ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 'ಬೆಗ್ಗರ್' ವರ್ಷಕ್ಕೆ ಗಳಿಸೋದು 55 ಲಕ್ಷ ರೂಪಾಯಿ!

By Srinath
|
Google Oneindia Kannada News

 New York Lexington beggar Gary Thompson earns 100000 dollars per year
ನ್ಯೂಯಾರ್ಕ್, ಮಾ.01: ಇದ್ದರೆ ಹೀಗಿರಬೇಕಪ್ಪಾ ಅನ್ನುವಷ್ಟು ಸಿರಿವಂತನಾಗಿದ್ದಾನೆ ನ್ಯೂಯಾರ್ಕ್ ಮಹಾನಗರದ ಈ ಮಹಾ ಭಿಕ್ಷುಕ!

ಲೆಕ್ಸಿಂಗ್ ಟನ್ ಬಳಿ ವೀಲ್ ಚೇರಿನಲ್ಲಿ ವಿರಾಜಮಾನನಾಗುವ ಸದರಿ ಭಿಕ್ಷುಕ (?) ಏನಿಲ್ಲಾಂದ್ರೂ ವರ್ಷಕ್ಕೆ 1,00,000 US $ ಅಂದರೆ 54,63,281 ರೂಪಾಯಿ ಗಳಿಸುತ್ತಾನಂತೆ. ಆದರೆ ಅವನಿಗಿನ್ನೂ 30 ವರ್ಷ ಅಷ್ಟೇ!

ಗ್ಯಾರಿ ಥಾಂಪ್ಸನ್ ಎಂಬ ಈ ವ್ಯಕ್ತಿಗೆ ಕಾಲುಗಳು ಸ್ವಾಧೀನವಿಲ್ಲ. ಆದರೆ ಉಳಿದೆಲ್ಲ ಅಂಗಾಂಗಳು ಈತನ ಅಧೀನದಲ್ಲೇ ಇವೆ. ಗ್ಯಾರಿ ಮಾನಸಿಕವಾಗಿಯೂ ಸದೃಢ. ಆದರೆ ತನಗೆ ಮಾನಸಿಕ ಅಸ್ವಾಸ್ಥ್ಯ ಇದೆಯೆಂದೂ ಮಾತು ತೊದಲುವಿಕೆಯೂ ಇದೆಯೆಂದು ಕಂಡಕಂಡಲ್ಲಿ ಬೇಡುತ್ತಾ ಭರ್ಜರಿಯಾಗಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ.

WLEX TV ಮಂದಿ ಇವನ ಮುಖಕ್ಕೆ ಕ್ಯಾಮರಾ ಹಿಡಿದಾಗ 'ಓಹೋ, ನಿಮಗೆ ಸಿಕ್ಕಿಹಾಕಿಕೊಂಡುಬಿಟ್ಟೆ. ಆದರೂ ನಿಜಕ್ಕೂ ಗ್ರೇಟ್ ಅನಿಸುತ್ತದೆ, ಹೀಗೆ ಭಿಕ್ಷೆ ಬೇಡಿಕೊಂಡು ಜೀವನ ಕಳೆಯಲು' ಎಂದು ನಗೆಯಾಡಿದ್ದಾನೆ. ಆದರೆ ಗ್ಯಾರಿಗೆ ಭಿಕ್ಷೆ ಹಾಕುವವರಿಗೆ ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. 'ಇಂಥಹವನಿಗಾ ನಾವು ಅಯ್ಯೋ ಪಾಪ ಅಂತ ಮರುಕಪಟ್ಟಿದ್ದು' ಎಂದು ಪ್ರಾಯಶ್ಚಿತ್ತದ ದನಿಯಲ್ಲಿ ಜನ ಕೆಂಡಾಮಂಡಲ ಆಗಿದ್ದಾರೆ.

ಗ್ಯಾರಿ ಮೂಲತಃ ಟೆಕ್ಸಾಸಿನ ಆಸ್ಟಿನ್ ನಗರದವನು. 20 ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾನೆ. ಅವನ ತಾಯಿ ಹೋಂಡಾ ಕಾರು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿ, 25 ಲಕ್ಷ ಡಾಲರ್ ಹಣ ಪೀಕಿದಳು. ಆದರೆ ಅದೆಲ್ಲಾ ಯಾವಾಗಲೋ ಖರ್ಷಾಗಿ ಹೋಯಿತು ಎನ್ನುತ್ತಾನೆ ಗ್ಯಾರಿ.

ಕುತೂಹಲದ ಸಂಗತಿಯೆಂದರೆ speech pathology ವಿಷಯದಲ್ಲಿ ಪದವಿ ಗಳಿಸಿರುವ ಈ ಯುವ ಭಿಕಾರಿ ಅಲ್ಲಿ ಕಲಿತದ್ದನ್ನೇ ಬಳಸಿಕೊಂಡು, ಜನರನ್ನು ಸುಲಭವಾಗಿ ಬೇಸ್ತು ಬೀಳಿಸಿ, ಭಿಕ್ಷೆ (panhandling) ಪಡೆಯುತ್ತಾನೆ. ಈಗಾಗಲೇ ಎರಡ್ಮೂರು ಬಾರಿ ಪೊಲೀಸರು ಬಂಧಿಸಿದ್ದಾರೆ. ಆದರೆ ನನಗೆ ಈ ಜಾಗ ಬಿಟ್ಟು ಹೋಗಲು ಸುತರಾಂ ಇಷ್ಟವಿಲ್ಲ ಎಂದು ಕಣ್ಮಿಟಿಕಿಸುತ್ತಾನೆ ಭಡವ. ಯಾವುದಕ್ಕೇ ಆಗಲಿ, ಇವನನ್ನೊಮ್ಮೆ ನೋಡಿಬಿಡಿ ಮೇಲಿನ ಚಿತ್ರದಲ್ಲಿದ್ದಾನೆ.

English summary
New York Lexington beggar Gary Thompson earns 100000 dollars per year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X