ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಂಗಪಟ್ಟಣ: ದೇಗುಲ ಕಳಶ ಕುಸಿತ, ಆತಂಕ ಬೇಡ

By Mahesh
|
Google Oneindia Kannada News

Ranganatha temple kalasha falls
ಶ್ರೀರಂಗಪಟ್ಟಣ, ಮಾ.4: ಕಳೆದ ವಾರ ಇಲ್ಲಿನ ರಂಗನಾಥ ಸ್ವಾಮಿ ದೇಗುಲದ ಗೋಪುರದ ಕಳಶವನ್ನು ಕಳಚಿ ಬಿದ್ದಿತ್ತು. ಈ ಬಗ್ಗೆ ಅನೇಕ ಗಾಳಿಸುದ್ದಿಗಳು ಹಬ್ಬಿ, ಪಟ್ಟಣಕ್ಕೆ ಆತಂಕ ಎದುರಾಗಲಿದೆ ಎನ್ನಲಾಗಿತ್ತು. ಆದರೆ, ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ಪ್ರಧಾನ ಅರ್ಚಕ ವಿಜಯ ಸಾರಥಿ ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಒಂದು ಕಳಶ ಬಿದ್ದಿತ್ತು. ನಂತರ ಮತ್ತೊಂದು ಪಂಚಲೋಹದ ಕಳಶ ಬಿದ್ದಿರುವುದು ಜನತೆಯಲ್ಲಿ ಭಯ ಹುಟ್ಟಿಸಿತ್ತು. ರಾಜಗೋಪುರದಲ್ಲಿ ಒಟ್ಟು 5 ಪಂಚಲೋಹದ ಕಳಶಗಳನ್ನು ಇದುವರೆವಿಗೂ ಕಾಣಬಹುದಾಗಿತ್ತು.

ಗಂಗರ ಕಾಲದ ಅರಸ ತಿರಮಲರಾಯನ ಕಾಲದಲ್ಲಿ ಕ್ರಿ.ಶ. 896ರಲ್ಲಿ ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ದೇವಾಲಯ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ.

ನಂತರ ಹೊಯ್ಸಳರು, ವಿಜಯನಗರದ ಕೊನೆಗಾಲದಲ್ಲಿ ತಿಮ್ಮಣ ನಾಯಕರ ಅಧೀನಕ್ಕೆ ದೇಗುಲ ಬರುತ್ತದೆ. ದೇಗುಲದ ರಾಜಗೋಪುರದ ನಿರ್ಮಾಣ ವಿಜಯನಗರದ ಆರಸರಿಂದ ಆಗಿದೆ ಎಂದು ನಂಬಲಾಗಿದೆ.

ಸುಮಾರು 800 ವರ್ಷ ಇತಿಹಾಸವುಳ್ಳ ದೇಗುಲವನ್ನು ನಂತರ ಮೈಸೂರು ಅರಸರು ಅಭಿವೃದ್ಧಿಪಡಿಸಿದರು. ದೇವಾಲಯಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅಂದಿನ ದೊರೆ ಟಿಪ್ಪು ಸುಲ್ತಾನ್ ದೇವಾಲಯವನ್ನು ಸಂರಕ್ಷಿಸಿ ದುರಸ್ತಿ ಮಾಡಿದ್ದ ಎಂಬುದಕ್ಕೆ ದಾಖಲೆಗಳಿದೆ.

ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಒಮ್ಮೆ ರಾಜಗೋಪುರಕ್ಕೆ ದುರಸ್ತಿ ಮಾಡಲಾಗಿತ್ತು. ನಂತರ ಈ ವರೆಗೂ ಯಾವುದೇ ರಿಪೇರಿ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಶಿಥಿಲಗೊಂಡಿದ್ದ ಕಳಶ ಕಳಚಿಬಿದ್ದಿದೆ ಎನ್ನಲಾಗಿದೆ.

ನಾಡಿನಲ್ಲಿ ಮುಂಬರುವ ಬರ, ಕ್ಷಾಮದ ಮುನ್ಸೂಚನೆ ಇದಾಗಿದ್ದು, ಕಾವೇರಿ ತಪ್ಪಲಿನ ನಾಡಿಗೆ ಕಷ್ಟದ ದಿನಗಳು ಎದುರಾಗಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ದೇಗುಲದ ಕಳಶಗಳನ್ನು ನಾಲ್ಕೈದು ತಿಂಗಳಿನಲ್ಲಿ ಮೊದಲ ಸ್ಥಿತಿಗೆ ತರುತ್ತೇವೆ ಎಂದು ಭಾರತೀಯ ಸರ್ವೇಕ್ಷಣ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಉಳಿದ ಕಳಶಗಳ ರಿಪೇರಿ ಕೂಡಾ ಕೈಗೆತ್ತಿಕೊಳ್ಳಲಾಗುವುದು ಎಂದು ದೇಗುಲದ ಕಾರ್ಯಕಾರಿ ಅಧಿಕಾರಿ ಧನಲಕ್ಷ್ಮಿ ಹೇಳಿದ್ದಾರೆ.

ಹೋಮ, ಹವನ, ಶಾಂತಿ, ದೋಷ ಪರಿಹಾರ ಪೂಜೆ ಪುನಸ್ಕಾರ ಮಾಡುವ ಮೂಲಕ ದೇವರನ್ನು ಸಂತುಷ್ಟಗೊಳಿಸಬೇಕಿದೆ. ಭಕ್ತಾದಿಗಳು ನಿರಾಂತಕವಾಗಿ ದೇಗುಲಕ್ಕೆ ಬರಬಹುದಾಗಿದೆ ಎಂದು ಅರ್ಚಕ ವಿಜಯ ಸಾರಥಿ ಕೋರಿದ್ದಾರೆ. ನೀವು ಇನ್ನೂ ಶ್ರೀರಂಗಪಟ್ಟಣ ನೋಡಿಲ್ಲವೆಂದರೆ ಇಲ್ಲಿದೆ ಮಾರ್ಗ ಸೂಚಿ

English summary
Two of the five kalashas of the ninth century Sri Ranganathaswamy temple in Srirangapatna near here fell off and broke into three pieces.SriRangapatna Town Worried whether this will harm the public
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X