ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ವಿಮಾನ ಹಾರಿಸಲು ಸಿದ್ಧವಾದ ಕ್ಯಾ ಗೋಪಿನಾಥ್

By Srinath
|
Google Oneindia Kannada News

Bangalore Capt Gopinath
ಬೆಂಗಳೂರು, ಮಾ.13‌: ಈ ಹಿಂದೆ ಅತ್ಯಂತ ಅಗ್ಗದ ವಿಮಾನ ಪ್ರಯಾಣ ಭಾಗ್ಯ ಕಲ್ಪಿಸಿದ್ದ ಕ್ಯಾಪ್ಟನ್ ಗೋಪಿನಾಥ್ ಅವರು ಮತ್ತೆ ಅಂತಹುದೇ ಸಾಹಸಕ್ಕೆ ಕೈ ಹಾಕಿದ್ದಾರೆ.

2007ರಲ್ಲಿ ತಮ್ಮ Air Deccan ಕೂಸನ್ನು ಅನಿವಾರ್ಯ ಕಾರಣಗಳಿಂದಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಕೊಟ್ಟು ಕೈತೊಳೆದುಕೊಂಡಿದ್ದ ಕ್ಯಾಪ್ಟನ್ ಗೋಪಿ, ಈ ಬಾರಿ ಮತ್ತೆ ಭಾರತದ ಆಗಸದ ಮೇಲೆ ಸ್ವಚ್ಚಂದವಾಗಿ ತಮ್ಮ ವಿಮಾನಗಳನ್ನು ಹಾರಿಸಲು ಸಿದ್ಧವಾಗಿದ್ದಾರೆ.

'ದೇಶೀಯ ವಿಮಾನಗಳನ್ನು ಹಾರಿಸಲು ವಿಮಾನ ಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ DGCA ಸಹ ಹಸಿರು ನಿಶಾನೆ ತೋರಬೇಕಾಗಿದೆ. ಅಲ್ಲಿಂದ ಓಕೆ ಸಿಗುತ್ತಿದ್ದಂತೆ ಯಾವುದೇ ಕ್ಷಣ ನಮ್ಮ ಕಡಿಮೆ ಬಜೆಟಿನ ವಿಮಾನಗಳು ದೇಶದ ಜನತೆಯ ಸೇವೆಗೆ ಲಭ್ಯವಾಗಲಿವೆ' ಎಂದು ಕ್ಯಾಪ್ಟನ್ ಗೋಪಿ ತಿಳಿಸಿದ್ದಾರೆ.

'ದೇಶೀಯ ವಿಮಾನಯಾನದಲ್ಲಿ ವಿದೇಶೀ ಕಂಪನಿಗಳೂ ಶೇ. 49ರಷ್ಟು ಹೂಡಿಕೆ ಮಾಡಬಹುದು ಎಂಬ ಹೊಸ ನೀತಿಯನ್ನು ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದಾಗ ನನ್ನಲ್ಲಿ ಮತ್ತೆ ಹೊಸ ಆಸೆ ಚಿಗುರಿತು. ಮತ್ತೆ ನನ್ನ 'ಹುಚ್ಚು ಕುದುರೆಗೆ' ಹುರುಳಿ ಹಾಕಿದೆ. ಅದೀಗ ಕೆನೆಯುತ್ತಿದ್ದು, ಯಾವುದೇ ಕ್ಷಣ ಆಗಸದತ್ತ ನೆಗೆಯಬಹುದಾಗಿದೆ' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಅಂದರೆ ಈ ಬಾರಿ ವಿದೇಶೀ ವಿಮಾನಯಾನ ಸಂಸ್ಥೆ ಸಹಯೋಗದಲ್ಲಿ ಕ್ಯಾಪ್ಟನ್ ಗೋಪಿ ವಿಮಾನಗಳು ಭಾರತದಲ್ಲಿ ಹಾರಲಿವೆ. ಆದರೆ ತಮ್ಮ ಯೋಜನೆಗಳ ಬಗ್ಗೆ ಈ ಹಂತದಲ್ಲಿ ನಿಖರ ಮಾಹಿತಿ ನೀಡಲು ನಿರಾಕರಿಸಿದ ಕ್ಯಾಪ್ಟನ್ ಗೋಪಿ ಸದ್ಯದಲ್ಲೇ ಎಲ್ಲ ಮಾಹಿತಿ ಒದಗಿಸುವುದಾಗಿ ಹೇಳಿದ್ದಾರೆ.

ಜತೆಗೆ ಈ ಹಿಂದೆ 2007ರಲ್ಲಿ ವಿಜಯ್ ಮಲ್ಯಗೆ Air Deccan ಅನ್ನು ಮಾರಿದಾಗ ವ್ಯಾಪಾರ ನೀತಿಯಂತೆ 5 ವರ್ಷ ಕಾಲ ತಾವು ಮತ್ತೆ ವಿಮಾನ ಹಾರಾಟಕ್ಕೆ ಮುಂದಾಗುವುದಿಲ್ಲ ಎಂಬ ಒಡಂಬಡಿಕೆಗೆ ಒಪ್ಪಿದ್ದರು. ಅದು ಇದೇ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.

ಆದರೆ ವಿಮಾನ ಯಾನ ಉದ್ಯಮ ಸಂಕಷ್ಟದಲ್ಲಿದೆ. ಇದರಿಂದ ಆಗಸದಲ್ಲಿ ಕಾರ್ಮೋಡಗಳು ಮೂಡಿವೆ. Air Deccanನಲ್ಲಿ ಕೈಸುಟ್ಟುಕೊಂಡಿದ್ದ ಕ್ಯಾಪ್ಟನ್ ಗೋಪಿ ಈ ಬಾರಿ ಯಶಸ್ವಿಯಾಗುವರೇ? ವಿದೇಶಿ ಕಂಪನಿ ಅವರ ಕನಸಿಗೆ ನೀರೆರೆಯುವುದೇ, ಕಾಲವೇ ಉತ್ತರಿಸಬೇಕು. (ಕೃಪೆ: ಬೆಂಗಳೂರು ಮಿರರ್)

English summary
Bangalore Capt Gopinath second Air Deccan flight set to take off shortly. After merging Air Deccan, country’s first low-cost airline, with Kingfisher Airlines in 2008, Capt Gopinath is set to get pan-India wings again. All he is awaiting is okay from DGCA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X