ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕ್ಸರ್ ವಿಜೇಂದರ್ ಗೆ 6-10 ವರ್ಷ ಜೈಲು ಭೀತಿ

By Mahesh
|
Google Oneindia Kannada News

Vijender and Ram Singh
ಮೊಹಾಲಿ, ಮಾ.12: ಒಲಿಂಪಿಕ್ ಕಂಚು ಪದಕ ವಿಜೇತ ವಿಜೇಂದರ್ ವಿರುದ್ಧ ಬಲವಾದ ಸಾಕ್ಷ್ಮ ಸಿಕ್ಕಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ಹೇಳಿದ್ದಾರೆ. ಆದರೆ, ಡ್ರಗ್ಸ್ ಜಾಲದ ಕಿಂಗ್ ಪಿನ್ ಕೊಹ್ಲರ್ ಜೊತೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದಿಲ್ಲ ವಿಜೆಂದರ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಆದರೆ, ಪರಿಸ್ಥಿತಿ ಗಮನಿಸಿದರೆ ವಿಜೇಂದರ್ ಗೆ 6 ರಿಂದ 10 ವರ್ಷ ಜೈಲು ಶಿಕ್ಷೆ ವಿಜೇಂದರ್ ಗೆ ಕಾದಿದೆ ಎನ್ನಬಹುದು.

ನಾನೇನು ತಪ್ಪು ಮಾಡಿಲ್ಲ ನಾನು ಉದ್ದೀಪನ ಪರೀಕ್ಷೆಗೆ ಒಳಗಾಗುವುದಿಲ್ಲ. ಕೂದಲು ಹಾಗೂ ರಕ್ತ ಸ್ಯಾಂಪಲ್ ನೀಡಲಾರೆ ಎಂದು ಹಠ ಹಿಡಿದಿದ್ದ ವಿಜೇಂದರ್ ಈಗ ತಣ್ಣಗಾಗಿದ್ದಾನೆ. ತನ್ನ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದಾನೆ ಎಂದು ವರದಿಯಾಗಿದೆ.

ರಾಮ್ ಹೇಳಿಕೆ : ವಿಜೇಂದರ್ ಸಿಂಗ್ ಗೆಳೆಯ ಅಮಾನತುಗೊಂಡಿರುವ ಬಾಕ್ಸರ್ ರಾಮ್ ಸಿಂಗ್ ಹೇಳಿಕೆ ಈ ಪ್ರಕರಣದಲ್ಲಿ ಮಹತ್ವ ಪಡೆಯುವ ಸಾಧ್ಯತೆಯಿದೆ. ನಾನು ವಿಜೇಂದರ್ ಕುತೂಹಲಕ್ಕೆ ಹೆರಾಯಿನ್ ಸೇವಿಸಿದ್ದು ನಿಜ. ರೇವ್ ಪಾರ್ಟಿಗಳಲ್ಲಿ ಹೆರಾಯಿನ್ ಸೇವಿಸುವುದನ್ನು ನೋಡಿದ್ದೆವು. ಹೀಗಾಗಿ ಆಹಾರದ ಜೊತೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದೆವು ಎಂದು ರಾಮ್ ಸಿಂಗ್ ಹೇಳಿದ್ದರು.

ಹೇಳಿಕೆ ಪ್ರಕಾರ ಹಾಗೂ ಡೋಪ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ವಿಜೇಂದರ್ ಗೆ ಕನಿಷ್ಠ 6 ವರ್ಷ ಜೈಲುಶಿಕ್ಷೆ ಖಾಯಂ. ಆದರೆ, ವ್ಯಕ್ತಿ ಮಾದಕವ್ಯಸನಿ ಅಲ್ಲದಿದ್ದರೆ ತಪ್ಪು ತಿದ್ದುಗೊಳ್ಳಲು ಅವಕಾಶ ನೀಡುವ ಸಾಧ್ಯತೆಯೂ ಇರುತ್ತದೆ. ವಿಜೇಂದರ್ ಅವರು ಇನ್ನೊಂದು ದಿನ ಮುಂದೂಡಿದ್ದಾರೆ ಪೊಲೀಸರಿಗೆ ತನಿಖೆ ಕಷ್ಟವಾಗುತ್ತಿತ್ತು.

ಡ್ರಗ್ಸ್ ಸೇವಿಸಿದ 48 ಗಂಟೆಯೊಳಗೆ ಆರೋಪಿಯನ್ನು ರಕ್ತಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ತುಂಬಾ ಹಿಂದೆ ಡ್ರಗ್ಸ್ ಸೇವಿಸಿದ್ದರೆ ಕಂಡು ಹಿಡಿಯುವುದು ಕಷ್ಟವಾಗಲಿದೆ.

ಕಾನೂನು ಪ್ರಕಾರ ವಿಜೇಂದರ್ ಸಿಂಗ್ 2 ಗ್ರಾಂ ಮಾತ್ರ ಸೇವಿಸಿದ್ದರೆ ಬಚಾವ್. ಆದರೆ, ಡ್ರಗ್ಸ್ ಕಳ್ಳ ಸಾಗಾಣಿಕೆ, ಉದ್ದೇಶಪೂರ್ವಕವಾಗಿ ತಮ್ಮ ಕಾರು ನೀಡಿದ್ದರು ಎಂಬುದು ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಗ್ಯಾರಂಟಿ. ಬೇರೆಯವರಿಗೆ ಮಾದಕ ದ್ರವ್ಯಗಳನ್ನು ಶೇಖರಿಸಿಡಲು ಸ್ಥಳ, ವಾಹನ ನೀಡಿದ್ದರೆ 20 ವರ್ಷ ಜೈಲುಶಿಕ್ಷೆ, 2 ಲಕ್ಷ ರು ವರೆಗೆ ದಂಡ ವಿಧಿಸಲು ಅವಕಾಶವಿದೆ.

ಮಾ.8ರಂದು ಜಿರಾಕ್ ಪುರ್ ದ ಫ್ಲಾಟ್ ವೊಂದರ ಮೇಲೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಸುಮಾರು 130 ಕೋಟಿ ಮೌಲ್ಯದ ಹೆರಾಯಿನ್ ಸಿಕ್ಕಿತ್ತು. ಅದೇ ಫ್ಲಾಟಿನಲ್ಲಿದ್ದ ಕಾರೊಂದರಲ್ಲಿ 10 ಕೆಜಿ ತೂಗುವ ಹೆರಾಯಿನ್ ಪತ್ತೆಯಾಗಿದ್ದು, ಆ ಕಾರು ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅವ ಪತ್ನಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು.

English summary
The Punjab Police on Tuesday said they have strong proof against Olympic bronze-winner pugilist Vijender Singh. Vijender was grilled for three-and-half hours in connection with the recent drugs haul case. reportedly agreed to take dope test
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X