ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆಪಿಗೆ ರಾಮಸೇನೆ ಬೆಂಬಲವೇ? ರಾಮ ರಾಮ!

By Mahesh
|
Google Oneindia Kannada News

ಬೆಂಗಳೂರು, ಮಾ.6: ಪಬ್ ದಾಳಿ ಪ್ರಕರಣಗಳಿಂದ ಸಕತ್ ಜನಪ್ರಿಯತೆ ಗಳಿಸಿರುವ ಶ್ರೀರಾಮಸೇನೆ ಈಗ ಪರೋಕ್ಷವಾಗಿ ರಾಜಕೀಯ ವಲಯಕ್ಕೆ ಜಾರುತ್ತಿದೆಯೇ? ರಾಮಸೇನೆಯ ಜಾಡು ಹಿಡಿದು ಹೊರಟ ಆಂಗ್ಲ ಪತ್ರಿಕೆಯೊಂದು ಕೆಜೆಪಿ ಜೊತೆ ಶ್ರೀರಾಮಸೇನೆ ಮೈತ್ರಿಯಾಗಿರುವುದನ್ನು ಕಂಡಿದ್ದಾರೆ. ಈ ಬಗ್ಗೆ ಎರಡೂ ಕಡೆಯಿಂದ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ. ನಮ್ಮ ಪ್ರತಿನಿಧಿ ಪದೇ ಪದೇ ಫೋನ್ ಮಾಡಿ ಸುಸ್ತಾಗಿದ್ದಾರೆ. ಸದ್ಯಕ್ಕಂತೂ ಕೆಜೆಪಿಯಲ್ಲಿ ರಾಮನ ಬಂಟರ ಬಾವುಟ ಗಾಳಿಸುದ್ದಿ ಹಬ್ಬುತ್ತಿದೆ.

ಮಂಗಳೂರಿನ ಅಮ್ನೇಷಿಯಾ ಪಬ್ ಮೇಲೆ ದಾಳಿ ಮಾಡಿದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀರಾಮ ಸೇನೆ ಬಾವುಟ ಹಾರಾಟ ತೊಡಗಿತ್ತು. ಜೊತೆಗೆ ದುಡ್ಡು ತೆಗೆದುಕೊಂಡು ಗಲಾಟೆ ಮಾಡಿಸುತ್ತಾರೆ ಎಂದು ಆರೋಪವನ್ನು ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮೇಲೆ ತೆಹೆಲ್ಕಾ ಆರೋಪ ಹೊರೆಸಿತ್ತು. ಸದ್ಯಕ್ಕೆ ಎಲ್ಲದರಿಂದಲೂ ಮುಕ್ತಿ ಹೊಂದಿರುವ ಮುತಾಲಿಕ್ ಸಾಹೇಬ್ರಿಗೆ ರಾಜಕಾರಣಿಗಳ ಟೋಪಿ ಮೇಲೆ ಕಣ್ಣು ಬಿದ್ದಿದೆಯಂತೆ.

IS Ram Sena supporting KJP, Urban and Local body election 2013

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಅಂಬೆಗಾಲಿಟ್ಟಿರುವ ಕರ್ನಾಟಕ ಜನತಾ ಪಕ್ಷದ ಪರವಾಗಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರಚಾರ ನಡೆಸುತ್ತಿರುವುದು ಕಂಡು ಬಂದಿದೆ. ಸ್ಥಳೀಯ ನಗರಸಭೆ ಚುನಾವಣೆಗಳಲ್ಲಿ ರಾಮಸೇನೆ ಮಂದಿ ಕೆಜೆಪಿ ತೆಂಗಿನ ಕಾಯಿ ಚಿಪ್ಪು ಹಿಡಿದುಕೊಂಡು ತಿರುಗಿದ್ದಾರಂತೆ.

ಶ್ರೀರಾಮಸೇನೆ ಹೇಳಿ ಕೇಳಿ ಧರ್ಮ ಆಧಾರಿತ ಸಂಘಟನೆ, ಕೆಜೆಪಿ ಕೂಡಾ ಹೆಚ್ಚು ಕಮ್ಮಿ ಒಂದೆರಡು ಜಾತಿ ಮತ ಪಂಥಕ್ಕೆ ಸೀಮಿತವಾದ ಪ್ರಾದೇಶಿಕ ಪಕ್ಷ ಹೀಗಾಗಿ ಕೂಡಿಕೆ ಸಾಧ್ಯವಾಗಿದೆ ಎಂಬ ಸುದ್ದಿಯಿದೆ.

ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಾರವಾರ, ಶಿರಸಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಜೆಪಿ ಪರ ರಾಮಸೇನೆ ಪ್ರಚಾರ ನಡೆಸಿದೆ. ಈ ಎಲ್ಲಾ ಜಿಲ್ಲೆಗಳು ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಗಳು ಎಂಬುದನ್ನು ಒತ್ತಿ ಹೇಳಬೇಕಿಲ್ಲ. ಪಬ್ ಪ್ರಕರಣ, ಲವ್ ಜಿಹಾದಿ, ವಾಲೇಂಟೈನ್ಸ್ ಡೇ ಮುಂತಾದ ಅನೇಕಾನೇಕ ಪ್ರಕರಣಗಳಲ್ಲಿ ಶ್ರೀರಾಮಸೇನೆ ತೆಗೆದುಕೊಂಡ ನಿರ್ಧಾರಗಳಿಗೆ, ಕ್ರಮಗಳಿಗೆ ಬಿಜೆಪಿ ಸರ್ಕಾರ ಸೊಪ್ಪು ಹಾಕದಿರುವುದೇ ಕೆಜೆಪಿ ಕಡೆಗೆ ವಾಲುವುದಕ್ಕೆ ಕಾರಣ ಎಂದೂ ಸಹ ಹೇಳಲಾಗಿದೆ.

ಜಾತಿ ಆಧಾರಿತ ರಾಜಕೀಯ ಎಲ್ಲೆಡೆ ಇದ್ದರೂ ಬಿಎಸ್ ಯಡಿಯೂರಪ್ಪ ಅವರು ಜನ ನಾಯಕರಾಗಿದ್ದು, ಸರ್ವ ಜನಾಂಗಕ್ಕೂ ಸಲ್ಲುವ ವ್ಯಕ್ತಿ ಎಂದು ರಾಮಸೇನೆ ಕಾರ್ಯಕರ್ತರು ಹೇಳಿದ್ದಾರೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸುವ ಬಗ್ಗೆ ಈಗಲೇ ಏನು ಹೇಳಲು ಬರುವುದಿಲ್ಲ ಎಂದು ರಾಮಸೇನೆ ಕಾರ್ಯಕರ್ತ ಕುಮಾರ್ ಮಾಲೇಮಾರ್ ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಪಕ್ಷದ ಸಿದ್ಧಾಂತ, ಗುರಿಗೆ ಅನುಗುಣವಾಗಿ ಬೆಂಬಲ ನೀಡಬಲ್ಲ ಎಲ್ಲಾ ಸಂಘಟನೆಗಳನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ನಾವು ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದು ಕೆಜೆಪಿ ಮುಖಂಡ ರಾಮಚಂದ್ರ ಬೈಕಂಪಾಡಿ ಹೇಳಿದ್ದಾರೆ. ರಾಮಸೇನೆ ಬೆಂಬಲಕ್ಕೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಬೇರೆ ಪಕ್ಷಕ್ಕಿಂತ ವಿಭಿನ್ನ ಎನ್ನುತ್ತಿದ್ದ ಕೆಜೆಪಿ ಕೂಡಾ ಬಿಜೆಪಿಯಂತೆ ಹಿಂದುತ್ವದ ಅಲೆಯಲ್ಲಿ ತೇಲಲು ಹೊರಟಿರುವುದು ಕಣ್ಣಿಗೆ ರಾಚುತ್ತಿದೆ.

English summary
The Sri Rama Sene of the pub attack fame is now campaigning for BS Yeddyurappa’s Karnataka Janata Party in many parts of the state where the elections for the Urban Local Bodies (ULB) Sri Rama Sene likely to be official flag carriers and campaigners in assembly polls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X