• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್: ಅತ್ಯಂತ ಅರ್ಹ Bachelorಗೆ ಮದ್ವೆ ಬೇಡವೇ?

By Srinath
|

ಹೊಸದಿಲ್ಲಿ, ಮೇ 6: ರಾಹುಲ್ ಬಾಬಾ ಮದುವೆಯಾಗುವುದಿಲ್ಲವಂತೆ ಡುಂ ಡುಂ! ಮದ್ವೆಯಾದ್ರೆ ಡುಂಡುಂ ಅಂತಾರೆ ಸರಿ. ಆದ್ರೆ ಇಲ್ಲಿ ಮದುವೆಯಾಗುವುದಿಲ್ಲ ಅಂದ್ರೂ ಡುಂಡುಂ ಬಾರಿಸ್ತಿದ್ದೀರಿ. ನಿಮಗ್ಯಾರೂ ಬಾರಿಸುವವರು ಇಲ್ವಾ ಅಂತ ಕೇಳ ಬೇಡಿ. ವಿಷಯ ಜಾಸ್ತೀನೇ ಇದೆ.

ಅದಕ್ಕೂ ಮುನ್ನ, ಭಾವಿ ಪ್ರಧಾನಿ ಅಭ್ಯರ್ಥಿಯಾಗಿ ಹೆಚ್ಚಾಗಿ ಚಲಾವಣೆಯಲ್ಲಿರುವ ನರೇಂದ್ರ ಮೋದಿ ಜತೆ ಸ್ಪರ್ಧೆಗಿಳಿದಿರುವ ರಾಹುಲ್ ಗಾಂಧಿ ಕನಿಷ್ಠ ಮದುವೆ ವಿಚಾರದಲ್ಲಾದರೂ ಮೋದಿಯನ್ನು ಹಿಂಬಾಲಿಸೋಣ ಅಂದುಕೊಂಡಿರಬೇಕು. ಅದಕ್ಕೇ ಮದ್ವೆ ಬೇಡ ಎನ್ನುತ್ತಿದ್ದಾರೆ ಎಂಬುದು ಕುಹಕವಷ್ಟೇ!

ಇನ್ನು, ವೆನಿಜುಲಾದ ಪ್ರಿಯತಮೆ Veronicaಳ ಕಥೆಯೇನು? ಭಾರತಕ್ಕೆ ಮತ್ತೊಂದು 'ವಿದೇಶಿ ಸೊಸೆ' ಕೊಡುಗೆ ಕೊಡುವುದಿಲ್ಲವೇ?

ಪ್ರಧಾನಿಯಾಗುತ್ತಿದ್ದಂತೆ ಮದುವೆ:

ಪ್ರಧಾನಿಯಾಗುತ್ತಿದ್ದಂತೆ ಮದುವೆ:

2014ರ ವೇಳೆಗೆ ಹೇಗೂ ಚುನಾವಣೆ ನಡೆಯುತ್ತದೆ. ಆಗ ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ನಾನೇ ಪ್ರಧಾನಿಯಾಗುತ್ತೇನೆ. ಆಮೇಲಷ್ಟೇ ಮದುವೆ. ಹೇಗೂ ಈ ಹಿಂದೆ ಜ್ಯೋತಿಷಿಯೊಬ್ಬರು ಹೇಳಿದ್ದಂತೆ 2014ರ ವೇಳೆಗೆ ತನ್ನ ಗ್ರಹಗತಿಗಳು ಮದುವೆಗೆ ಪೂರಕವಾಗಲಿವೆ ಎಂದು ಮದುವೆ ಕನಸು ಕಾಣುತ್ತಿದ್ದಾರಾ? ರಾಹುಲ್ ಜೀ.

ಯಾಕ್ ಬೇಕು ಮದ್ವೆ ರಗಳೆ!:

ಯಾಕ್ ಬೇಕು ಮದ್ವೆ ರಗಳೆ!:

ಮದುವೆ ಬಗ್ಗೆ ರಾಹುಲ್ ಏನು ಹೇಳಿದ್ದಾರೋ ಸ್ವಲ್ಪ ಕೇಳೋಣ... 'ಸದ್ಯಕ್ಕೆ ಮದುವೆ ಯೋಚನೆಯಿಲ್ಲ. ಮದುವೆಯಾದರೆ ಮಕ್ಕಳು ಹುಟ್ಟುತ್ತವೆ. ಮಕ್ಕಳಾದರೆ ಸಂಸಾರದಲ್ಲಿ ಬಂಧಿಯಾಗಬೇಕಾಗುತ್ತದೆ. ಮಾತ್ರವಲ್ಲ, (ಮೊದಲೇ ತಮ್ಮ ಪಕ್ಷಕ್ಕೆ ಅಂಟಿಕೊಂಡಿರುವ) ವಂಶಪಾರಂಪರ್ಯ ರಾಜಕಾರಣ ಮುಂದುವರಿಸಬೇಕಾಗುತ್ತದೆ' ಎನ್ನುವುದು ರಾಹುಲ್ ಅವರನ್ನು ಕಾಡುತ್ತಿರುವ ಭಯ.

ಮದುವೆ ಬಗ್ಗೆ ಏಕೆ ವೈರಾಗ್ಯ

ಮದುವೆ ಬಗ್ಗೆ ಏಕೆ ವೈರಾಗ್ಯ

ಇದೇ ವೇಳೆ ಪ್ರಧಾನಿ ಹುದ್ದೆ ಬೇಡ ಎಂದು ರಾಹುಲ್‌ ಹೇಳಿದ್ದಾರೆ. ಪ್ರಧಾನಿ ಹುದ್ದೆ ಬಗೆಗಿನ ವೈರಾಗ್ಯದ ಮಾತನ್ನು ಒಪ್ಪಿಕೊಳ್ಳೋಣ. ಆದರೆ 42ರ ಪ್ರಾಯದ ರಾಹುಲ್‌ ಗಾಂಧಿಗೆ ಮದುವೆ ಬಗ್ಗೆ ಏಕೆ ವೈರಾಗ್ಯ. ಇದೇ ವೇಳೆ 'ಭಗವದ್ಗೀತೆಯ ನಿಷ್ಕಾಮ ಕರ್ಮದಲ್ಲಿ ನಂಬಿಕೆಯಿಟ್ಟಿದ್ದ ಮಹಾತ್ಮಾ ಗಾಂಧೀಜಿ ನನ್ನ ಆದರ್ಶ' ಎಂದು ರಾಹುಲ್‌ ಹೇಳಿರುವುದೂ ಇಂಟರೆಸ್ಟಿಂಗ್ ಆಗಿದೆ.

ಗಾಂಧಿ ವಂಶಸ್ಥನಾಗಿ ಮದ್ವೆ ಬೇಡ:

ಗಾಂಧಿ ವಂಶಸ್ಥನಾಗಿ ಮದ್ವೆ ಬೇಡ:

ಗಾಂಧಿ ವಂಶಸ್ಥನಾಗಿ ಮದ್ವೆ ಬೇಡ ಅಂದ್ರೆ ಹೇಗೆ? ಹಾಗಾದರೆ ಬ್ರಿಟನ್ನಿನಲ್ಲಿರುವ ಸ್ಪೇನ್ ಗರ್ಲ್ ಫ್ರೆಂಡ್ (Veronica) ಕಥೆಯೇನು? ಅವರೊಂದಿಗೆ ಓಡಾಟ/ ಒಡನಾಟ ಏನಾಯಿತು? ಭಾರತದ ರಾಜಕೀಯ ಅಂಗಳದಲ್ಲಿ ಕಾಲಿಡುವುದಿಲ್ಲ ಎಂದು ಹೇಳಿ/ ಉನ್ನತ ಶಿಕ್ಷಣದ ಹೆಸರಿನಲ್ಲಿ ಲಂಡನ್ನಿನಲ್ಲಿ ಓದುತ್ತಿದ್ದಾಗ ನಡೆದ ಪ್ರೇಮ ಕಥೆ ಏನಾಯಿತು?

ಮೂರು ವರ್ಷಗಳ ಹಿಂದೆ ಅಮೇಠಿಯಲ್ಲಿ

ಮೂರು ವರ್ಷಗಳ ಹಿಂದೆ ಅಮೇಠಿಯಲ್ಲಿ

ಅಮೇಠಿಯಲ್ಲಿ ಅಮ್ಮನ ಪರವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿನ ಉದ್ಯಮಿಗಳ ಜತೆ ಮಾತನಾಡುತ್ತಾ, ಅಂಕಲ್ ನೋಡ್ತಿರಿ ಸದ್ಯದಲ್ಲೇ ನಿಮಗೆ ಸಿಹಿ ಸುದ್ದಿ ಕೊಡ್ತೀನಿ. ಲಾಡು ಊಟ ಹಾಕಿಸ್ತೀನಿ ಎಂದು ಹೇಳಿದ್ದು ಇದೇ ರಾಹುಲ್ ಗಾಂಧಿ ಅಲ್ಲವೇ? ಗಾಂಧಿ ಮನೆತನದ ವಂಶೋದ್ಧಾರಕನಾಗಿರುವಾಗ ರಾಹುಲ್ ಮದ್ವೆ ಬೇಡವೆನ್ನುತ್ತಿರುವುದು ಏಕೆ?

ಅತ್ಯಂತ ಅರ್ಹ bachelorಗೆ ಮದ್ವೆ ಬೇಡವೇ?

ಅತ್ಯಂತ ಅರ್ಹ bachelorಗೆ ಮದ್ವೆ ಬೇಡವೇ?

ಬಿಡಿ ಕಾಂಗ್ರೆಸ್ ಮಂದಿಯನ್ನು ಕೇಳಿದರೆ ರಾಹುಲ್ ಜೀ bachelor of India ಅಂದುಬಿಡುತ್ತಾರೆ. ಅದೂ ಸರಿಯೇ, ರಾಹುಲ್ ಗಾಂಧಿ most eligible bachelor. ಇನ್ನು, ಚಾಣಕ್ಯ ನೂರಾರು ವರ್ಷಗಳ ಹಿಂದೆಯೇ ಹೇಳಿದಂತೆ ರಾಜನ ಮದುವೆಯನ್ನು ನಿರ್ಧರಿಸುವುದು ರಾಜನೀತಿ; ಸ್ವತಃ ರಾಜ ಅಲ್ಲ. ಆದ್ದರಿಂದ ಚಾಣಕ್ಯ ನೀತಿಗೆ ಅನುಗುಣವಾಗಿ ರಾಜನೀತಿಯಲ್ಲಿ ಮುಳುಗಿ, ಸಂಸಾರದ ನೌಕೆ ಹತ್ತಲು ರಾಹುಲ್ ಹಿಂಜರಿದರೇ?

ನಿಮ್ಮ ಅನಿಸಿಕೆ ಏನು?

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No plans to marry declared most eligible bachelor of India Rahul Gandhi yesterday (Mar 5). He hinted that he has no immediate marriage plans, saying, “If I get married and have children, I will be status quoist and will like my children to take my place.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more