ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ದಿನ ಅಕ್ಕಿ ಕದ್ದ ಶಿಕ್ಷಕಿಗೆ ಕಪಾಳಮೋಕ್ಷ!

By Prasad
|
Google Oneindia Kannada News

Lady teacher thrashed for stealing rice
ದೊಡ್ಡಬಳ್ಳಾಪುರ, ಮಾ. 8 : ಮಕ್ಕಳ ಮಧ್ಯಾಹ್ನದ ಊಟಕ್ಕೆಂದು ತರಿಸಲಾಗಿದ್ದ ಅಕ್ಕಿ, ಬೇಳೆಕಾಳುಗಳನ್ನು ಕದ್ದು ಮನೆಗೆ ಸಾಗಿಸುತ್ತಿದ್ದ ಮಹಿಳಾ ಶಿಕ್ಷಕಿಯನ್ನು ಪೋಷಕರು ಮತ್ತು ಸಾರ್ವಜನಿಕರು ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿರುವ ಗಿರಿಜಮ್ಮಳನ್ನು, ಆಕೆ ಮಾಡಿದ ಹೀನ ಕಾರ್ಯಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರೇ ಕಪಾಳಮೋಕ್ಷ ಮಾಡಿದ್ದಾರೆ.

2009ರಿಂದ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗಿರಿಜಮ್ಮನ ಹಿಂದಿನ ರೆಕಾರ್ಡ್ ಕೂಡ ಸರಿಯಾಗಿಲ್ಲ. ಬೇರೊಂದು ಗ್ರಾಮದಲ್ಲಿ ಕೂಡ ಇಂಥದೇ ಕಾರ್ಯ ಮಾಡಿ ಸಿಕ್ಕಿಬಿದ್ದು ಅಮಾನತಾಗಿದ್ದರು. ಅಲ್ಲಿಂದ ವರ್ಗವಾಗಿ ಈ ಶಾಲೆಗೆ ಬಂದರೂ ಕಳ್ಳತನ ಮಾಡುವ ಕೆಲಸವನ್ನು ಬಿಟ್ಟಿರಲಿಲ್ಲ.

20 ಕೆಜಿ ಅಕ್ಕಿ ಮತ್ತು 10 ಕೆಜಿ ಬೇಳೆಯ ಚೀಲವನ್ನು ತಮಗಾಗಿ ಮೀಸಲಾಗಿಟ್ಟಿದ್ದ ಬೀರುವಿನಲ್ಲಿ ಇಟ್ಟುಕೊಂಡಿದ್ದರು. ಇದು ಇತರ ಶಿಕ್ಷಕಿಯರ ಗಮನಕ್ಕೆ ಬಂದು ತಕರಾರು ಎತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಇದನ್ನು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಶಾಲೆಗೆ ನುಗ್ಗಿದ್ದೆ ಪೋಷಕರು ಮತ್ತು ಸಾರ್ವಜನಿಕರು ಸೇರಿ ಗಿರಿಜಮ್ಮನ ಗ್ರಹಚಾರ ಬಿಡಿಸಿದ್ದಾರೆ.

ಸರಕಾರದಿಂದ ಕಾಳುಕಡಿಗಳನ್ನು ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆಂದು ತರಿಸಲಾಗುತ್ತಿದ್ದರೂ ಮಕ್ಕಳಿಗೆ ಊಟವನ್ನು ನೀಡುತ್ತಿರಲಿಲ್ಲ. ಇದು ಪೋಷಕರ ಗಮನಕ್ಕೆ ಬಂದು, ಅವರು ಆಕ್ಷೇಪಿಸಿದ್ದರೂ ಗಿರಿಜಮ್ಮ ತನ್ನ ಹಳೆ ಚಾಳಿಯನ್ನು ಬಿಟ್ಟಿರಲಿಲ್ಲ. ಗುರುವಾರ ಸಂಜೆ ಅಕ್ಕಿ ಮತ್ತು ಬೇಳೆಯನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ತಾನು ಕದ್ದಿಲ್ಲ ಎಂದು ಗಿರಿಜಮ್ಮ ಎಷ್ಟು ಹೇಳಿದರೂ ಕೇಳದೆ ಮಹಿಳೆಯರೇ ಶಿಕ್ಷಕಿಯನ್ನು ದರದರನೆ ಎಳೆದುಕೊಂಡು ಹೋಗಿ ಕಪಾಳಕ್ಕೆ ಬಾರಿಸಿದ್ದಾರೆ. ನಂತರ ತನ್ನ ತಪ್ಪನ್ನು ಶಿಕ್ಷಕಿ ಒಪ್ಪಿಕೊಂಡಿದ್ದು, ತನ್ನ ಜೊತೆ ಇನ್ನೂ ಕೆಲವರು ಮೀಸಲಾಗಿದ್ದಾರೆ ಎಂದು ದೂರಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಗೆ ಗಿರಿಜಮ್ಮನ ವಿರುದ್ಧ ದೂರನ್ನು ನೀಡಲಾಗಿದೆ.

English summary
A lady teacher has been thrashed, slapped, on International women's Day, by public and parents for stealing rice and dal kept for mid-day meals for children. The incident happened in Neraleghatta govt school in Doddaballapur taluk in Bangalore Rural district on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X