ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆಡಿಟ್ ಕಾರ್ಡ್ ಉಜ್ಜಿ ಟಾಟಾ ನ್ಯಾನೋ ಒಯ್ಯಿರಿ

By Mahesh
|
Google Oneindia Kannada News

Swipe credit card, own Tata Nano
ಬೆಂಗಳೂರು, ಮಾ.6: ಮಧ್ಯಮವರ್ಗದ ಡಾರ್ಲಿಂಗ್ ಎಂದೇ ರಸ್ತೆಗಿಳಿದಿದ್ದ 'ಟಾಟಾ ನ್ಯಾನೋ' ಆರಕ್ಕೇರದೆ ಮೂರಕ್ಕಿಳಿಯದೆ ಹಾಗೂ ಹೀಗೂ ಮಾರುಕಟ್ಟೆಯಲ್ಲಿ ಉಳಿದಿದೆ. ಈಗ ಟಾಟಾ ನ್ಯಾನೋ ಉದ್ಧಾರ ಮಾಡಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ದಾರರು ತಮ್ಮ ಕಾರ್ಡ್ ಉಜ್ಜಿ, ಟಾಟಾ ನ್ಯಾನೋ ಕಾರು ಅಂದೇ ಶೋ ರೂಮ್ ನಿಂದ ಮನೆಗೆ ಓಡಿಸಿಕೊಂಡು ಹೋಗಬಹುದು.

ಟಾಟಾ ಮೋಟರ್ಸ್ ಸಂಸ್ಥೆ ಈ ಹೊಸ ಯೋಜನೆ ಹೊರ ತರುತ್ತಿದ್ದಂತೆ ಕಂಪನಿ ಷೇರುಗಳು ಚೇತರಿಕೆ ಕಂಡಿದೆ. ಬಿಎಸ್ ಇನಲ್ಲಿ ಬುಧವಾರ (ಮಾ.6) ಮಾರುಕಟ್ಟೆ 309.25ರು ನಂತೆ 2.88ಶೇ ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 309.40ರು ನಂತೆ ಶೇ 2.96ರಷ್ಟು ಏರಿಕೆಯಾಗಿದೆ.

ಈ ಆಕರ್ಷಕ ಯೋಜನೆ ಪ್ರಕಾರ ಗ್ರಾಹಕರು ಟಾಟಾ ನ್ಯಾನೋ ಬೆಲೆಯ ಸಂಪೂರ್ಣ ಮೊತ್ತವನ್ನು ಪ್ರತಿ ತಿಂಗಳಿನಂತೆ ಪಾವತಿಸಬಹುದು. ಇದಕ್ಕೆ ಯಾವುದೇ ಬಡ್ಡಿದರ ವಿಧಿಸುತ್ತಿಲ್ಲ. ಅರ್ಥಾತ್ ನ್ಯಾನೋ ಈಗ EMIನಲ್ಲೂ ಲಭ್ಯವಿದೆ. 8,333 ರು ಪ್ರತಿ ಲಕ್ಷಕ್ಕೆ EMI ನಂತೆ 12 ತಿಂಗಳುಗಳ ಸ್ಕೀಮ್ ಇದೆ.

ಟಾಟಾ ಕಂಪನಿ ಐದು ಪ್ರಮುಖ ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಎಚ್ ಎಸ್ ಬಿಸಿ, ಐಸಿಐಸಿಐ, ಕೊಟಕ್ ಮಹೀಂದ್ರಾ ಹಾಗೂ ಸ್ಟಾಟರ್ಡ್ ಚಾರ್ಟ್ರೆಡ್ ಬ್ಯಾಂಕ್. ಈ ಬ್ಯಾಂಕಿನ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ನ್ಯಾನೋ ಖರೀದಿಸಬಹುದಾಗಿದೆ. ಈ ಹೊಸ ಯೋಜನೆ 26 ನಗರಗಳಲ್ಲಿ 75ಕ್ಕೂ ಅಧಿಕ ಟಾಟಾ ಮೋಟರ್ಸ್ ಡೀಲರ್ ಗಳಲ್ಲಿ ಲಭ್ಯವಿದೆ.

'ಇದು ಗ್ರಾಹಕಸ್ನೇಹಿ ಯೋಜನೆಯಾಗಿದೆ. ಕಾರು ಬುಕ್ ಮಾಡಿ ಹಲವು ದಿನ ಕಾಯುವ ತೊಂದರೆಗೆ ಬ್ರೇಕ್ ಹಾಕುವ ಹೊಸ ವಿಧಾನ ಇದಾಗಿದೆ' ಎಂದು ಟಾಟಾ ಮೋಟರ್ಸ್ ನ ಪ್ರಯಾಣಿಕ ವಾಹನ ಉದ್ಯಮ ಘಟಕದ ಅಧ್ಯಕ್ಷ ರಂಜಿತ್ ಯಾದವ್ ಅವರು ಹೇಳಿದ್ದಾರೆ.

ಈ ಪ್ರಾಯೋಗಿಕ ಯೋಜನೆಯಲ್ಲಿ ಟಾಟಾ ನ್ಯಾನೋ ಕಾರಿಗೆ ತಗುಲುವ ಸಂಪೂರ್ಣ ವೆಚ್ಚವನ್ನು 12 ತಿಂಗಳ EMIನಲ್ಲಿ ಭಾಗಿಸಲಾಗುವುದು ಅದು ಕೂಡಾ ಯಾವುದೇ ಬಡ್ಡಿದರವಿಲ್ಲದೆ, ಗ್ರಾಹಕರು ಸುಲಭವಾಗಿ ವ್ಯವಹಾರ ಮಾಡಬಹುದು.

English summary
Tata Nano today(Mar.6) launched an exciting offer that enables customers to buy Tata Nano by swiping their credit card and drive out in a Tata Nano, on the same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X