ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ 'ಕೈ'ಜೋಡಿಸಿದ್ದಕ್ಕೇ ಯಡಿಯೂರಪ್ಪಗೆ ಸಿಬಿಐ ಉರುಳು

By Srinath
|
Google Oneindia Kannada News

ಬೆಂಗಳೂರು, ಮಾ.4: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಮತ್ತು ಕಾಂಗ್ರೆಸ್ ನಡುವಣ ಸಮಝೋತಾ ಬಗ್ಗೆ ಬಹುತೇಕ ಎಲ್ಲ ನಾಯಕರು ತಮ್ಮ ಶಕ್ತ್ಯಾನುಸಾರ ಮಾತನಾಡುತ್ತಿದ್ದಾರೆ. ಕೆಜೆಪಿ + ಕಾಂಗ್ರೆಸ್ ಎಷ್ಟರಮಟ್ಟಿಗೆ ನಿಜವೂ ಖುದ್ದು ಸೋನಿಯಾ ಗಾಂಧಿ ಅವರೇ ಸ್ಪಷ್ಟಪಡಿಸಬೇಕು. ಆದರೂ...

ಕೆಜೆಪಿ ಜತೆ ಯಾರೆಲ್ಲ 'ಕೈ' ಜೋಡಿಸ್ತಾರೆ

ಕೆಜೆಪಿ ಜತೆ ಯಾರೆಲ್ಲ 'ಕೈ' ಜೋಡಿಸ್ತಾರೆ

ಕಳೆದ ವಾರ ಪ್ರಚಾರ ಸಭೆಯೊಂದರ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಯುದ್ಧ ಗೆದ್ದ ಉತ್ಸಾಹದಲ್ಲಿ ಮಾತನಾಡುತ್ತಾ, ನೋಡ್ತಿರಿ ಕೆಜೆಪಿ ಜತೆ ಯಾರೆಲ್ಲ 'ಕೈ' ಜೋಡಿಸ್ತಾರೆ ಎಂಬ ನಿಗೂಢ ಮಾತನ್ನಾಡಿದರು. ಇದರಿಂದ ಗೊಂದಲ ಮತ್ತಷ್ಟು ಹೆಚ್ಚಾಯಿತು. ಕೆಜೆಪಿ ಮತ್ತು ಕಾಂಗ್ರೆಸ್ ಒಂದಾಗುವುದು ಮತದಾರನಿಗೆ ಅರ್ಥವಾಗದಿದ್ದರೂ ಚುನಾವಣೆ ಹೊಸ್ತಿಲಲ್ಲಿರುವ ರಾಜಕೀಯ ಪಕ್ಷಗಳಿಗೆ ಈ ವಿಷಯ ರಾಜಕೀಯ ದಾಳವಾಗಿ ಬಳಸುತ್ತಿವೆ.

ಬಿಜೆಪಿ ಕಾಂಗೈ ಒಂದಾಗಿ ಸಿಬಿಐ ಭೂತ ಸೃಷ್ಟಿ

ಬಿಜೆಪಿ ಕಾಂಗೈ ಒಂದಾಗಿ ಸಿಬಿಐ ಭೂತ ಸೃಷ್ಟಿ

ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ. ಬಿಜೆಪಿ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಯಡಿಯೂರಪ್ಪನವರನ್ನು ಸಿಬಿಐ ಜಾಲಕ್ಕೆ ಸಿಲುಕಿಸುವ ಕುತಂತ್ರ ನಡೆಸಿದೆ ಎಂದು ಆರೋಪಿಸಿದರೆ ಅದನ್ನು ಜಗದೀಶ್ ಶೆಟ್ಟರ್ ಒಪ್ಪುತ್ತಾರೆಯೇ? ಎಂಬುದು ಶೋಭಾ ಅವರ ವಾದ. ಅಷ್ಟಕ್ಕೂ ಯಡಿಯೂರಪ್ಪನವರಿಗೇನೂ ಸಿಬಿಐ ಭಯವಿಲ್ಲ ಎಂದೂ ಮೇಡಂ ಶೋಭಾ ಹೇಳಿದ್ದಾರೆ.

ಆಗದ ಮಾತು ಬಿಡಿ: ಪರಮೇಶ್ವರ್

ಆಗದ ಮಾತು ಬಿಡಿ: ಪರಮೇಶ್ವರ್

ಇನ್ನು ಜನಶ್ರೀ ನ್ಯೂಸ್ ಚಾನೆಲ್ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರು ಕೆಜೆಪಿ ಜತೆ ಕಾಂಗ್ರೆಸ್ ಕೈಜೋಡಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಅದೆಲ್ಲ ಸುಮ್ಮನೆ ಗಾಳಿಸುದ್ದಿ. ಕೆಪಿಸಿಸಿ ಅಧ್ಯಕ್ಷನಾಗಿ ಅಂತಹ ಸಾಧ್ಯತೆ ಬಗ್ಗೆ ನನ್ನ ಬಳಿ ಯಾರೂ ಚರ್ಚಿಸಿಯೂ ಇಲ್ಲ. ಅದೆಲ್ಲ ಆಗದ ಮಾತು ಬಿಡಿ.

ಶೆಟ್ರನ್ನ ಸಿಎಂ ಮಾಡಿದ್ದು ಯಾರು ಗೊತ್ತಾ?

ಶೆಟ್ರನ್ನ ಸಿಎಂ ಮಾಡಿದ್ದು ಯಾರು ಗೊತ್ತಾ?

ಸಿಬಿಐ ಭಯದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೈಹಿಡಿದಿದ್ದಾರೆ ಎಂದಿರುವ ಜಗದೀಶ್ ಶೆಟ್ಟರ ಬಗ್ಗೆ ಮಾಜಿ ಬಿಜೆಪಿ ಶೋಭಾ ಕರಂದ್ಲಾಜೆ ಕೆಂಡಕಾರಿದ್ದಾರೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎನ್ನುವುದನ್ನು ಶೆಟ್ಟರ್ ಮರೆಯಬಾರದು. ಯಡಿಯೂರಪ್ಪ ಇಲ್ಲದಿದ್ದರೆ ಸಿಎಂ ಆಗುತ್ತಿದ್ದರೇ? ಎಂದು ಪ್ರಶ್ನಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Congress wont join hands with Former Karnataka chief minister BS Yeddyurappa lead the Karnataka Janata Party (KJP) in Karnataka elections clarified the KPCC president Parameswar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X