ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IT-BPO ಕಂಪನಿಗಳಿಗೆ 1 ಕೋಟಿ ಮಂದಿ ಬೇಕಾಗಿದ್ದಾರೆ

By Srinath
|
Google Oneindia Kannada News

bangalore-it-bpo-sector-will-need-10-mn-people-nasscam
ಬೆಂಗಳೂರು, ಮಾ.6: ಮಾಹಿತಿ ತಂತ್ರಜ್ಞಾನ ಮತ್ತು ವ್ಯಾಪಾರ ಹೊರಗುತ್ತಿಗೆ (ಐಟಿ/ಬಿಪಿಒ) ಕ್ಷೇತ್ರದಲ್ಲಿ ಉದ್ಯೋಗ ಬಯಸುತ್ತಿರುವವರಿಗಾಗಿ ಸಿಹಿ ಸುದ್ದಿ ಇದೆ. ಸದ್ಯಕ್ಕೆ 30 ಲಕ್ಷ ಮಂದಿ ಈ ಎರಡೂ ಕ್ಷೇತ್ರದಲ್ಲಿ ಉದ್ಯೋಗನಿರತರಾಗಿದ್ದು, ಇನ್ನು 7 ವರ್ಷಗಳಲ್ಲಿ 1 ಕೋಟಿ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ.

'ಬೆಂಗಳೂರಿನಲ್ಲಿ ಐಟಿ/ಬಿಪಿಒ ಕ್ಷೇತ್ರದಲ್ಲಿನ ಅವಕಾಶಗಳು 2020 ವಿಶನ್' ಕುರಿತಾದ ವರದಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಭರವಸೆ ವ್ಯಕ್ತವಾಗಿದೆ. ಉದ್ಯಮ ಒಕ್ಕೂಟ ನಾಸ್ಕಾಂ (National Association of Software and Services Companies) ಈ ಮಾಹಿತಿಯನ್ನು ಒದಗಿಸಿದೆ.

ಸರಿ ಬಿಡಿ, ಐಟಿ/ಬಿಪಿಒ ಅಂದರೆ ಟೆಕ್ಕಿಗಳು, ಎಂಬಿಎ ಪದವೀಧರರಿಗೆ ಮಾತ್ರ ಅವಕಾಶವಿರುತ್ತದೆ. ನಮಗೇನು ಬಂತು ಭಾಗ್ಯ ಎಂದು ನಿರಾಶರಾಗದಿರಿ ಕಾಮರ್ಸ್, ಆರ್ಟ್ಸ್, ಸೈನ್ಸ್, ಎಂಎಸ್ಸಿ ಮತ್ತು ಎಂಸಿಎ ಪದವೀಧರರೇ, ನಿಮಗೂ ಅವಕಾಶಗಳು ಲಭಿಸಲಿವೆ.

ಐಟಿ ಕ್ಷೇತ್ರದ ದಿಗ್ಗಜರಾದ ಮಾಜಿ ಇನ್ಫಿ ಎನ್ಆರ್ ನಾರಾಯಣ ಮೂರ್ತಿ ಟಿಸಿಎಸ್ ಮುಖ್ಯಸ್ಥ ಎನ್ ಚಂದ್ರಶೇಖರನ್ ಇದಕ್ಕೆ ದನಿಗೂಡಿಸಿದ್ದು, 7 ವರ್ಷದಲ್ಲಿ ಐಟಿ, ಬಿಪಿಒ ಕ್ಷೇತ್ರಗಳು 300 ಶತಕೋಟಿ ಡಾಲರ್ ಆದಾಯ ಗಳಿಸಲಿದೆ. ಪ್ರಸ್ತುತ 2012ರಲ್ಲಿ ಇವುಗಳ ಆದಾಯ 108 ಶತಕೋಟಿಯಷ್ಟಿದೆ. ಇದರರ್ಥ ಭಾರಿ ಪ್ರಮಾಣದಲ್ಲಿ ಉದ್ಯಾಗಾವಕಾಶಗಳು ಲಭ್ಯವಾಗಲಿವೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

English summary
Bangalore IT-BPO sector will need 10mn people. There's some great news for those looking for careers in the IT-BPO sectors. From about 3 million at present, the twin sectors will go on to employ 10 million in seven years, says industry body Nasscom. The companies have been hiring graduates in BCom, MSc, BSc, MCA etc apart from the usual engineers and MBAs says NASSCAM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X