ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಮಂಗಲ ಪ್ರಶ್ನೆಗೂ ಮಠಕ್ಕೂ ಸಂಬಂಧವಿಲ್ಲ

By Mahesh
|
Google Oneindia Kannada News

Pejawar Seer
ಉಡುಪಿ, ಮಾ.3: ಅಷ್ಟಮಂಗಲ ಪ್ರಶ್ನೆಗೂ ಅಷ್ಟಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ದೊರೆದ ಉತ್ತರದ ಪ್ರಕಾರ ಮೇ ತಿಂಗಳಿನಲ್ಲಿ ಉಡುಪಿಗೆ ಆಪತ್ತು ಬರಲಿದೆ ಎನ್ನಲಾಗಿತ್ತು. ಆದರೆ, ಕಷ್ಟಕ್ಕೆ ಪರಿಹಾರ ಇದ್ದೇ ಇರುತ್ತದೆ ಆತಂಕ ಬೇಡ ಎಂದು ಶ್ರೀಗಳು ಹೇಳಿದರು.

"ಅಷ್ಟಮಂಗಲ ಪ್ರಶ್ನೆ ನಡೆದದ್ದು ಶ್ರೀಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಕುರಿತು. ಪ್ರಶ್ನೆಗೂ ಶ್ರೀಕೃಷ್ಣಮಠಕ್ಕೂ ಅಥವಾ ಅಷ್ಟಮಠಗಳಿಗೂ ಯಾವುದೇ ಸಂಬಂಧವಿಲ್ಲ. ಶ್ರೀಪುತ್ತಿಗೆ ಮಠಾಧೀಶರು ಆಡಳಿತೆದಾರರಾಗಿ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಪ್ರಶ್ನೆ ಇರಿಸಿದ್ದಾರೆ. ಪ್ರಶ್ನೆಯಲ್ಲಿ ಬಂದ ವಿಚಾರಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಹೇಳಿದರು.

ಸಾಮಾನ್ಯವಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ದೋಷಗಳ ಮಾಹಿತಿಗಳು ಬರುತ್ತವೆ. ಎಲ್ಲದಕ್ಕೂ ಪರಿಹಾರಗಳೂ ಇರುತ್ತವೆ. ಇಲ್ಲಿಯೂ ದೋಷ ಕಂಡುಬಂದರೆ ಪರಿಹಾರಗಳನ್ನು ಮಾಡಿಸಲಾಗುವುದು ಎಂದು ಪೇಜಾವರಶ್ರೀ ಹೇಳಿದ್ದಾರೆ.

ವಿದ್ಯುತ್ ಸ್ಥಾವರಕ್ಕೆ ವಿರೋಧ : ನಿಡ್ಡೋಡಿ ಬಳಿ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸುವ ಪ್ರಸ್ತಾವಕ್ಕೆ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ವಿರೋಧ ಸೂಚಿಸಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಂಡು ದನಿ ಎತ್ತಬೇಕು. ಸರಕಾರ ಮತ್ತು ಪಕ್ಷಗಳನ್ನು ದೂಷಿಸುವ ಬದಲು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು. ಜನರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸುವುದೆಂದರೆ ಜನರ ಬದುಕಿನ ಪ್ರಶ್ನೆ. ಮಾರಕ ಸ್ಥಾವರ ಆರಂಭವಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆ ಈಗಾಗಲೇ ಯುಪಿಸಿಎಲ್ ಹಾರುಬೂದಿ ಯಿಂದ ಹಾನಿಗೊಳಗಾಗಿದೆ ಎಂದರು.

English summary
Ashtamangala Prasna asked by Puttige Mutt official is about the renovation of temples it is not connected to Udupi Krishna Mutt. If there is any flaws as indicated by Prashna can be solved said Pejawar Seer Vishshweshathirtha Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X