಸುತ್ತಿದ್ದರೂ ಕೇವಲ ಎರಡೇ ಕ್ಷಣಗಳಲ್ಲಿ ಅದನ್ನು ಪರಿಹರಿಸುವುದಾಗಿ ಹೇಳಿದ್ದಾರೆ.

ಆ ವೇಳೆ, ತಾನು ಭವಿಷ್ಯ ನುಡಿಯುವುದಾಗಿಯೂ ಸ್ಮಿತಾರ ಕೈಹಿಡಿದಿದ್ದಾನೆ. ಆಗ ಮನೆಯಲ್ಲಿ ಬೇರೆ ಯಾರೂ ಇಲ್ಲ ಎಂಬುದು ಜಗದೀಶನ ಗಮನಕ್ಕೆ ಬರುತ್ತಿದ್ದಂತೆ ಆಕೆಯ ಮೇಲೆ ವಶೀಕರಣ ಮಾಡಿದ್ದಾನೆ. ತದನಂತರ ತನ್ನ ಆಟ ಶುರುವಿಟ್ಟುಕೊಂಡಿದ್ದಾನೆ. ಆಕೆಯ ಮಾನಭಂಗಕ್ಕೆ ಮುಂದಾಗಿದ್ದಾನೆ.

ಆದರೆ ಸ್ಮಿತಾರ ಅದೃಷ್ಟ ಚೆನ್ನಾಗಿದ್ದು, ಸ್ಮಿತಾರನ್ನು ಭೇಟಿ ಮಾಡಲು ನೆರೆಮನೆಯವರು ಬಂದಿದ್ದಾರೆ. ಆದರೆ ಈ ಆಸಾಮಿ ಜಗದೀಶ ಅರೆ ನಗ್ನಾವಸ್ಥೆಯಲ್ಲಿದ್ದುದ್ದನ್ನು ಕಂಡು ಸಂಶಯಗೊಂಡಿದ್ದಾರೆ. ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಪೊಲೀಸರು ಬಂದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

'ತನಗೆ ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಅವನು ವಶೀಕರಣ ಮಾಡಿದ್ದ. ಆದ್ದರಿಂದ ಏನಾಗುತ್ತಿದೆ ಎಂಬುದು ಗೊತ್ತಾಗಲೇ ಇಲ್ಲ' ಎಂದು ಸ್ಮಿತಾ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Malad Tantrik caught for molesting hypnotising woman. The Malad police arrested a self-proclaimed tantrik baba Jagdish Bhatt (35), lives in Virar, who performed black magic and hypnotised 37 year old Smita (name changed) with the intention of having sex with her. He was arrested on Mar 13th evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more